Advertisement

ಬೆಂಗಳೂರು ಓಪನ್‌ ಪಾಸ್ಪಿಸಿಲ್‌ಗೆ ವೈಲ್ಡ್‌ ಕಾರ್ಡ್‌

12:07 AM Feb 10, 2024 | Team Udayavani |

ಬೆಂಗಳೂರು: ಕೆನಡಾದ ಮಾಜಿ ಟಾಪ್‌-30 ರ್‍ಯಾಂಕಿಂಗ್‌ ಆಟಗಾರ ವಸೆಕ್‌ ಪಾಸ್ಪಿಸಿಲ್‌ ಅವರಿಗೆ “ಬೆಂಗಳೂರು ಓಪನ್‌ ಚಾಲೆಂಜರ್‌’ ಟೆನಿಸ್‌ ಪಂದ್ಯಾವಳಿಗೆ ವೈಲ್ಡ್‌ಕಾರ್ಡ್‌ ಪ್ರವೇಶ ಲಭಿಸಿದೆ.

Advertisement

2014ರ ವಿಂಬಲ್ಡನ್‌ ಡಬಲ್ಸ್‌ ಚಾಂಪಿಯನ್‌ ಆಗಿರುವ ಪಾಸ್ಪಿಸಿಲ್‌, 2015ರ ವಿಂಬಲ್ಡನ್‌ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ತನಕ ಸಾಗಿದ್ದರು.

ಈಗ ಪಾಸ್ಪಿಸಿಲ್‌ಗೆ 33 ವರ್ಷ. 2014ರಲ್ಲಿ ಅತ್ಯುನ್ನತ ಸಿಂಗಲ್ಸ್‌ ರ್‍ಯಾಂಕಿಂಗ್‌ (25ನೇ ಸ್ಥಾನ) ಹಾಗೂ ಎಟಿಪಿ ಡಬಲ್ಸ್‌ನಲ್ಲಿ 4ನೇ ರ್‍ಯಾಂಕಿಂಗ್‌ ಹೊಂದಿದ್ದರು. 2017ರಲ್ಲಿ ವಿಶ್ವದ ನಂ.1 ಟೆನಿಸಿಗನಾಗಿದ್ದ ಆ್ಯಂಡಿ ಮರ್ರೆ ಅವರನ್ನು ಮಣಿಸಿದ ಹೆಗ್ಗಳಿಕೆ ಕೂಡ ಇವರದ್ದಾಗಿದೆ.

“ವಸೆಕ್‌ ಪಾಸ್ಪಿಸಿಲ್‌ ಅವರ ಸೇರ್ಪಡೆಯಿಂದ ಕೂಟಕ್ಕೆ ಹೆಚ್ಚಿನ ಬಲ ಬಂದಂತಾಗಿದೆ. ಇದರಿಂದ ಪಂದ್ಯಾವಳಿ ಹೆಚ್ಚು ಸ್ಪರ್ಧಾತ್ಮಕವಾಗಿ ಸಾಗಲಿದೆ. ಬೆಂಗಳೂರಿನ ಕ್ರೀಡಾಭಿಮಾನಿಗಳು ವಸೆಕ್‌ ಆಟವನ್ನು ಖಂಡಿತವಾಗಿಯೂ ಆನಂದಿಸಲಿದ್ದಾರೆ’ ಎಂಬುದಾಗಿ ಕೂಟದ ನಿರ್ದೇಶಕ ಸುನೀಲ್‌ ಯಜಮಾನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next