ಛತ್ತೀಸ್‌ಗಢ: ಮದುವೆಯಾಗಿದ್ದರೂ, ಪತಿಯ ಜತೆಗೆ ಸಂಸಾರ ಜೀವನ ಮಾಡಲು ಹತ್ತು ವರ್ಷಗಳ ಕಾಲ ಸೂಕ್ತ “ಶುಭ ಮುಹೂರ್ತ’ಕ್ಕಾಗಿ ಕಾದಿದ್ದ ಪತ್ನಿಗೆ ಛತ್ತೀಸ್‌ಗಢ ಹೈಕೋರ್ಟ್ ವಿವಾಹ ವಿಚ್ಛೇದನ ನೀಡಿದೆ. ಹಿಂದೂ ವಿವಾಹ ಕಾಯ್ದೆಯ ಅಡಿ ಮದುವೆಯನ್ನು ವಿಸರ್ಜಿಸಬಹುದಾಗಿದೆ ಎಂದು ನ್ಯಾ|ಗೌತಮ್ ಭಂಡಾರಿ ಮತ್ತು ನಾ| ರಂಜಿನಿ ದುಬೆ ನೇತೃತ್ವದ ನ್ಯಾಯಪೀಠ ಇತ್ತೀಚೆಗೆ ತೀರ್ಪು ನೀಡಿದೆ.
ವಿವಾಹವಾಗಿ ದಾಂಪತ್ಯ ಜೀವನ ಪ್ರವೇಶಿ ಸಿದ್ದರೂ ಪತ್ನಿ ಪತಿಯ ಜತೆಗೆ ಸಾಂಸಾರಿಕ ಜೀವನ ನಡೆಸಲೇ ಇಲ್ಲ. ಹೀಗಾಗಿ ಆಕೆ ಪತಿ ಯನ್ನು ತ್ಯಜಿಸಿದ್ದಾಳೆ ಎಂದೇ ಭಾವಿಸಬೇಕಾ ಗುತ್ತದೆ ಎಂದು ನ್ಯಾಯಪೀಠ ತೀರ್ಪಿನಲ್ಲಿ ಅಭಿಪ್ರಾಯ ಪಟ್ಟಿದೆ. ಸಂತೋಷ್ ಸಿಂಗ್ ಎಂಬವರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಪೀಠ ಈ ತೀರ್ಪು ನೀಡಿದೆ. 2010ರ ಜುಲೈನಲ್ಲಿ ಅವರ ವಿವಾಹವಾಗಿತ್ತು. ಇದಾದ ಬಳಿಕ ಪತ್ನಿ ಅವರ ಜತೆಗೆ ಕೇವಲ 11 ದಿನಗಳ ಮಾತ್ರ ಜೀವಿಸಿದ್ದರು. ಅನಂತರ ಅವರ ತಾಯಿ ಮನೆಯವರು ಪತ್ನಿಯನ್ನು ಕರೆದುಕೊಂಡು ಹೋದವರು ವಾಪಸ್ ಕಳುಹಿಸಿರಲಿಲ್ಲ.
ಇದನ್ನೂ ಓದಿ:ಜೊಹಾನ್ಸ್‌ಬರ್ಗ್ ಟೆಸ್ಟ್: ಸರಣಿ ಇತಿಹಾಸವೋ? ಸಮಬಲವೋ?
ಪತ್ನಿಯನ್ನು ಕಳುಹಿಸುವಂತೆ ಕೋರಿಕೊಂಡಾಗ, “ಸೂಕ್ತ ಶುಭ ಮುಹೂರ್ತ’ ಬಂದ ಮೇಲೆ ಕಳುಹಿಸುತ್ತೇವೆ ಎಂದು ಆವರ ಮನೆಯವರು ಸಬೂಬು ಹೇಳಿದ್ದರು. ಈ ಅಂಶ ಹಲವಾರು ಬಾರಿ ಪುನರಾವರ್ತನೆಯಾಯಿ ತು. ಪತ್ನಿಯ ತವರು ಮನೆಯವರ ನಿಲುವು ಪ್ರಶ್ನಿಸಿ ಸಂತೋಷ್ ಸಿಂಗ್ ದಾಂಪತ್ಯ ಜೀವನ ನಡೆಸುವ ಹಕ್ಕು ಮುಂದಿಟ್ಟುಕೊಂಡು ಕೌಟುಂ ಬಿಕ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲಿ ಪತ್ನಿಯ ಪರವಾಗಿಯೇ ತೀರ್ಪು ಪ್ರಕಟ ಗೊಂಡಿತ್ತು. ಆ ಸಂದರ್ಭದಲ್ಲಿಯೂ ಕೂಡ ಪತ್ನಿ ಪರ ನ್ಯಾಯವಾದಿ “ಪತಿಯ ಜತೆಗೆ ತೆರಳಲು ಶುಭ ಮುಹೂರ್ತ ಬಂದಿಲ್ಲ’ ಎಂದು ವಾದಿಸಿದ್ದರು.
ಪತಿಯೇ ಖುದ್ದಾಗಿ ಪತ್ನಿಯನ್ನು ಕರೆದುಕೊಂಡು ಹೋಗಲು ಬರಬೇಕು ಎಂಬ ಸಂಪ್ರದಾಯ ಇದೆ. ಆದರೆ, ಪತಿ ಬಂದಿದ್ದ ಸಂದರ್ಭದಲ್ಲಿ ಅಂಥ ಸಮಯ ಬಂದಿರದೇ ಇದ್ದ ಕಾರಣ ಪತ್ನಿಯನ್ನು ಕಳುಹಿಸಲಿಲ್ಲ ಎಂದು ವಾದಿಸಲಾಗಿತ್ತು.
ಆದರೆ ಈ ಅಂಶವನ್ನು ತಿರಸ್ಕರಿಸಿದ ಹೈಕೋರ್ಟ್ ಪತ್ನಿಯ ಮನೆಯವರು ಪ್ರತಿಪಾದಿಸಿದ ಸಂಸ್ಕೃತಿಯ ಅಂಶವನ್ನು ಸಾಬೀತುಮಾಡಲು ವಿಫಲರಾಗಿದ್ದಾರೆ ಎಂದು ಆರೋಪಿಸಿ ತೀರ್ಪು ನೀಡಿದೆ ಎಂದು “ದ ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.