Advertisement

ಗಣರಾಜ್ಯೋತ್ಸವದಲ್ಲಿ ಕರುನಾಡ ಜೀವವೈಭವ

06:00 AM Jan 18, 2018 | |

ಬೆಂಗಳೂರು: ಗಣರಾಜ್ಯೋತ್ಸವ ಅಂಗವಾಗಿ ನವದೆಹಲಿಯ ಕೆಂಪುಕೋಟೆಯಲ್ಲಿ ನಡೆಯುವ ಪಥಸಂಚಲನದಲ್ಲಿ ಈ ಬಾರಿ ಕರ್ನಾಟಕದ ಪಶ್ಚಿಮಘಟ್ಟದ ಜೀವವೈವಿಧ್ಯತೆಯ ಪ್ರತಿರೂಪ ಅನಾವರಣಗೊಳ್ಳಲಿದೆ. ಪಥ ಸಂಚಲನದ ರಾಜಮಾರ್ಗದಲ್ಲಿ ಹುಲಿ, ಸಿಂಹ, ಆನೆ ಸೇರಿದಂತೆ ಪ್ರಾಣಿಗಳ ಧ್ವನಿ, ಪಕ್ಷಿಗಳ ನೀನಾದದ ಹಿಮ್ಮೇಳವೂ ಮೊಳಗಲಿದೆ.

Advertisement

ರಾಜ್ಯದ ಪರಿಸರ ಮತ್ತು ವನ್ಯಜೀವಿಯ ಶ್ರೀಮಂತಿಕೆಯನ್ನು ಗಣರಾಜ್ಯೋತ್ಸವದ ಮೂಲಕ ವಿಶ್ವಕ್ಕೆ ಪರಿಚಯಿಸುವ ಪ್ರಯತ್ನವಾಗಿ ಕರ್ನಾಟಕದ ವನ್ಯಜೀವಿ ಸಂಪತ್ತಿನ ವೈಭವ ಸಾರುವ ಪರಿಕಲ್ಪನೆಯಡಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಈ ಬಾರಿಯ ಸ್ತಬ್ಧಚಿತ್ರ ನಿರ್ಮಿಸುತ್ತಿದೆ. ಖ್ಯಾತ ಕಲಾವಿದ ಶಶಿಧರ ಅಡಪ ಮಾರ್ಗದರ್ಶನದಲ್ಲಿ ಪ್ರತಿರೂಪಿ ತಂಡ ಸ್ಥಬ್ಧಚಿತ್ರ ತಯಾರಿಯಲ್ಲಿದ್ದು, ಪ್ರವೀಣ್‌ ರಾವ್‌ ಅವರ ಹಿನ್ನೆಲೆ ಸಂಗೀತವೂ ಇದೆ.

50 ಲಕ್ಷ ರೂ. ವೆಚ್ಚದಲ್ಲಿ ಸ್ಥಬ್ಧಚಿತ್ರ ನಿರ್ಮಾಣವಾಗುತ್ತಿದ್ದು, ಜ.24 ರಂದು ತಾಲೀಮು ನಡೆಯಲಿದೆ.

ಕರ್ನಾಟಕದ ರಾಷ್ಟ್ರೀಯ ಉದ್ಯಾವನಗಳು, ದೇಶದ  ಶೇ.70 ರಷ್ಟು ಹುಲಿ ಹೊಂದಿರುವ ರಾಜ್ಯವೆಂಬ ಹೆಗ್ಗಳಿಕೆ, ಆನೆಗಳ ಸಂಖ್ಯೆಯಲ್ಲಿ ದೇಶದಲ್ಲೇ ಐದನೇ ಸ್ಥಾನ ಪಡೆದಿರುವುದು ಸ್ಥಬ್ಧ ಚಿತ್ರದಲ್ಲಿ ಬಿಂಬಿತವಾಗಲಿದೆ. ಜತೆಗೆ ಕರ್ನಾಟಕದ ಪಕ್ಷಿ ಪ್ರಪಂಚದ ಹೆಮ್ಮೆಯಾದ ರಾಷ್ಟ್ರೀಯ ಪಕ್ಷಿ ನವಿಲು, ಹಾರ್ನ್ಬಿಲ್‌ (ಮಂಗಟ್ಟೆ), ಕಿಂಗ್‌ ಫಿಶರ್‌ (ಮಿಂಚುಳ್ಳಿ) ಹಕ್ಕಿಗಳ ಪ್ರತಿರೂಪ ಇರಲಿವೆ.

Advertisement

Udayavani is now on Telegram. Click here to join our channel and stay updated with the latest news.

Next