Advertisement

Microsoft Windows ಮುಖ್ಯಸ್ಥರಾಗಿ ಐಐಟಿ ಮದ್ರಾಸ್ ಪದವೀಧರ ಪವನ್ ದಾವುಲೂರಿ

03:01 PM Mar 27, 2024 | Team Udayavani |

ಹೊಸದಿಲ್ಲಿ: ಐಐಟಿ ಮದ್ರಾಸಿನ ಹಳೆಯ ವಿದ್ಯಾರ್ಥಿಯಾಗಿರುವ ಪವನ್ ದಾವುಲೂರಿ ಅವರು ಮೈಕ್ರೋಸಾಫ್ಟ್ ವಿಂಡೋಸ್ ಮತ್ತು ಸರ್ಫೇಸ್‌ನ ಹೊಸ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಅವರು ಗೂಗಲ್‌ನ ಸುಂದರ್ ಪಿಚೈ ಮತ್ತು ಮೈಕ್ರೋಸಾಫ್ಟ್‌ ನ ಸತ್ಯ ನಾಡೆಲ್ಲಾ ಅವರಂತಹ ಬಿಗ್ ಟೆಕ್ ಕಂಪನಿಯಲ್ಲಿ ನಾಯಕತ್ವದ ಪಾತ್ರವನ್ನು ವಹಿಸಿದ ಇತ್ತೀಚಿನ ಭಾರತೀಯರಾಗಿದ್ದಾರೆ.

Advertisement

ದೀರ್ಘಕಾಲ ಮುಖ್ಯಸ್ಥರಾಗಿದ್ದ ಪನೋಸ್ ಪನಾಯ್ ಅವರಿಂದ ಪವನ್ ದಾವುಲುರಿ ಅಧಿಕಾರ ವಹಿಸಿಕೊಂಡರು. ಈ ಹಿಂದೆ, ಪವನ್ ದಾವುಲುರಿ ಸರ್ಫೇಸ್ ಗುಂಪನ್ನು ಮೇಲ್ವಿಚಾರಣೆ ಮಾಡಿದ್ದರೆ, ಮಿಖಾಯಿಲ್ ಪರಾಖಿನ್ ವಿಂಡೋಸ್ ವಿಭಾಗದ ಮುಖ್ಯಸ್ಥರಾಗಿದ್ದರು. ಪರಖಿನ್ ಮತ್ತು ಪನಾಯ್ ಅವರು ತೊರೆದ ನಂತರ, ಅವರು ವಿಂಡೋಸ್ ಮತ್ತು ಸರ್ಫೇಸ್ ವಿಭಾಗಗಳನ್ನು ವಹಿಸಿಕೊಂಡಿದ್ದಾರೆ.

ದಾವುಲುರಿ ಮೈಕ್ರೋಸಾಫ್ಟ್‌ನಲ್ಲಿ 23 ವರ್ಷಗಳಿಂದ ಕೆಲಸ ಮಾಡಿದ್ದಾರೆ. ಸರ್ಫೇಸ್‌ ಗಾಗಿ ಪ್ರೊಸೆಸರ್‌ ಗಳನ್ನು ರಚಿಸಲು ಕ್ವಾಲ್ಕಾಮ್ ಮತ್ತು ಎಎಮ್‌ಡಿಯೊಂದಿಗೆ ಅದರ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next