Advertisement

ಪಾಟ್ನಾ ಸಾಹೀಬ್‌ನಿಂದಲೇ ಸ್ಪರ್ಧೆ ; ಬಿಜೆಪಿಗೆ ಸೆಡ್ಡು ಹೊಡೆದ ಶತ್ರು!

03:21 PM Mar 07, 2019 | Team Udayavani |

ಲಕ್ನೋ: ಬಿಜೆಪಿ ನಾಯಕರೊಂದಿಗಿನ ತೀವ್ರ ಭಿನ್ನಾಭಿಪ್ರಾಯದ ಹೊರತಾಗಿಯೂ ಬಿಜೆಪಿ ಬಂಡಾಯ ಸಂಸದರಾಗಿರುವ ಶತ್ರುಘ್ನ ಸಿನ್ಹಾ  ಅವರು ಈ ಚುನಾವಣೆಯಲ್ಲಿ  ಪಾಟ್ನಾ ಸಾಹೀಬ್‌ ಲೋಕಸಭಾ ಕ್ಷೇತ್ರದಿಂದಲೇ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. 

Advertisement

ಪರಿಸ್ಥಿತಿ ಏನೇ ಆದರೂ , ಪಕ್ಷದ ನಿರ್ಧಾರ ಯಾವುದೇ ಆಗಿರಲಿ ,ನಾನು ಪಾಟ್ನಾ ಸಾಹೀಬ್‌ ಕ್ಷೇತ್ರದಿಂದಲೆ ಕಣಕ್ಕಿಳಿಯುತ್ತೇನೆ ಎಂದು ಶತ್ರುಘ್ನ ಸಿನ್ಹಾ  ಫೋನ್‌ನಲ್ಲಿ ಹೇಳಿಕೆ ನೀಡಿದ್ದಾರೆ. 

2015 ರ ಬಿಹಾರ ವಿಧಾನಸಭಾ ಚುನಾವಣೆ ಬಳಿಕ ಶತ್ರುಘ್ನ ಸಿನ್ಹಾ ನಿರಂತರವಾಗಿ ಬಿಜೆಪಿ ವಿರುದ್ಧ ಹೇಳಿಕೆ ನೀಡುತ್ತಲೆ ಬಂದಿದ್ದಾರೆ. ನೋಟು ನಿಷೇಧ, ಜಿಎಸ್‌ಟಿ ನಿರ್ಧಾರವನ್ನು ಬಹಿರಂಗವಾಗಿ ವಿರೋಧಿಸಿದ್ದರು. ಮಾತ್ರವಲ್ಲದೆ ಕೋಲ್ಕತಾದಲ್ಲಿ ವಿಪಕ್ಷಗಳ ಬಿಜೆಪಿ ವಿರೋಧಿ ಸಮಾವೇಶದಲ್ಲೂ  ವೇದಿಕೆ ಹಂಚಿಕೊಂಡು ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. 

ಇತ್ತೀಚೆಗೆ ಸಮಾಜವಾದಿ ಪಕ್ಷದ ನಾಯಕ ಅಖೀಲೇಶ್‌ ಯಾದವ್‌ ಅವರೊಂದಿಗೆ ಮಾತುಕತೆಯನ್ನೂ ನಡೆಸಿದ್ದರು. ಪತ್ನಿ ಪೂನಮ್‌ ಸಿನ್ಹಾ ಅವರು ಉತ್ತರ ಪ್ರದೇಶದಿಂದ ರಾಜಕೀಯ ಆರಂಭಿಸುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈ ಸುದ್ದಿಯನ್ನು ಶತ್ರುಘ್ನ ಸಿನ್ಹಾ ಅವರು ಒಪ್ಪಿಯೂ ಇರಲಿಲ್ಲ, ಅಲ್ಲಗಳೆಯಲೂ ಇಲ್ಲ.ಪೂನಮ್‌ ಸಿನ್ಹಾ ಅವರು ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next