Advertisement

ಅಮೆರಿಕಕ್ಕೆ ಗಡೀಪಾರಾಗುವ ವಿರುದ್ಧ ಕಾನೂನು ಹೋರಾಟ : ವಿಕಿಲೀಕ್ಸ್‌ ಸ್ಥಾಪಕ ಅಸಾಂಜ್‌

09:57 AM May 03, 2019 | Team Udayavani |

ಲಂಡನ್‌ : ಅಮೆರಿಕಕ್ಕೆ ಗಡೀಪಾರಾಗುವುದರ ವಿರುದ್ಧ ತಾನು ಕಾನೂನು ಹೋರಾಟ ಮಾಡುವುದಾಗಿ ವಿಕಿಲೀಕ್ಸ್‌ ಸ್ಥಾಪಕ ಜೂಲಿಯಾನ್‌ ಅಸಾಂಜ್‌ ದೃಢಪಡಿಸಿದ್ದಾರೆ. ಅಮೆರಿಕದಲ್ಲಿ ಸರಕಾರಿ ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡುವಲ್ಲಿ ಪಿತೂರಿ ನಡೆಸಿರುವ ಆರೋಪ ಅಸಾಂಜ್‌ ಮೇಲಿದೆ.

Advertisement

ಇಂದು ಗುರುವಾರ ಕೋರ್ಟ್‌ ವಿಚಾರಣೆಯ ವೇಳೆ ಅಸಾಂಜ್‌, “ನಾನು ಗಡೀಪಾರಿಗೆ ಶರಣಾಗುವುದಿಲ್ಲ; ಪತ್ರಿಕೋದ್ಯಮವು ನನಗೆ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಟ್ಟಿದೆ” ಎಂದು ಹೇಳಿದರು.

ಅಸಾಂಜ್‌ ಅವರಿಂದು ಲಂಡನಿನ ಬೆಲ್‌ಮಾರ್ಶ್‌ ಜೈಲಿನಿಂದ ವಿಡಿಯೋ ಲಿಂಕ್‌ ಮೂಲಕ ವೆಸ್ಟ್‌ಮಿನ್‌ಸ್ಟರ್‌ ಮ್ಯಾಜಿಸ್ಟ್ರೇಟ್‌ ಕೋರ್ಟಿನ ಮುಂದೆ ಹಾಜರಾದರು.

ಅಸಾಂಜ್‌ ಅವರು 2012ರಲ್ಲಿ ಬೇಲ್‌ ಪಡೆದು ನಾಪತ್ತೆಯಾಗಿ ಈಕ್ವೇಡರ್‌ ದೂತಾವಾಸದಲ್ಲಿ ಆಸರೆ ಪಡೆದಿರುವುದಕ್ಕೆ 50 ವಾರಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next