Advertisement

ಡೇಟಿಂಗ್ ಆ್ಯಪ್ ಎಷ್ಟು ಸುರಕ್ಷಿತ ? ಸೈಬರ್ ಕ್ರಿಮಿನಲ್ ಗಳಿಗೆ ವರವಾಗುತ್ತಿದೆಯೇ ಸ್ಕ್ರೀನ್ ಶಾಟ್ ಆಯ್ಕೆ?

06:22 PM Jul 15, 2021 | ಮಿಥುನ್ ಪಿಜಿ |
ಇಷ್ಟೆಲ್ಲಾ ಪೀಠಿಕೆಗಳಿಗೆ ಕಾರಣ ಅನ್ ಲೈನ್ ಮೂಲಕ ಸಾಗುತ್ತಿರುವ ಆಧುನಿಕ ಜೀವನ ಶೈಲಿ. ಇಲ್ಲಿ ಆರ್ಡರ್ ಮಾಡಿದ ಆಹಾರ, ತರಕಾರಿಗಳು, ಅಥವಾ ಇತರೆ ಯಾವುದೇ ವಸ್ತುಗಳು ನಿಮ್ಮ ಕೈಗೆ ತಲುಪುದು ತಡವಾದರೆ ತೊಂದರೆಯಿಲ್ಲ. ಆದರೆ ಅನ್ ಲೈನ್ ಭದ್ರತಾ ವ್ಯವಸ್ಥೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳದಿದ್ದರೆ ಸಮಸ್ಯೆ ಕಟ್ಟಿಟ್ಟಬುತ್ತಿ. ಇತ್ತೀಚಿಗೆ ಅಮೆರಿಕಾ ಮಯಾಮಿ ಮೂಲದ ‘ಕಸಾಯ’ ಸಂಸ್ಥೆಯಲ್ಲಿ ಸೈಬರ್ ಸೋರಿಕೆ ಉಂಟಾಗಿ ಜಗತ್ತಿನಾದ್ಯಂತ ಇರುವ 1500 ಕಂಪೆನಿಗಳ ಮೇಲೆ ಪರಿಣಾಮ ಬೀರಿತ್ತು ಹಾಗೂ ಬೀರುತ್ತಲೇ ಇದೆ. ಇದರ ಜೊತೆಗೆ ಹಲವಾರು ವ್ಯಕ್ತಿಗಳು, ಸಂಸ್ಥೆಗಳು ಕೂಡ ಸೈಬರ್ ಕ್ರೈಂ ಬಲೆಗೆ ಸಿಲುಕುತ್ತಿದ್ದಾರೆ.
Now pay only for what you want!
This is Premium Content
Click to unlock
Pay with

ಕೋವಿಡ್-19 ಸೋಂಕು ಜಗತ್ತಿನಾದ್ಯಂತ ಪಸರಿಸಿಕೊಂಡಾಗಿನಿಂದ ಜನಸಾಮಾನ್ಯರು ಮನೆಯಲ್ಲೆ ಕುಳಿತುಕೊಳ್ಳುವ ಸಂದರ್ಭ ಎದುರಾಗಿದೆ. ಈ ಸಮಯದಲ್ಲಿ ತಂತ್ರಜ್ಞಾನವೂ ಕೋವಿಡ್ ನಷ್ಟೇ ವೇಗವಾಗಿ ಜನರ ಮೇಲೆ ಆಕ್ರಮಿಸಿಕೊಂಡಿತ್ತು ಎನ್ನಬಹುದು. ಆಹಾರಗಳನ್ನು ಆನ್ ಲೈನ್ ಮೂಲಕ ಆರ್ಡರ್ ಮಾಡಿ ತರಿಸಿಕೊಳ್ಳುವರೆಗೆಯಿಂದ ಹಿಡಿದು ವ್ಯಾಯಾಮ ಮಾಡುವ ವಿಧಾನಗಳಾವುವು ಎಂಬುದನ್ನು ತಿಳಿಸಿಕೊಡುವವರೆಗೂ ಅಪ್ಲಿಕೇಶನ್ ಗಳು ಬಂದಿವೆ. ಶಾಲೆಗೆ ಹೋಗಿ ಕಲಿಯಬೇಕೆಂಬ ಹಾಗೂ ಕಚೇರಿಗೆ ಹೋಗಿ ಕೆಲಸ ಮಾಡಬೇಕೆಂಬ ನಿಯಮಗಳು ಇಂದು ಮೂಲೆಗುಂಪಾಗಿದೆ. ಸಾಮಾಜಿಕ ಜಾಲತಾಣ, ವಿವಿಧ ಅಪ್ಲಿಕೇಶನ್ ಗಳಿಲ್ಲದ ಜೀವನವನ್ನು ಇಂದು ಊಹಿಸಲು ಕಷ್ಟಸಾಧ್ಯ.

Advertisement

ಇಷ್ಟೆಲ್ಲಾ ಪೀಠಿಕೆಗಳಿಗೆ ಕಾರಣ ಅನ್ ಲೈನ್ ಮೂಲಕ ಸಾಗುತ್ತಿರುವ ಆಧುನಿಕ ಜೀವನ ಶೈಲಿ. ಇಲ್ಲಿ ಆರ್ಡರ್ ಮಾಡಿದ ಆಹಾರ, ತರಕಾರಿಗಳು, ಅಥವಾ ಇತರೆ ಯಾವುದೇ ವಸ್ತುಗಳು ನಿಮ್ಮ ಕೈಗೆ ತಲುಪುದು ತಡವಾದರೆ ತೊಂದರೆಯಿಲ್ಲ. ಆದರೆ ಅನ್ ಲೈನ್ ಭದ್ರತಾ ವ್ಯವಸ್ಥೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳದಿದ್ದರೆ ಸಮಸ್ಯೆ ಕಟ್ಟಿಟ್ಟಬುತ್ತಿ. ಇತ್ತೀಚಿಗೆ ಅಮೆರಿಕಾ ಮಯಾಮಿ ಮೂಲದ ‘ಕಸಾಯ’ ಸಂಸ್ಥೆಯಲ್ಲಿ ಸೈಬರ್ ಸೋರಿಕೆ ಉಂಟಾಗಿ ಜಗತ್ತಿನಾದ್ಯಂತ ಇರುವ 1500 ಕಂಪೆನಿಗಳ ಮೇಲೆ ಪರಿಣಾಮ ಬೀರಿತ್ತು ಹಾಗೂ ಬೀರುತ್ತಲೇ ಇದೆ. ಇದರ ಜೊತೆಗೆ ಹಲವಾರು ವ್ಯಕ್ತಿಗಳು, ಸಂಸ್ಥೆಗಳು ಕೂಡ ಸೈಬರ್ ಕ್ರೈಂ ಬಲೆಗೆ ಸಿಲುಕುತ್ತಿದ್ದಾರೆ.

ಇಂದು ಬಹಳಷ್ಟು ಜನಪ್ರಿಯತೆಯಿಂದ ಕೂಡಿರುವ ಅಪ್ಲಿಕೇಶನ್ ಗಳೆಂದರೆ ಡೇಟಿಂಗ್ ಆ್ಯಪ್ ಗಳು. ಜಗತ್ತಿನಾದ್ಯಂತ ಅತೀ ಹೆಚ್ಚು ಯುವಜನರು ಇದರತ್ತ ಆಕರ್ಷಿತರಾಗಿದ್ದಾರೆ. ಹಾಗಾದರೆ ಡೇಟಿಂಗ್ ಆ್ಯಪ್ ಗಳು ಎಷ್ಟು ಸುರಕ್ಷಿತ ? ಯಾವೆಲ್ಲಾ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ತಿಳಿಯೋಣ. ತಾಂತ್ರಿಕ ದೃಷ್ಟಿಯಿಂದ ನೋಡುವುದಾದರೆ 2017ರಿಂದಲೂ ಡೇಟಿಂಗ್ ಆ್ಯಪ್ ಗಳು ಹೆಚ್ಚಿನ ಪ್ರಮಾಣದ ಸುರಕ್ಷತೆಯನ್ನು ನೀಡುತ್ತಿದೆ. ಆದಾಗ್ಯೂ ಡೇಟಿಂಗ್ ಆ್ಯಪ್ ಗಳ ಮೂಲಕ ಬಳಕೆದಾರರ ವ್ಯಯಕ್ತಿಕ ಮಾಹಿತಿ ಸೋರಿಕೆಯಾಗುವ ಅನುಮಾನಗಳು ಇದ್ದೇ ಇವೆ. ಇವುಗಳನ್ನು ಸೈಬರ್ ಸ್ಟಾಕಿಂಗ್/ಡಾಕ್ಸಿಂಗ್ ಎಂದು ಕರೆಯುತ್ತಾರೆ.

ಇಲ್ಲಿ ಡಾಕ್ಸಿಂಗ್ ಎಂದರೇ, ಯಾರಾದರೂ ನಿಮ್ಮ ಖಾಸಗಿ ಮಾಹಿತಿಯನ್ನು ಬಹಿರಂಗಗೊಳಿಸುವ ಮೂಲಕ ಅವಮಾನಕ್ಕೆ ಈಡಾಗಿಸುವುದು ಎಂದರ್ಥ. ವರದಿಗಳ ಪ್ರಕಾರ ‘ಟಿಂಡರ್’ ಡೇಟಿಂಗ್ ಆ್ಯಪ್ ಮಾರ್ಚ್ 2020ರ ಒಂದೇ ದಿನದಲ್ಲಿ ದಾಖಲೆಯ 3 ಬಿಲಿಯನ್ ಬಳಕೆದಾರರನ್ನು ಕಂಡಿತ್ತು. ಮತ್ತೊಂದು ಡೇಟಿಂಗ್ ಆ್ಯಪ್ OkCupid, 2020ರ ಮಾರ್ಚ್ ಮತ್ತು ಮೇ ಯಂದು 700% ಬೆಳವಣಿಗೆಯನ್ನು ಕಂಡಿತ್ತು.

ಜಗತ್ತಿನಾದ್ಯಂತ ಅತೀ ಹೆಚ್ಚು ಬಳಸಲ್ಪಡುವ ಡೇಟಿಂಗ್ ಆ್ಯಪ್ ಗಳೆಂದರೇ, tinder, Bumble, OkCupid, Mamba, Pure, Feeld, Her, Happn,ಮತ್ತು Badoo. ಈ ಎಲ್ಲಾ ಡೇಟಿಂಗ್ ಆ್ಯಪ್ ಗಳು ಕೂಡ ಬಳಕೆದಾರರ ಸಾಮಾಜಿಕ ಜಾಲತಾಣ ಖಾತೆಗಳ (ಫೇಸ್ ಬುಕ್, ಇನ್ ಸ್ಟಾಗ್ರಾಂ ಮತ್ತು ಇತರೆ) ಮೂಲಕ ರಿಜಿಸ್ಟರ್ ಮತ್ತು ಲಿಂಕ್ ಮಾಡಿಕೊಳ್ಳುವ ಅವಕಾಶವನ್ನು ಕಲ್ಪಿಸಿದೆ. ಒಂದು ವೇಳೆ ಡೇಟಿಂಗ್ ಆ್ಯಪ್ ಗಳಲ್ಲಿ ರಿಜಿಸ್ಟಾರ್ ಆಗಲು ಸಾಮಾಜಿಕ ಜಾಲತಾಣಗಳನ್ನು ಕೊಂಡಿಯಾಗಿ ಬಳಸಿಕೊಂಡರೆ, ಅಲ್ಲಿರುವ ಎಲ್ಲಾ ಫೋಟೋಗಳು, ವ್ಯಯಕ್ತಿಕ ಮಾಹಿತಿಗಳು ಸೇರಿದಂತೆ ಎಲ್ಲವೂ ಅಟೋಮ್ಯಾಟಿಕ್ ಆಗಿ ಡೇಟಿಂಗ್ ಆ್ಯಪ್ ನಲ್ಲಿ ದಾಖಲಾಗುತ್ತದೆ.

Advertisement

ಹೀಗಾಗಿ ಸಾಮಾಜಿಕ ಜಾಲತಾಣಗಳ ಡೇಟಾಗಳು, ಡೇಟಿಂಗ್‍ ಆ್ಯಪ್ ನಲ್ಲಿ ಶೇಖರಣೆಯಾಗುವುದರಿಂದ ಡಾಕ್ಸಿಂಗ್ ಅಪರಾಧಗಳು ಹೆಚ್ಚಾಗುತ್ತವೆ. ಇಂದು ಎಲ್ಲಾ ಆ್ಯಪ್ ಗಳು ಲೊಕೇಶನ್ ಆಯ್ಕೆಯನ್ನು ಕೇಳುವುದರಿಂದ ಒಬ್ಬ ವ್ಯಕ್ತಿಯ ವಿಳಾಸವನ್ನು ಹುಡುಕುವುದು ಕೂಡ ಸುಲಭವಾದ ಕಾರ್ಯ ಎಂಬುದನ್ನು ನೆನಪಿಡಬೇಕಾಗುತ್ತದೆ. ಇಲ್ಲಿ ಲೊಕೇಶನ್, ಕೆಲಸ ಮಾಡುವ ಸ್ಥಳ, ಹೆಸರು, ವೈಯಕ್ತಿಕ ಮಾಹಿತಿಗಳು ಸುಲಭವಾಗಿ ಸಿಗುವುದರಿಂದ ಸೈಬರ್ ಅಪರಾಧಗಳ ಪ್ರಮಾಣ ಹೆಚ್ಚಾಗುತ್ತಿದೆ. ಮತ್ತೊಂದು ಗಮನಿಸಬೇಕಾದ ಅಂಶ ಎಂದರೇ, ಇಂದು ಸ್ಕ್ರೀನ್ ಶಾಟ್ ಗಳು ಅತೀ ಹೆಚ್ಚಾಗಿ ಶೇರ್ ಆಗುತ್ತವೆ. ಡೇಟಿಂಗ್ ಆ್ಯಪ್ ಗಳ ಮುಖಾಂತರ ಆಗುವ ಚಾಟ್ ಗಳು ಸ್ಕ್ರೀನ್ ಶಾಟ್ ಮೂಲಕ ಹೊರಬಂದು ಡಾಕ್ಸಿಂಗ್ ಗೆ ಕಾರಣವಾಗುತ್ತದೆ. ಮಾತ್ರವಲ್ಲದೆ ಸೈಬರ್ ಅಪರಾಧಿಗಳು ಈ ಸ್ಕ್ರೀನ್ ಶಾಟ್ ಗಳನ್ನು ಬ್ಲ್ಯಾಕ್ ಮೇಲ್ ಮಾಡುವುದಕ್ಕೆಂದೇ ಬಳಸುತ್ತಿರುವುದು ಕೂಡ ವರದಿಯಾಗುತ್ತಿದೆ.

ಇದೆಲ್ಲಾವನ್ನು ಮನಗಂಡು ಇಂದು ಹಲವಾರು ಡೇಟಿಂಗ್‍ ಆ್ಯಪ್ ಗಳು ಪೇಯ್ಡ್ ವರ್ಷನ್ ಗಳನ್ನು ಬಳಕೆಗೆ ತಂದಿದೆ. ಅಂದರೇ ಹಣ ಪಾವತಿಸಿ ಡೇಟ್ ಮಾಡುವುದು. ಇದು ಹೆಚ್ಚಿನ ಫೀಚರ್ ಗಳನ್ನು ಒಳಗೊಂಡಿರುತ್ತದೆ. ಮಾತ್ರವಲ್ಲದೆ ಬಳಕೆದಾರರ ಭದ್ರತೆಯನ್ನು ಹೆಚ್ಚಿಸುತ್ತದೆ. ಉದಾ: ಟಿಂಡರ್ ಗೆ ನೀವು ಹಣ ಪಾವತಿ ಮಾಡಿ ಡೇಟ್ ನಲ್ಲಿ ತೊಡಗಿಕೊಂಡರೆ, ಲೊಕೇಶನ್ ಅನ್ನು ಮ್ಯಾನುವಲ್ ಆಗಿ ಆನ್ ಮಾಡುವ ಸಾಧ್ಯತೆಗಳಿವೆ. ಹೀಗಾಗಿ ಡೇಟಿಂಗ್ ಆ್ಯಪ್ ಗಳಲ್ಲಿ ತೊಡಗಿಸಿಕೊಳ್ಳುವ ಮುನ್ನ ಕೆಳಗಿನ ಕೆಲವೊಂದು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ.

*ಡೇಟಿಂಗ್ ಆ್ಯಪ್ ಗಳಲ್ಲಿ ಹೆಚ್ಚಿನ ಮಾಹಿತಿಗಳನ್ನು ನಮೂದಿಸುವುದು ಬೇಡ. (ಉದಾ. ಕೆಲಸ ಮಾಡುವ ಸ್ಥಳ, ಸಂಸ್ಥೆ, ಸ್ನೇಹಿತರ ಜೊತೆಗಿನ ಫೋಟೋ, ರಾಜಕೀಯ ನಿಲುವುಗಳು ಇತ್ಯಾದಿ)

*ಇತರ ಸಾಮಾಜಿಕ ಜಾಲತಾಣಗಳನ್ನು ನಿಮ್ಮ ಡೇಟಿಂಗ್ ಆ್ಯಪ್ ಪ್ರೊಫೈಲ್ ಗೆ ಲಿಂಕ್ ಮಾಡಬೇಡಿ.

*ಲೊಕೇಶನ್ ಗಳನ್ನು ಮ್ಯಾನುವಲ್ ಆಗಿ ಸೆಟ್ ಮಾಡಿ.

*ಎರಡು ಹಂತದ ದೃಢೀಕರಣ ಅಥವಾ ಟು ಫ್ಯಾಕ್ಟರ್ ಅಥೆಂಟಿಕೇಶನ್ ಬಳಸಿ.

*ಡೇಟಿಂಗ್ ಆ್ಯಪ್ ಗಳನ್ನು ದೀರ್ಘಕಾಲದವರೆಗೂ ಬಳಸದಿದ್ದರೆ, ಪ್ರೊಪೈಲ್ ಡಿಲೀಟ್ ಮಾಡಿ

 

*ಮಿಥುನ್ ಪಿ.ಜಿ

Advertisement

Udayavani is now on Telegram. Click here to join our channel and stay updated with the latest news.