ಪಣಜಿ: ನನ್ನ ತಂದೆಯವರೊಂದಿಗೆ ಕೆಲಸ ಮಾಡಿದ ಪಣಜಿ ವಿಧಾನಸಭಾ ಕ್ಷೇತ್ರದ ಎಲ್ಲ ಬಿಜೆಪಿ ನಾಯಕರು ನನ್ನೊಂದಿಗೆ ಪ್ರಚಾರ ನಡೆಸುತ್ತಿದ್ದಾರೆ ಎಂದು ಕೇಂದ್ರದ ಮಾಜಿ ರಕ್ಷಣಾ ಸಚಿವ ದಿ. ಮನೋಹರ್ ಪರ್ರಿಕರ್ ರವರ ಪುತ್ರ ಉತ್ಪಲ್ ಪರ್ರಿಕರ್ ಹೇಳಿದ್ದಾರೆ.
ಬಿಜೆಪಿ ಗೋವಾ ಚುನಾವಣಾ ಉತ್ಸುವಾರಿ ದೇವೇಂದ್ರ ಫಡ್ನವೀಸ್ ರವರು “ಕೇವಲ ನಾಯಕರ ಮಗ ಎಂಬ ಕಾರಣಕ್ಕೆ ಯಾರಿಗೂ ಟಿಕೇಟ್ ಸಿಗುವುದಿಲ್ಲ” ಎಂಬ ಹೇಳಿಕೆಗೆ ಉತ್ಪಲ್ ಪರ್ರಿಕರ್ ಈ ಪ್ರತಿಕ್ರಿಯೆ ನೀಡಿದರು.
ನಾನು ಪಕ್ಷದ ಸಣ್ಣ ಕಾರ್ಯಕರ್ತ, ದೇವೇಂದ್ರ ಫಡ್ನವೀಸ್ ರವರಂತಹ ಹಿರಿಯ ನಾಯಕರ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಆದರೆ ನಾನು ಮನೋಹರ್ ಪರೀಕರ್ ರವರ ಮಗ ಎಂಬ ಕಾರಣಕ್ಕೆ ಟಿಕೆಟ್ ಕೇಳುವುದಿದ್ದರೆ ಕಳೆದ ಚುನಾವಣೆಯಲ್ಲಿಯೇ ನಾನು ಒತ್ತಾಯಿಸುತ್ತಿದ್ದೆ ಎಂದರು.
ದಿ.ಪರೀಕರ್ ರವರು ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲಿ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಗೆ ನೀವು ಟಿಕೆಟ್ ನೀಡುತ್ತೀರಾ? ಎಂದು ಅವರು ಪ್ರಸ್ತುತ ಅತ್ಯಾಚಾರ ಪ್ರಕರಣವೊಂದರಲ್ಲಿ ವಿಚಾರಣೆ ಎದುರಿಸುತ್ತಿರುವ ಪಣಜಿ ಕ್ಷೇತ್ರದ ಬಿಜೆಪಿ ಶಾಸಕ ಬಾಬುಶ್ ಮೊನ್ಸೆರಾತ್ ರವರನ್ನು ಉಲ್ಲೇಖಿಸಿ ಹೇಳಿದರು.
Related Articles
ಇದು ಕೇವಲ ಪಣಜಿಗೆ ಸಂಬಂಧಿಸಿದ್ದಲ್ಲ. ಗೋವಾದಲ್ಲಿ ನಡೆಯುತ್ತಿರುವ ರಾಜಕೀಯ ಪರಿಸ್ಥಿತಿ ಸ್ವೀಕಾರಾರ್ಹವಲ್ಲ, ಇದು ಬದಲಾಗಬೇಕು ಎಂದು ಉತ್ಪಲ್ ಪರೀಕರ್ ನುಡಿದರು.