Advertisement

ವನ್ಯಸಂಪತ್ತು: ಲೋಗೋ ಬಿಡುಗಡೆ

03:38 PM Jan 29, 2021 | Team Udayavani |

ಗುಂಡ್ಲುಪೇಟೆ: ಅಪಾರ ನೈಸರ್ಗಿಕ ಹಾಗೂ ವನ್ಯ ಸಂಪತ್ತು ಹೊಂದಿದ ಗುಂಡ್ಲುಪೇಟೆ ಪ್ರತ್ಯೇಕ ಲೋಗೋ ಹೊಂದುವ ಮೂಲಕ ಹಿರಿಮೆ ಹೆಚ್ಚಿಸಿಕೊಂಡಿದೆ ಎಂದು ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಹೇಳಿದರು.

Advertisement

ನಗರದ ಪ್ರವಾಸಿ ಮಂದಿರದಲ್ಲಿ ಪಟ್ಟಣದ ಯುವಕರ ತಂಡದ ಪರಿಶ್ರಮದಿಂದ ರಚಿಸಿದ ಲೋಗೋ ಹಲವು ವಿಶೇಷತೆಗಳನ್ನು ಹೊಂದಿದೆ. ವೃತ್ತದೊಳಗೆ ಬಂಡೀಪುರದ ರಾಯಭಾರಿಯಾಗಿದ್ದ ಪ್ರಿನ್ಸ್‌ ಹುಲಿಯ ಚಿತ್ರವನ್ನು ಬಳಕೆ ಮಾಡಲಾಗಿದ್ದು, ಲೋಗೋದ ಸುತ್ತಲೂ ನಮ್ಮ ಗುಂಡ್ಲುಪೇಟೆ, ಹುಲಿಗಳ ನಾಡು ಎಂದು ಬರೆದಿರುವುದು ಹಲವಾರು ಸಂದೇಶಗಳನ್ನು ನೀಡುತ್ತದೆ.

ಇದನ್ನೂ ಓದಿ:ಕಸಕ್ಕೆಬೆಂಕಿ: ಸಹಿಸದಷ್ಟು ದಟ್ಟಹೊಗೆ, ದುರ್ವಾಸನೆ

ಇಲ್ಲಿನ ಪರಿಸರಕ್ಕೆ ಸೂಕ್ತವಾದ ಲೋಗೋ ಇದಾಗಿದೆ ಎಂದು ಅಭಿಪ್ರಾಯಪಟ್ಟರು.  ಈ ವೇಳೆ ಲೋಗೋ ಸಿದ್ಧಪಡಿಸಿದ ಅರುಣ್‌, ಸಂತೋಷ್‌, ಮೂರ್ತಿ, ರೋಹಿತ್‌ ಹಾಗೂ ಮಂಜುನಾಥ್‌ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next