Advertisement

Ramanagara: ಕಾಡಾನೆ ದಾಳಿಗೆ ಅಕ್ಕ ಬಲಿ, ತಂಗಿಗೆ ಗಂಭೀರ ಗಾಯ

10:03 AM Jun 19, 2023 | Team Udayavani |

ರಾಮನಗರ: ಜಮೀನಿಗೆ ತೆರಳುತ್ತಿದ್ದ ಅಕ್ಕ-ತಂಗಿಯರ ಮೇಲೆ ಕಾಡಾನೆ ದಾಳಿ ನಡೆಸಿ, ಅಕ್ಕ ಸ್ಥಳದಲ್ಲೇ ಮೃತಪಟ್ಟು, ತಂಗಿ ಗಂಭೀರ ಗಾಯಗೊಂಡ ಘಟನೆ ಕನಕಪುರ ತಾಲೂಕಿನ ಅಚ್ಚಲು ಗ್ರಾಮದ ಇಂದಿರಾನಗರದಲ್ಲಿ ನಡೆದಿದೆ.

Advertisement

ಜಯಮ್ಮ (50) ಮೃತ ಮಹಿಳೆಯಾಗಿದ್ದು, ವೆಂಕಲಕ್ಷ್ಮಮ್ಮಗೆ (45) ಗಂಭೀರ ಗಾಯಗೊಂಡ ಮಹಿಲೆ ಎಂದು ತಿಳಿದು ಬಂದಿದೆ.

ಜಮೀನಿನಲ್ಲಿ ಎಳ್ಳು ಕೊಯ್ಯಲು ಹೋಗುತ್ತಿದ್ದ ಸಂದರ್ಭ ಈ ಘಟನೆ ನಡೆದಿದ್ದು, ಗಾಯಾಳು ವೆಂಕಟಲಕ್ಷ್ಮಮ್ಮ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕನಕಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next