ಅರಂತೋಡು: ಸಂಪಾಜೆ ಗ್ರಾಮದ ಗೂನಡ್ಕ ಕೆ.ಪಿ ಜಗದೀಶ ಅವರ ತೋಟಕ್ಕೆ ಕಾಡಾನೆಗಳು ನುಗ್ಗಿದ್ದು, ಕೃಷಿಯನ್ನು ನಾಶಪಡಿಸಿವೆ.
ಕೆ.ಪಿ.ಜಗದೀಶ್ ಅವರಿಗೆ ಸೇರಿದ 40 ಅಡಿಕೆ ಮರ ,2 ತೆಂಗಿನ ಮರಗಳನ್ನು ಕಾಡಾನೆಗಳು ನಾಶಪಡಿಸಿವೆ. ಇದರಿಂದ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಕಳೆದ ನಲ್ವತು ವರ್ಷಗಳಿಂದ ಇವರ ತೋಟಕ್ಕೆ ಕಾಡಾನೆಗಳು ಸತತವಾಗಿ ದಾಳಿ ಮಾಡುತ್ತಿವೆ. ಇದರಿಂದ ಜಗದೀಶ್ ಅವರು ರಬ್ಬರ್, ಬಾಳೆ, ಕೊಕ್ಕೊ ಸೇರಿದಂತೆ ಇತರ ಬೆಳೆಗಳನ್ನು ಕಳೆದುಕೊಂಡಿದ್ದು ಲಕ್ಷಗಟ್ಟಲೆ ನಷ್ಟಕ್ಕೆ ಒಳಗಾಗಿದ್ದರೆ.
ಇದನ್ನೂ ಓದಿ:ಹಿಂದೂ ಧರ್ಮ- ಹಿಂದುತ್ವ ಬೇರೆ ಬೇರೆ, ಅಡಿಯಾಳಾಗಿ ಬದುಕಬೇಕೆಂಬುದು ಹಿಂದುತ್ವ: ಯತೀಂದ್ರ
ಕಳೆದ ವರ್ಷ ಅವರ ತೋಟಕ್ಕೆ ದಾಳಿ ಮಾಡಿದ ಸಂದರ್ಭ ವಿದ್ಯುತ್ ಕಂಬ ಮುರಿದು ಬಿದ್ದು ವಿದ್ಯುತ್ ಶಾಕ್ ಹೊಡೆದ ಪರಿಣಾಮ ಜಾನುವಾರುಗಳು ಸಾವನ್ನಪ್ಪಿದ್ದವು.
ಸಂಪಾಜೆ ಗ್ರಾಮದ ಬಯ್ಲೆ ಕುಯಿಂತೋಡು, ಕೈಪಡ್ಕ, ನೆಲ್ಲಿಕುಮೇರಿ, ಸಂಜಾಜೆ, ಸಂಪಾಜೆ ಬಯಲು, ತೋಡಿಕಾನ ಗ್ರಾಮದ ಬಾಳಕಜೆ, ಪಟ್ಟಿ, ಪೆತ್ತಾಜೆ, ಶೆಟ್ಟಿಯಡ್ಕ, ಅರಂತೋಡು ಗ್ರಾಮದ ಜೋಡಿಪಣೆ, ಚುಕ್ರಡ್ಕ, ಹಾಗೂ ಮಂಡೆಕೋಲು, ಆಲೆಟ್ಟಿ, ಅಜ್ಜಾವರ, ಪುಳಿಕುಕ್ಕು, ಹರಿಹರ, ಕೊಲ್ಲಮೊಗ್ರ, ಬಾಳುಗೋಡು ಈ ಭಾಗಗಳ ಕ್ರಷಿ ತೋಟಗಳಿಗೆ ಆಗಾಗ ಕಾಡಾನೆಗಳ ದಾಳಿ ನಡೆಯುತ್ತಿದ್ದು ರೈತರು ನಷ್ಟ ಅನುಭಸುತ್ತಿದ್ದಾರೆ.
ಇದನ್ನೂ ಓದಿ: ಮಹಿಳೆಯನ್ನು ಕಟ್ಟಿಹಾಕಿ ಹಾಡಹಗಲೇ ದರೋಡೆಗೆ ಯತ್ನ: ಸಿನಿಮೀಯಾ ರೀತಿಯಲ್ಲಿ ನಡೆಯಿತು ಚೇಸಿಂಗ್
ತಾಲೂಕಿನ ಅನೇಕ ಕಡೆ ಆನೆಗಳು ಬರುವ ಹಾದಿಗೆ ಅಡ್ಡಲಾಗಿ ಆನೆಕಂದಕಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಈ ಕಂದಕಗಳನ್ನು ದಾಟಿ ಬರುವ ಆನೆಗಳು ಕ್ರಷಿ ತೋಟಗಳಿಗೆ ನುಗ್ಗಿ ಕೃಷಿ ಬೆಳೆಗಳನ್ನು ನಾಶ ಪಡಿಸುತ್ತಿದೆ. ಇದಿರಂದಾಗಿ ಶಾಶ್ವತ ಪರಿಹಾರಕ್ಕಾಗಿ ಕೃಷಿಕರು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: ಕರ್ತವ್ಯದ ಜೊತೆಗೆ ಸಮಾಜ ಸೇವೆ: ಜಿನ್ನು ಅಜ್ಜಿಗೆ ನೆರವಾದ ಬಂಟ್ವಾಳದ ಆರಕ್ಷಕರು