Advertisement

ಶೀಘ್ರ ವಿಕಿಪೀಡಿಯಾ ಬದಲು: ಹೊಸ ಡಿಸೈನ್ ನಲ್ಲಿ ಬರಲಿದೆ ವಿಕಿಪೀಡಿಯಾ

09:18 AM Sep 25, 2020 | keerthan |

ವಾಷಿಂಗ್ಟನ್‌: ಜನಪ್ರಿಯ ಮಾಹಿತಿ ಜಾಲತಾಣ ವಿಕಿಪೀಡಿಯಾ ವೆಬ್‌ಸೈಟ್‌ನ ಮುಖಪುಟ ಹಾಗೂ ಕಂಟೆಂಟ್‌ ಪುಟಗಳ ವಿನ್ಯಾಸ ಸದ್ಯದಲ್ಲೇ ಬದಲಾಗಲಿದೆ ಎಂದು ವಿಕಿಪೀಡಿಯಾ ಫೌಂಡೇಶನ್‌ ತಿಳಿಸಿದೆ.

Advertisement

ಈ ಕುರಿತಂತೆ ಮಾಹಿತಿ ನೀಡಿರುವ ಸಂಸ್ಥೆಯ ಲೀಡ್‌ ಪ್ರಾಡಕ್ಟ್ ಮ್ಯಾನೇಜರ್‌ ಓಲ್ಗಾ ವ್ಯಾಲಿಲೆವಾ, “”ಇಂದಿನ ಓದುಗರಿಗೆ ತಕ್ಕಂತೆ ವಿಕಿಪೀಡಿಯಾವನ್ನು ಮಾರ್ಪಾಟು ಮಾಡಲಾಗುತ್ತಿದೆ. ಹೊಸ ವಿನ್ಯಾಸದಲ್ಲಿ ಹೊಸ ವಿಕಿಪೀಡಿಯಾ ಚಿಹ್ನೆ ಬಳಸಲಾಗುತ್ತದೆ. ಎಡ ಭಾಗದ ಮೇಲಿನ ಮೂಲೆಯಲ್ಲಿ ಡ್ರಾಪ್‌ ಡೌನ್‌ ಸ್ಲೈಡ್‌ ಬಾರ್‌ ಇರಲಿದ್ದು, ಅಲ್ಲಿ ಬೇರೆ ಬೇರೆ ಉಪಯುಕ್ತ ಲಿಂಕ್‌ ಗಳನ್ನು ಕೊಡಲಾಗುತ್ತದೆ. ಈಗ, ಮೊಬೈಲ್‌, ಟ್ಯಾಬ್‌, ಲ್ಯಾಪ್‌ಟಾಪ್‌, ಡೆಸ್ಕ್ ಟಾಪ್‌ಗಳನ್ನು ಬಳಸುವುದರಿಂದ ಆ ಎಲ್ಲಾ ಪರದೆಗಳಿಗೂ ಹೊಂದಾಣಿಕೆಯಾಗುವಂಥ ವಿನ್ಯಾಸವಿರಲಿದೆ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next