Advertisement
9 ದಿನಗಳ ಹಿಂದೆ ಅಸ್ತಮಾ ಮತ್ತು ತೀವ್ರ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅಮೀರ್ ಸಾಬ್ ಎನ್ನುವ ವ್ಯಕ್ತಿಗೆ ವೈದ್ಯರು ಎಕ್ಸ್ರೇ ನಡೆಸಲು ಬರೆದಿದ್ದರು. ಎಕ್ಸ್ರೇ ಮಾಡಿಸುವಲ್ಲಿ ಸಾಗಿಸಲು ಸಿಬಂದಿಗಳ ನೆರವು ಕೇಳಿದಾಗ ಯಾರೊಬ್ಬರು ನೆರವು ನೀಡಲಲ್ಲ ಎಂದು ಪತ್ನಿ ಫಾಮಿದಾ ಹತಾಶರಾಗಿ ಬೇರೆ ದಾರಿ ಕಾಣದೆ ಪತಿ ಅಮೀರ್ರನ್ನು ನೇಲದ ಮೇಲೆ ಹಾಕಿ ದರದರನೆ ಎಳೆದೊಯ್ದಿದ್ದಾರೆ.
Related Articles
Advertisement
ಆಸ್ಪತ್ರೆಯ ಸಿಬಂದಿಗಳು ಮತ್ತು ವೈದ್ಯಾಧಿಕಾರಿಗಳು ನಾವು ಸೂಕ್ತ ಸ್ಪಂದನೆ ನೀಡಿದ್ದು ಆಕೆಯೇ ಎಳೆದೊಯ್ದಿದ್ದಾರೆ ಎಂದಿದ್ದಾರೆ.
ಈ ಘಟನೆಯನ್ನು ವ್ಯಕ್ತಿಯೊಬ್ಬ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದರಿಂದ ಆಸ್ಪತ್ರೆಯಲ್ಲಿನ ಇನ್ನಷ್ಟು ಅವ್ಯವಸ್ಥೆಗಳು ಬೆಳಕಿಗೆ ಬಂದಿವೆ.
ಮೂವರ ಅಮಾನತುಘಟನೆಗೆ ಸಂಬಂಧಿಸಿ ಮೂವರು ಸಿಬಂದಿಗಳನ್ನು ಅಮಾನತು ಮಾಡಿ ಆಸ್ಪತ್ರೆಯ ಡೀನ್ ಡಾ. ಸುಶೀಲ್ಕುಮಾರ್ ಆದೇಶ ನೀಡಿದ್ದಾರೆ. ಸ್ಟಾಫ್ ನರ್ಸ್ಗಳಾದ ಜ್ಯೋತಿ, ಚೈತ್ರಾ ಮತ್ತು ಗ್ರೂಪ್ ಡಿ ನೌಕರೆ ಸುವರ್ಣಮ್ಮ ಅವರು ಅಮಾನತಾದವರು.