ಬ್ರಿಜ್ಟೌನ್ (ಬಾರ್ಬಡಾಸ್): ಆತಿಥೇಯ ವೆಸ್ಟ್ ಇಂಡೀಸ್ ಎದುರಿನ ಟಿ20 ಸರಣಿಯಲ್ಲಿ ಇಂಗ್ಲೆಂಡ್ನ ಗೆಲುವಿನ ಆಟ ಮುಂದುವರಿದಿದೆ. “ಕೆನ್ಸಿಂಗ್ಟನ್ ಓವಲ್’ನಲ್ಲಿ ನಡೆದ ಸತತ 2ನೇ ಪಂದ್ಯವನ್ನೂ ಗೆದ್ದು ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
ವೆಸ್ಟ್ ಇಂಡೀಸ್ 8 ವಿಕೆಟಿಗೆ 158 ರನ್ ಗಳಿಸಿದರೆ, ಇಂಗ್ಲೆಂಡ್ ಕೇವಲ 14.5 ಓವರ್ಗಳಲ್ಲಿ 3 ವಿಕೆಟಿಗೆ 161 ರನ್ ಬಾರಿಸಿತು. ಇಲ್ಲೇ ಆಡಲಾದ ಮೊದಲ ಪಂದ್ಯವನ್ನು ಇಂಗ್ಲೆಂಡ್ 8 ವಿಕೆಟ್ಗಳಿಂದ ಜಯಿಸಿತ್ತು. 3ನೇ ಮುಖಾಮುಖೀ ಗುರುವಾರ ಗ್ರಾಸ್ ಐಲೆಟ್ನಲ್ಲಿ ನಡೆಯಲಿದೆ. ಇದು 5 ಪಂದ್ಯಗಳ ಸರಣಿಯಾಗಿದೆ.
ಮೊದಲ ಪಂದ್ಯದಲ್ಲಿ ಸೆಂಚುರಿ ಬಾರಿಸಿದ ಫಿಲ್ ಸಾಲ್ಟ್ ಇಲ್ಲಿ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿ ಗೋಲ್ಡನ್ ಡಕ್ ಸಂಕಟಕ್ಕೆ ಸಿಲುಕಿದರು. ಆದರೆ ವಿಲ್ ಜಾಕ್ಸ್ (38) ಮತ್ತು ನಾಯಕ ಜಾಸ್ ಬಟ್ಲರ್ (83) ಸೇರಿಕೊಂಡು ದ್ವಿತೀಯ ವಿಕೆಟಿಗೆ 129 ರನ್ ಜತೆಯಾಟ ನಿಭಾಯಿಸಿ ಆತಂಕವನ್ನು ದೂರ ಮಾಡಿದರು. ಬಟ್ಲರ್ಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು. 45 ಎಸೆತ ನಿಭಾಯಿಸಿದ ಅವರು 8 ಬೌಂಡರಿ ಹಾಗೂ 6 ಸಿಕ್ಸರ್ ಸಿಡಿಸಿ ವಿಂಡೀಸ್ ಬೌಲರ್ಗಳನ್ನು ಗೋಳಾಡಿಸಿದರು.
ಈ ಪಂದ್ಯದಲ್ಲೂ ವೆಸ್ಟ್ ಇಂಡೀಸ್ ಸರದಿಯಲ್ಲಿ ಯಾರಿಂದಲೂ ಅರ್ಧ ಶತಕ ದಾಖಲಾಗಲಿಲ್ಲ. ನಾಯಕ ರೋವ¾ನ್ ಪೊವೆಲ್ ಸರ್ವಾಧಿಕ 43 ಹೊಡೆದರು. ಇಂಗ್ಲೆಂಡ್ ಪರ ಶಕಿಬ್ ಮಹಮೂದ್, ಲಿವಿಂಗ್ಸ್ಟೋನ್ ಮತ್ತು ಮೌಸ್ಲಿ ತಲಾ 2 ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್-8 ವಿಕೆಟಿಗೆ 158 (ಪೊವೆಲ್ 43, ಶೆಫರ್ಡ್ 22, ಲಿವಿಂಗ್ಸ್ಟೋನ್ 16ಕ್ಕೆ 2, ಮಹಮೂದ್ 20ಕ್ಕೆ 2, ಮೌಸ್ಲಿ 29ಕ್ಕೆ 2). ಇಂಗ್ಲೆಂಡ್-14.5 ಓವರ್ಗಳಲ್ಲಿ 3 ವಿಕೆಟಿಗೆ 161 (ಬಟ್ಲರ್ 83, ಜಾಕ್ಸ್ 38, ಲಿವಿಂಗ್ಸ್ಟೋನ್ ಔಟಾಗದೆ 23, ಶೆಫರ್ಡ್ 42ಕ್ಕೆ 2). ಪಂದ್ಯಶ್ರೇಷ್ಠ: ಜಾಸ್ ಬಟ್ಲರ್.