Advertisement

ಕಾಡು ಹಂದಿ ಕಾಟ; ಸೀರೆ ಕಟ್ಟಿ ಬೆಳೆ ರಕ್ಷಣೆ

12:25 PM Jan 16, 2022 | Team Udayavani |

ಚಿಂಚೋಳಿ: ತಾಲೂಕಿನಲ್ಲಿ ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಜೋಳದ ಬೆಳೆಯು ಉತ್ತಮವಾಗಿ ಸಮೃದ್ಧಿಯಾಗಿ ಬೆಳೆದಿದ್ದು, ಕಾಡುಹಂದಿಗಳು ಜೋಳದ ಬೆಳೆ ತಿಂದು ಹಾಳು ಮಾಡುತ್ತಿರುವುದರಿಂದ ರೈತರು ಹಳೆಯ ಸೀರೆಗಳನ್ನು ಕಟ್ಟಿ ಬೆಳೆ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ ಎಂದು ನಾಗಾಇದಲಾಯಿ ಗ್ರಾಮದ ರೈತ ಉದಯಕುಮಾರ ಪಾಟೀಲ ತಿಳಿಸಿದ್ದಾರೆ.

Advertisement

ತಾಲೂಕಿನ ನಾಗಾಇದಲಾಯಿ, ತುಮಕುಂಟಾ, ಕುಸರಂಪಳ್ಳಿ, ಕೊಳ್ಳುರ, ಪಟಪಳ್ಳಿ, ಎಂಪಳ್ಳಿ, ಚಂದ್ರಂಪಳ್ಳಿ, ಐನೋಳಿ, ಶಿಕಾರ ಮೋತಕಪಳ್ಳಿ, ಸಾಲೇಬೀರನಳ್ಳಿ ಗ್ರಾಮಗಳಲ್ಲಿ ಜೋಳದ ಬೆಳೆ ಉತ್ತಮವಾಗಿ ಬೆಳೆದಿದ್ದು, ಕೆಲವು ಕಡೆ ತೆನೆ ಬಿಟ್ಟಿವೆ.

ಜೋಳದ ಬೆಳೆ ಸಮೃದ್ಧಿಯಾಗಿ ತೆನೆಗಳಿಂದ ಕೂಡಿದ ಜೋಳದ ಬೆಳೆ ನಳನಳಿಸುತ್ತಿವೆ. ಆದರೆ ಹಂದಿಗಳು ಹೊಲಗಳಿಗೆ ನುಗ್ಗಿ ಬೆಳೆ ಹಾಳು ಮಾಡುತ್ತಿರುವುದರಿಂದ ಸಾಕಷ್ಟು ಹಣ ಖರ್ಚು ಮಾಡಿ ಬೆಳೆದ ಬೆಳೆ ಹಾಳಾಗುತ್ತಿರುವುದರಿಂದ ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ.

ಕಾಡು ಹಂದಿಗಳ ಹಿಂಡು ಹೆಚ್ಚಾಗಿವೆ. ಜೋಳ ಮತ್ತು ತೊಗರಿ ಹೊಲಗಳಲ್ಲಿ ಕಾಡು ಹಂದಿಗಳು ಬೀಡು ಬಿಟ್ಟಿವೆ. ರೈತರು ಹೊಲಗಳಿಗೆ ಹೋಗಲು ಆತಂಕಪಡಬೇಕಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಬೆಳೆಗಳ ರಕ್ಷಣೆ ಮಾಡಬೇಕೆಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next