Advertisement

ಮಡಿಕೇರಿ ; ರಸ್ತೆಯಲ್ಲಿ ಕಾಡಾನೆಗಳ ನಡಿಗೆ

10:01 AM Jun 16, 2020 | sudhir |

ಮಡಿಕೇರಿ: ಕೋವಿಡ್ ಲಾಕ್‌ಡೌನ್‌ ಸಡಿಲಿಕೆಯಿದ್ದರೂ ಜಿಲ್ಲೆಯ ಜನ ಮಾತ್ರ ಊರಿಂದೂರಿಗೆ ಪ್ರಯಾಣ ಬೆಳೆಸುವ ಧೈರ್ಯ ಮಾಡುತ್ತಿಲ್ಲ. ಈ ಕಾರಣದಿಂದ ವಿರಳ ಸಂಖ್ಯೆಯ ವಾಹನಗಳ ಓಡಾಟದ ಈ ರಸ್ತೆಯಲ್ಲಿ ಕಾಡಾನೆಗಳ ನಡಿಗೆ ಸಾಮಾನ್ಯವಾಗಿದೆ.

Advertisement

ಇಲ್ಲಿನ ಅಭ್ಯತ್‌ಮಂಗಲ ಗ್ರಾಮದ ಮುಖ್ಯ ರಸ್ತೆಯಲ್ಲಿ ನಿತ್ಯ 20ಕ್ಕೂ ಹೆಚ್ಚಿನ ಕಾಡಾನೆಗಳು ಗುಂಪು ಗುಂಪಾಗಿ ಹಾಡಹಗಲೇ ರಸ್ತೆಯಲ್ಲಿ ಓಡಾಡುತ್ತಿವೆ. ಸ್ವತ್ಛಂದವಾಗಿ ಸಂಚರಿಸುತ್ತಿರುವ ಕಾಡಾನೆಗಳ ಹಿಂಡು ಅಕ್ಕಪಕ್ಕದ ತೋಟಗಳಲ್ಲಿ ಬೀಡುಬಿಟ್ಟಿದೆ ಮಾತ್ರವಲ್ಲದೆ ಅಲ್ಲಿನ ಬಾಳೆ, ಹಲಸನ್ನು ತಿನ್ನುತ್ತಿವೆ.

ತೋಟಗಳಲ್ಲೇ ಮರಿಗೂ ಜನ್ಮ ನೀಡುತ್ತಿರುವ ಹೆಣ್ಣಾನೆಗಳು ತೋಟ ಬಿಟ್ಟು ಕದಲುತ್ತಿಲ್ಲ. ಅರಣ್ಯ ಇಲಾಖೆ ಸಿಬಂದಿ ಸ್ಥಳಕ್ಕೆ ಆಗಮಿಸಿ ಕಾಡಾನೆಗಳನ್ನು ಓಡಿಸುವ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಅಭ್ಯತ್‌ಮಂಗಲ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲೂ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದೆ. ಗ್ರಾಮಸ್ಥರು ಹಾಗೂ ಬೆಳೆಗಾರರು ಆನೆ ಹಾವಳಿಯಿಂದ ಬೇಸತ್ತಿದ್ದು, ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next