Advertisement

ಕಟ್ಟಡ ಕಾಮಗಾರಿಗೆ ಮುಕ್ತಿ ಎಂದು?

04:25 PM Jun 19, 2018 | |

ನಾಲತವಾಡ: ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಮನಸೋ ಇಚ್ಚೆ ಕಾಮಗಾರಿ ಪರಿಣಾಮ ಸ್ಥಳೀಯ ಸರಕಾರಿ ಉದ್ಯೋಗ ಹಾಗೂ ತರಬೇತಿ ಕೇಂದ್ರದ ಐಟಿಐ ವಿಭಾಗದ ಎರಡು ಕೊಠಡಿಗಳ ನಿರ್ಮಾಣ ಶುರುವಾಗಿ 4 ವರ್ಷವಾದರೂ ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ.

Advertisement

 ಸ್ಥಳೀಯ ಸರಕಾರಿ ಮಹಿಳಾ  ಐಟಿಐ ಕಾಲೇಜಿಗೆ ಸಂಬಂಧಿಸಿದ ಫಿಟ್ಟರ್‌ ಮತ್ತು ಎಲೆಕ್ಟ್ರಿಕಲ್‌ ತರಬೇತಿಗೆಂದು ವಿಶಾಲ ಕೊಠಡಿಗಳ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದು 38 ಲಕ್ಷ ರೂ. ಮಂಜೂರಾಗಿದೆ. 2014ರಲ್ಲೇ ಭೂಮಿ ಪೂಜೆಯೊಂದಿಗೆ ಕಟ್ಟಡ ಕಾಮಗಾರಿ ಕೈಗೊಳ್ಳಲಾಗಿದೆ. ದುರಂತವೆಂದರೆ 4 ವರ್ಷಗಳು ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಸುತ್ತಲೂ ಗಿಡ ಗಂಟಿಗಳು ತಲೆ ಎತ್ತಿವೆ.

ಮೂವರು ಗುತ್ತಿಗೆದಾರರು: ಕಾಮಗಾರಿ ಪೂರ್ಣಗೊಳಿಸಲು ಕೆಲ ತೊಂದರೆಗಳು ಬಂದ ಹಿನ್ನೆಲೆ 38 ಲಕ್ಷದ ಕಾಮಗಾರಿಗೆ ಒಟ್ಟು ಮೂವರು ಗುತ್ತಿಗೆದಾರರು ಕೈ ಹಾಕಿದರೂ ಈವರೆಗೂ ಪೂರ್ಣಗೊಳ್ಳುವ ಮುಹೂರ್ತ ಮಾತ್ರ ಕೂಡಿ ಬರುತ್ತಿಲ್ಲ. ಪರಿಣಾಮ ನೂತನ ಕೊಠಡಿಯಲ್ಲಿ ತರಬೇತಿ ಪಡೆಯಬೇಕು ಎಂದು ಕೊಂಡಿದ್ದ ವಿದ್ಯಾರ್ಥಿಗಳಿಗೆ ನಿರಾಶೆಯುಂಟಾಗಿದೆ.

ಅರ್ಧಕ್ಕೆ ನಿಂತ ಕೆಲಸ: ಒಟ್ಟು ಎರಡು ಪ್ರತ್ಯೇಕ ವಿಶಾಲ ಕೊಠಡಿಗಳನ್ನು ನಿರ್ಮಿಸಲಾಗಿದೆ. ಕಿಟಿಗಳನ್ನು ಅಳವಡಿಸಿದ್ದು
ಪ್ರಮುಖವಾಗಿ ಶೆಟರ್ ಅಳವಡಿಸಿಲ್ಲ, ವಿದ್ಯುತ್‌ ಸಂಪರ್ಕ ಕಲ್ಪಿಸಿಲ್ಲ. ತರಬೇತಿ ಕೇಂದ್ರಗಳು ಸದ್ಯ ಹಂದಿ ನಾಯಿಗಳ
ತಾಣವಾಗಿದೆ. ಒಂದು ವರ್ಷದಲ್ಲೇ ಕಾಮಗಾರಿ ಮುಗಿಸುವ ನಿಯಮ ಇತ್ತು ಎಂದು ಹೇಳಲಾಗಿದ್ದು ಮೊದಲ ಬಾರಿಗೆ ಗುತ್ತಿಗೆ ಪಡೆದ ಗುತ್ತಿಗೆದಾರರು ಮರಣ ಹೊಂದಿದ ಪರಿಣಾಮ ಬೇರೆಯವರಿಗೆ ನಿರ್ಮಿಸಲು ಗುತ್ತಿಗೆ ಕೊಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದು ಈವರೆಗೂ ಕಟ್ಟಡ ಕಾಮಗಾರಿ ಪೂರ್ಣಗೊಳ್ಳದಿರುವುದು ದುರಂತ ಎನ್ನಬಹುದು. 

ಕಟ್ಟಡ ಕಾಮಗಾರಿಯಲ್ಲಿ ಗುತ್ತಿಗೆದಾರರೊಬ್ಬರ ಮರಣದ ನಂತರ ಕಾಮಗಾರಿ ವಿಳಂಬಗೊಂಡಿದೆ. ಇತರೆ ಇಬ್ಬರಿಗೆ ಗುತ್ತಿಗೆ ಕೊಟ್ಟರೂ ಪೂರ್ಣಗೊಳಿಸಲು ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದು ಅವರಿಗೆ ನೋಟಿಸ್‌ ನೀಡಲಾಗುವುದು.

Advertisement

ಅರುಣ ಪಾಟೀಲ, ಎಇಇ ಪಿಬ್ಲುಡಿ, ಮುದ್ದೇಬಿಹಾಳ

4 ವರ್ಷದಿಂದ ಗುತ್ತಿಗೆದಾರರ ಹಾಗೂ ಅಧಿಕಾರಿಗಳಿಗೆ ಶೀಘ್ರ ಕಟ್ಟಡ ಮುಗಿಸಿ ಕೊಡಿ ಎಂದು ಹೇಳಿ ಸಾಕಾಗಿದೆ. ಈಗಾಗಲೇ ಎಇಇ ಅವರಿಗೆ ಮತ್ತೇ ಪತ್ರ ಬರೆದಿದ್ದೇನೆ. ಇನ್ನೇನೆ ಇದ್ದರೂ ಈ ವಿಳಂಬಕ್ಕೆ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ. ಆದಷ್ಟು ಬೇಗನೆ ಪೂರ್ಣಗೊಳಿಸಲು ಒತ್ತಡ ತರುತ್ತೇನೆ.

 ಪಿ.ಎಚ್‌. ಮಸೂತಿ, ಪ್ರಾಚಾರ್ಯರರು, ಸರಕಾರಿ ಐಟಿಐ ನಾಲತವಾಡ

Advertisement

Udayavani is now on Telegram. Click here to join our channel and stay updated with the latest news.

Next