Advertisement

ಸರ್ಕಾರದ ವಿರುದ್ಧ ನಿರಂತರ ಹೋರಾಟ: ಮಹಮದ್ ನಲಪಾಡ್

03:47 PM Apr 10, 2022 | Team Udayavani |

ಹುಬ್ಬಳ್ಳಿ: ಜನರ ಪಿಕ್ ಪಾಕೆಟ್ ಮಾಡುವ ಸರಕಾರದ ವಿರುದ್ಧ ನಿರಂತರ ಹೋರಾಟ ಇರುತ್ತದೆ. ಸ್ವಾತಂತ್ರಕ್ಕಾಗಿ ಹೋರಾಡಿದ ಪಕ್ಷ ಕಾಂಗ್ರೆಸ್, ಇದೀಗ ಜನರ ಹಗಲು ದರೋಡೆಗೆ ಇಳಿದಿರುವ ಸರಕಾರದ ವಿರುದ್ಧ ಹೋರಾಟ ನಡೆಸಲಿದೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎಂದು ಮಹಮದ್ ನಲಪಾಡ್ ಹೇಳಿದರು‌.

Advertisement

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ನಿಂದಾಗಿ ಜನರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಬಿಜೆಪಿ ಜನ ವಿರೋಧಿ ಸರಕಾರ ಎಂಬುವುದು ಸಾಬೀತಾಗಿದೆ. ಜನರು ಕೂಡ ಈ ಸರಕಾರಗಳ ವಿರುದ್ಧಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲಾ ಮಟ್ಟದ ನಂತರ ಬ್ಲಾಕ್ ಮಟ್ಟದಲ್ಲಿ ಹೋರಾಟಗಳನ್ನು ಪಕ್ಷ ಹಮ್ಮಿಕೊಂಡಿದ್ದು, ಬೆಲೆ ಇಳಿಕೆಯಾಗುವವರೆಗೂ ಈ ಹೋರಾಟಗಳು ನಿರಂತರವಾಗಿದೆ ಎಂದರು.

ಹಿಜಾಬ್, ಹಲಾಲ್, ಅಜಾನ್ ಇವುಗಳನ್ನು ಪಾಲನೆ ಮಾಡುವವರಿಗೆ ಏನಾದರೂ ಬೆಲೆ ಕಡಿಮೆಯಿದೆಯೇ? ಎಲ್ಲರಿಗೂ ದುಬಾರಿ ಬೆಲೆ. ಬೆಲೆ ಏರಿಕೆಯನ್ನು ಜನರಿಂದ ಮರೆ ಮಾಚುವ ಕಾರಣಕ್ಕೆ ಧರ್ಮದ ವಿಚಾರಗಳನ್ನು ಹರಿಬಿಟ್ಟು ಸಾಮಾನ್ಯರ ನಡುವೆ ಗೊಂದಲ ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ. ಪ್ರಜ್ಞಾವಂತ ಜನರು ಈ ಕುತಂತ್ರವನ್ನು ಅರಿತಿದ್ದಾರೆ ಎಂದರು.

ಇದನ್ನೂ ಓದಿ:ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆಗೆ ಪಶ್ಚಾತ್ತಾಪವಿಲ್ಲ: ಕಾಳಿಚರಣ್

ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಅರ್ಧ ಜ್ಞಾನ ಇರಬೇಕು. ಹೀಗಾಗಿ ಪ್ರತಿಯೊಂದು ವಿಚಾರಗಳನ್ನು ರಾಜಕೀಯಕ್ಕೆ ಬಳಿಸಿಕೊಳ್ಳುವ ಮನಸ್ಥಿತಿಯಿದೆ. ದೇಶದಲ್ಲಿಯೇ ನಂಬರ್ ಪೊಲೀಸ್ ಇಲಾಖೆ ಕರ್ನಾಟಕದ್ದು ಎನ್ನುವ ಹೆಗ್ಗಳಿಕೆ ಹೊಂದಿದೆ. ಪೊಲೀಸ್ ಅಧಿಕಾರಿಗಳನ್ನು ಕೇಳಿ ಮಾತನಾಡಬೇಕಿತ್ತು. ಇಲಾಖೆ ಮುಖ್ಯಸ್ಥರಾಗಿ ಬೆಳಿಗ್ಗೆ ಒಂದು ಹೇಳಿಕೆ ನೀಡಿ, ಸಂಜೆ ವೇಳೆ ತಲೆ ಕೆರೆದುಕೊಳ್ಳುತ್ತಾ ಹೇಳಿಕೆ ನೀಡುವುದು ಎಷ್ಟು ಸರಿ ಎಂದು ವ್ಯಂಗ್ಯವಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next