ನವ ದೆಹಲಿ : ಜೂನ್ ನಲ್ಲಿ ಒಂಬತ್ತರಿಂದ 10 ಕೋಟಿ ಡೋಸ್ ಕೋವಿಶೀಲ್ಡ್ ತಯಾರಿಸಲು ಮತ್ತು ಪೂರೈಸಲು ಸಾಧ್ಯವಾಗುತ್ತದೆ ಎಂದು ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಸರ್ಕಾರಕ್ಕೆ ಮಾಹಿತಿ ನೀಡಿದೆ ಎಂದು ಅಧಿಕೃತ ಮೂಲಗಳು ಇಂದು(ಭಾನುವಾರ, ಮೇ. 30) ತಿಳಿಸಿವೆ.
ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಇತ್ತೀಚೆಗೆ ಗೃಹ ಮಂತ್ರಿ ಅಮಿತ್ ಶಾ ಅವರಿಗೆ ಬರೆದ ಪತ್ರದಲ್ಲಿ, ದೇಶದಲ್ಲಿ ಕೋವಿಡ್ 19 ಸೋಂಕಿನ ಬಗ್ಗೆ ಇರುವ ಆತಂಕದ ನಡುವೆ ತನ್ನ ನೌಕರರು ದೇಶದ ಜನತೆಗೆ ಲಸಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಪಾಳಿಯ ಅವಧಿಯನ್ನೂ ಮೀರಿ ಕೆಲಸ ಮಾಡುತ್ತಿದ್ದಾರೆ ಎಂದು ಉಲ್ಲೇಖಿಸಿದೆ.
ಇದನ್ನೂ ಓದಿ : ಮನ್‌ಮುಲ್ ಹಾಲಿಗೆ ನೀರು ಬೆರೆಸಿ ವಂಚನೆ: ಉನ್ನತ ಮಟ್ಟದ ತನಿಖೆಗೆ ಆದೇಶ
ಪತ್ರದಲ್ಲಿ ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದ ಸರ್ಕಾರಿ ಮತ್ತು ನಿಯಂತ್ರಣ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್, ಇಂಡಿಯಾದ ಮೇ ತಿಂಗಳಲ್ಲಿ ನಮ್ಮ ಉತ್ಪಾದನಾ ಸಾಮರ್ಥ್ಯ 6.5 ಕೋಟಿ ಪ್ರಮಾಣಕ್ಕೆ ಹೋಲಿಸಿದರೆ ಜೂನ್ ತಿಂಗಳಲ್ಲಿ ನಾವು ನಮ್ಮ ಕೋವಿಶೀಲ್ಡ್ ಲಸಿಕೆಯ ಒಂಬತ್ತರಿಂದ 10 ಕೋಟಿ ಡೋಸ್ ಗಳನ್ನು ಉತ್ಪಾದಿಸಲು ಮತ್ತು ಪೂರೈಸಲು ಸಾಧ್ಯವಾಗುತ್ತದೆ ಎಂದು ತಿಳಿಸಲು ನಾವು ಸಂತೋಷಪಡುತ್ತೇವೆ ”ಎಂದು ಪತ್ರದ ಮೂಲಕ ತಿಳಿಸಿದ್ದಾರೆ.
ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ದೇಶದ ಜನತೆಯ ಸುರಕ್ಷತೆಯ ಬಗ್ಗೆ ಮೊದಲ ಆದ್ಯತೆ ನೀಡುತ್ತದೆ. ನಮ್ಮ ನೌಕರರು ಲಸಿಕೆ ಉತ್ಪಾದನೆಯ ಕಾರ್ಯದಲ್ಲಿ ಸಂಸ್ಥೆಯ ಸಿಇಒ ಅದರ್ ಪೂನಾವಾಲ ಅವರ ನೇತೃತ್ವದಲ್ಲಿ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಇನ್ನು, ಭಾರತ ಸರ್ಕಾರದ ಬೆಂಬಲದೊಂದಿಗೆ ಮತ್ತು ಮಾರ್ಗದರ್ಶನದಲ್ಲಿ, ಮುಂಬರುವ ತಿಂಗಳಲ್ಲಿ ನಮ್ಮ ಕೋವಿಶೀಲ್ಡ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ನಮ್ಮ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಮೂಲಕ ನಾವು ನಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತೇವೆ ಎಂದು ನಾವು ನಿಮಗೆ ಭರವಸೆ ನೀಡಿದ್ದಾರೆ.
ಇದನ್ನೂ ಓದಿ : ನಿಮ್ಮ ಆಕ್ಸಿಮೀಟರ್ ಖರ್ಚನ್ನು ಉಳಿಸಲಿದೆ ಕೇರ್ ಪ್ಲಿಕ್ಸ್ ವೈಟಲ್ಸ್ ಸ್ಮಾರ್ಟ್ ಫೋನ್ ಆ್ಯಪ್!