Advertisement
ಕಟಾವಿಗೆ ಬಂದಿದ್ದ ಮಾವಿನ ಫಸಲು ನಾಶವಾಗಿದೆ. ಕಾವೇರಿ ವನ್ಯ ಜೀವಿಧಾಮದಿಂದ ಕನಕಪುರದ ಕಬ್ಟಾಳು ಅರಣ್ಯದ ಮೂಲಕ ಆಗಮಿಸಿ ರುವ ಆನೆಗಳ ಹಿಂಡು ಕಳೆದೊಂದು ತಿಂಗಳಿನಿಂದ ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿವೆ. ಪದೇ ಪದೆ ಆನೆಗಳ ಹಿಂಡು ಸುತ್ತ ಮುತ್ತಲ ಗ್ರಾಮಗಳಲ್ಲಿ ದಾಳಿ ನಡೆಸಿ ರೈತರ ಫಸಲನ್ನು ನಾಶ ಮಾಡುತ್ತಿವೆ ಎಂಬ ದೂರುಗಳು ವ್ಯಕ್ತವಾಗುತ್ತಿವೆ. ಆಹಾರ ಅರಸಿ ಬಂದ ಆನೆಗಳು ಬುಧವಾರ ರಾತ್ರಿ ಮತ್ತೆ ತೋಟಗಳ ಮೇಲೆ ದಾಳಿ ಮಾಡಿವೆ.
Related Articles
Advertisement
ಆನೆ ದಾಳಿಯಿಂದ ಹೈರಾಣಾಗಿರುವ ತೆಂಗಿನ ಕಲ್ಲು ಅರಣ್ಯ ಪ್ರದೇಶದ ಅಂಚಿನಲ್ಲಿರುವ ಗ್ರಾಮಸ್ಥರು ಮತ್ತು ರೈತರು ತೆಂಗಿನ ಕಲ್ಲು ಅರಣ್ಯ ಪ್ರದೇ ಶಕ್ಕೆ ಆನೆ ಬರುವುದನ್ನು ತಡೆಯಿರಿ ಎಂದು ಅರಣ್ಯ ಇಲಾಖೆಗೆ ಪದೇ ಪದೆ ಮನವಿ ಮಾಡಿದರು ಉಪಯೋಗವಾಗಿಲ್ಲ ಎಂದು ದೂರಿದ್ದಾರೆ. ತಮಗಾಗಿರುವ ನಷ್ಟ ವನ್ನು ವೈಜ್ಞಾನಿಕವಾಗಿ ಅಂದಾಜಿಸಿ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಅಧಿಕಾರಿಗಳ ಭೇಟಿ ಪರಿಶೀಲನೆ: ತೆಂಗಿನ ಕಲ್ಲು ಗ್ರಾಮ ಮತ್ತು ಹೊಸ ದೊಡ್ಡಿ ಗ್ರಾಮಗಳಲ್ಲಿ ಆನೆ ದಾಳಿ ಪ್ರಕರಣಗಳನ್ನು ಚನ್ನಪಟ್ಟಣ ಉಪವಲಯ ಅರಣ್ಯಾಧಿಕಾರಿಗಳಾದ ಶಿವಶಂಕರ್, ಮಧು ಕುಮಾರ್, ಅರಣ್ಯ ರಕ್ಷಕರಾದ ಪುಟ್ಟ ಸ್ವಾಮಿ, ವೆಂಕಟ ಸ್ವಾಮಿ ಮತ್ತಿತರರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.
ಮಾವಿನ ಹಣ್ಣುಗಳ ರುಚಿ ಸವಿದಿರುವ ಆನೆಗಳು ಮತ್ತೆ ಮತ್ತೆ ದಾಳಿ ಮಾಡುವ ಸಾಧ್ಯತೆಗಳಿವೆ ಎಂದು ರೈತರು ಅರಣ್ಯ ಅಧಿಕಾರಿಗಳ ಬಳಿ ತಮ್ಮ ನೋವು ತೋಡಿಕೊಂಡಿದ್ದಾರೆ. ಹೀಗಾಗಿ ಇಲಾಖೆ ತಕ್ಷಣ ಕ್ರಮ ವಹಿಸಿ ಆನೆ ದಾಳಿಯನ್ನು ತಡೆಯ ಬೇಕು ಎಂದು ಮನವಿ ಮಾಡಿ ಕೊಂಡಿ ದ್ದಾರೆ.