ಪಾಟ್ನಾ : ಗುರುವಾರ(ಜುಲೈ 8) ನಡೆಯಲಿರುವ ಕೇಂದ್ರ ಸರ್ಕಾರದ ಸಚಿವ ಸಂಪುಟದ ವಿಸ್ತರಣೆಯಲ್ಲಿ ಜೆಡಿ (ಯು) ಗೆ ಸಚಿವ ಸ್ಥಾನ ಸಿಗಬಹುದೆಂಬ ಚರ್ಚೆಗಳ ಬೆನ್ನಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, “ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ ಯಾವುದೇ ವಿಷಯವನ್ನು ಸ್ವೀಕರಿಸುತ್ತೇನೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ : ರಾಜ್ಯಕ್ಕೆ 1.5 ಕೋಟಿ ಡೋಸ್ ಕೋವಿಡ್ ಲಸಿಕೆ ಪೂರೈಸುವಂತೆ ಕೇಂದ್ರ ಸಚಿವರಲ್ಲಿ ಸುಧಾಕರ್ ಮನವಿ
ವರದಿಗಾರರೊಂದಿಗೆ ಮಾತನಾಡಿದ ಕುಮಾರ್, ಜೆಡಿ (ಯು) ರಾಷ್ಟ್ರೀಯ ಅಧ್ಯಕ್ಷ ಆರ್‌ಸಿಪಿ ಸಿಂಗ್ ಅವರು ಪಕ್ಷಕ್ಕೆ ಸಿಗುವ ಸಚಿವ ಸಂಪುಟ ಸ್ಥಾನಗಳ ಕುರಿತು ಬಿಜೆಪಿಯೊಂದಿಗೆ ಚರ್ಚಿಸಿದ್ದಾರೆ. ಆ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಪ್ರಧಾನಿ ಹಾಗೂ ಪಕ್ಷದ ಅಧ್ಯಕ್ಷರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ಬದ್ಧರಾಗಿರುತ್ತೇವೆ ಎಂದಿದ್ದಾರೆ.
ಪಕ್ಷದ ಬಗ್ಗೆ ಎಲ್ಲಾ ವಿಚಾರಗಳ ನಿರ್ಧರಿಸಲು ಎಲ್ಲಾ ಜವಾಬ್ದಾರಿಗಳನ್ನು ಆರ್ ಸಿ ಪಿ ಸಿಂಗ್ ಗೆ ವಹಿಸಿದ್ದೇನೆ ಮತ್ತು ಜೆಡಿ (ಯು) ಗೆ ಸಂಪುಟದಲ್ಲಿ ಸ್ಥಾನಮಾನಗಳು ಸಿಗುತ್ತದೆಯೋ ಇಲ್ಲವೋ ಎನ್ನುವುದರ ಬಗ್ಗೆ ಈವರೆಗೆ ಮಾಹಿತಿ ಇಲ್ಲ. ಸಂಪುಟ ವಿಸ್ತರಣೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಏನು ನಿರ್ಧರಿಸುತ್ತಾರೆ ಎಂಬುದು ಜೆಡಿ (ಯು )ಗೆ ಸ್ವೀಕಾರಾರ್ಹ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ತೈಲ ಪೂರೈಕೆ ಹೆಚ್ಚಿಸುವಲ್ಲಿ ಒಮ್ಮತಕ್ಕೆ ಬರದ ಒಪೆಕ್ ದೇಶಗಳು: ತೈಲ ಬೆಲೆ ಏರಿಕೆ ಸಾಧ್ಯತೆ