Advertisement

ಕುಡುಕ, ಪೀಡಕ ಪತಿಯನ್ನು ಸುಟ್ಟು ಕೊಂದ ಹತಾಶ ಪತ್ನಿ

12:20 PM Mar 28, 2018 | Team Udayavani |

ಜಾಜ್‌ಪುರ, ಒಡಿಶಾ : ನಿತ್ಯವೂ ಕುಡಿದು ಮನೆಗೆ ಬಂದು ತನ್ನನ್ನು ಹಾಗೂ ತನ್ನ ಮಕ್ಕಳನ್ನು ಹೊಡೆದು ಬಡಿದು ಪೀಡಿಸುತ್ತಿದ್ದ ಪತಿಯನ್ನು ಆಕೆಯ ಹತಾಶ ಪತ್ನಿಯು ಸುಟ್ಟು ಕೊಂದ ಘಟನೆ ಜಾಜ್‌ಪುರ ಜಿಲ್ಲೆಯ ಸಾರೋಬಿಲಿ ಗ್ರಾಮದಲ್ಲಿ ನಡೆದಿದೆ. 

Advertisement

ಈ ಘಟನೆ ಕಳೆದ ಭಾನುವಾರ ನಡೆಯಿತಾದರೂ 36 ವರ್ಷ ಪ್ರಾಯದ ಪತಿಯು ಕಟಕ್‌ನ ಆಸ್ಪತ್ರೆಯಲ್ಲಿ ಸೋಮವಾರ ಮೃತಪಟ್ಟನೆಂದು ಪೊಲೀಸರು ತಿಳಿಸಿದ್ದಾರೆ. 

ಪತ್ನಿಯಿಂದ ಸುಟ್ಟು ಸಾಯಿಸಲ್ಪಟ್ಟ ವ್ಯಕ್ತಿಯನ್ನು ವಾಹನ ಚಾಲಕ ಸುಭಾಷ್‌ ಸಿಂಗ್‌ ಎಂದು ಗುರುತಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next