Advertisement

Kashmir 370ನೇ ವಿಧಿ ಮರುಜಾರಿ ಕಾಂಗ್ರೆಸ್‌ ಒಪ್ಪುವುದೇ: ಸುನಿಲ್‌ ಪ್ರಶ್ನೆ

01:18 AM Aug 25, 2024 | Team Udayavani |

ಬೆಂಗಳೂರು: ನ್ಯಾಶನಲ್‌ ಕಾನ್ಫರೆನ್ಸ್‌ ಜತೆ ಹೊಂದಾಣಿಕೆ ಮಾಡಿಕೊಂಡಿರುವ ಕಾಂಗ್ರೆಸ್‌ ಕಾಶ್ಮೀರದಲ್ಲಿ 370ನೇ ವಿಧಿ ಮರುಜಾರಿ ಮಾಡುವ ನ್ಯಾಶನಲ್‌ ಕಾನ್ಫರೆನ್ಸ್‌ನ ಪ್ರಣಾಳಿಕೆಯನ್ನು ಒಪ್ಪುತ್ತದೆಯೇ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್‌ ಕುಮಾರ್‌ ಪ್ರಶ್ನಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ 2 ಕಾನೂನು ಜಾರಿಗೊಳಿಸಲು ನಿಮ್ಮ ಒಪ್ಪಿಗೆ ಇದೆಯೇ? ದೇಶದಲ್ಲಿ 2 ಧ್ವಜ ಮಾಡಲು ಸಮ್ಮತಿಸುವುದೇ ಎಂಬುದನ್ನು ಕಾಂಗ್ರೆಸ್‌ ಸ್ಪಷ್ಟಪಡಿಸಬೇಕು. ದೇಶದ ಜನರ ಹಲವು ಪ್ರಶ್ನೆಗಳಿಗೆ ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್‌ ಪಕ್ಷ ಉತ್ತರ ಕೊಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next