Advertisement

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

01:14 AM Apr 29, 2024 | Team Udayavani |

ಡೆಹ್ರಾಡೂನ್‌: ಉತ್ತರಾಖಂಡ ಅರಣ್ಯ ಪ್ರದೇಶಗಳಲ್ಲಿ ಹಬ್ಬಿರುವ ಕಾಳ್ಗಿಚ್ಚು ರವಿವಾರ ನಿಯಂತ್ರಿಸಲಾಗಿದೆ ಎಂದು ಯೋಚಿಸುತ್ತಿರುವಾಗಲೇ 8 ಸ್ಥಳಗಳಲ್ಲಿ ಹೊಸತಾಗಿ ಬೆಂಕಿ ಕಾಣಿಸಿಕೊಂಡಿದೆ. 11.75 ಹೆ. ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಕುಮಾಂವ್‌ ವಿಭಾಗ ‌ದಲ್ಲಿ ಅರಣ್ಯ ಇಲಾಖೆ ಸಿಬಂದಿಯ ರಜೆ ರದ್ದು ಮಾಡಲಾಗಿದೆ. ರವಿವಾರ ಕೂಡ ಕಾಳ್ಗಿಚ್ಚು ಶಮನಗೊಳಿಸುವುದಕ್ಕಾಗಿ ಐಎಎಫ್ ಹೆಲಿಕಾಪ್ಟರ್‌ಗಳು, ಭಾರ  ತೀಯ ಸೇನಾ ಸಿಬಂದಿ ರವಿವಾ ರವೂ ಕಾರ್ಯಾಚರಣೆ ನಡೆಸಿದ್ದಾರೆ.

Advertisement

ನೈನಿತಾಲ್‌, ಹಲ್ದಾನಿ, ರಾಮನಗರ ಅರಣ್ಯಗಳು ಕಾಳ್ಗಿಚ್ಚಿನಿಂದ ಹೆಚ್ಚು ಹಾನಿಗೆ ಒಳಗಾಗಿವೆ. ಐಐಎಫ್ನ ಎಂಐ- 17 ವಿ5 ಕಾಪ್ಟರ್‌ಗಳ ನೆರವಿ ನೊಂದಿಗೆ ಬೆಂಕಿಯನ್ನು ನಂದಿಸ ಲಾಗಿದೆ. ಬೆಂಕಿ ಶಮನಗೊಳಿಸುವುದಕ್ಕಾಗಿ ಎನ್‌ಡಿಆರ್‌ಎಫ್ನ ಸಿಬಂದಿ ಯನ್ನೂ ಕರೆಯಿಸಿ ಕೊಳ್ಳಲಾಗಿದೆ. ಸೇನೆಯ ಸಿಬಂದಿ ಜತೆಗೆ ಪ್ರಾಂತೀಯ ರಕ್ಷಕ ದಳದ ಸ್ವಯಂ ಸೇವಕರೂ ಕಾರ್ಯಾಚರಣೆಯಲ್ಲಿ ಭಾಗಿ  ಯಾಗಿ  ದ್ದಾರೆ. ಮತ್ತೂಂದೆಡೆ ಗ್ರಾ.ಪಂ. ಮಟ್ಟದಿಂದಲೂ ಜನರಿಗೆ ಕಾಳ್ಗಿಚ್ಚಿನ ಬಗ್ಗೆ ಎಚ್ಚರಿಕೆ ವಹಿಸುವಂತೆ, ಸಣ್ಣದಾಗಿ ಬೆಂಕಿ ಕಂಡರೂ ಅದರ ಬಗ್ಗೆ ಮಾಹಿತಿ ನೀಡುವಂತೆ ಕೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next