Advertisement

ಚಳಿಗಾಲ: ದೇಹದ ತೂಕ ಹೆಚ್ಚುವ ಕಾಲ

02:27 PM Dec 29, 2020 | Nagendra Trasi |

ಚುಮುಚುಮು ಚಳಿಗೆ ಮತ್ತಷ್ಟು ಹೊತ್ತು ಹೊದಿಕೆ ಹೊದ್ದು ಮಲಗುವಾಸೆ, ಸಂಜೆಯಾಗುತ್ತಲೇ ಕುರುಕಲು ತಿಂಡಿಯನ್ನು ಮೆಲ್ಲುವಾಸೆ..ಹತ್ತಿಕ್ಕಲಾಗದ ಬಯಕೆಯ ನಡುವೆ ವ್ಯಾಯಾಮ, ಡಯಟ್‌ ಚಾರ್ಟ್‌ ಅನ್ನು ಮರೆತು ಬಿಡುತ್ತೇವೆ. ಇದರಿಂದ ಚಳಿಗಾಲದಲ್ಲಿ ದೇಹದ ತೂಕ ಹೆಚ್ಚಾಗುವುದು ಸಾಮಾನ್ಯ. ಚಳಿಗಾಲದಲ್ಲಿ ತೂಕ ಹೆಚ್ಚಾಗಲು ಇವಿಷ್ಟೇ ಕಾರಣವಲ್ಲ. ಇನ್ನೂ ಹಲವಾರಿದೆ. ಅವುಗಳಲ್ಲಿ ಮುಖ್ಯವಾದುದು.

Advertisement

ಕಡಿಮೆ ವ್ಯಾಯಾಮ
ಬೆಳಗ್ಗೆ ಏಳುವಾಗ ಲೇಟಾಯಿತೆಂದೋ ಅಫೀಸ್‌ಗೆ ಹೋಗೋ ತರಾತುರಿಯೋ ಅಥವಾ ಮತ್ತಷ್ಟು ಹೊತ್ತು ಮಲಗುವ ಬಯಕೆಯಿಂದಲೋ ಚಳಿಗಾಲದಲ್ಲಿ
ವ್ಯಾಯಾಮ ಕಡಿಮೆಯಾಗಿರುತ್ತದೆ. ಅದರಲ್ಲೂ ಹೊರಗೆ ಹೋಗಿ ವ್ಯಾಯಾಮ ಮಾಡುವ ಮನಸ್ಸಾಗುವುದೇ ಇಲ್ಲ. ಮಾಡಿದರೂ ಆರಂಭದಲ್ಲಿ ಸ್ವಲ್ಪ ಉದಾಸೀನತೆ ತೋರಿ ದೇಹಕ್ಕೆ ಸರಿಯಾದ ಪ್ರಮಾಣದ ವ್ಯಾಯಾಮ ಸಿಗುವುದಿಲ್ಲ. ಇದರಿಂದ ದೇಹದ ತೂಕ ಹೆಚ್ಚಾಗುವುದು ಸಾಮಾನ್ಯ.

ಸೀಸನಲ್‌ ಎಫೆಕ್ಟಿವ್‌ ಡಿಸಾರ್ಡರ್
ಸೂರ್ಯನ ಬೆಳಕಿಗೆ ದೇಹವನ್ನು ಒಡ್ಡದೇ ಇರುವುದರಿಂದ ಇದು ಮನಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ. ಇದನ್ನು ಸೀಸನಲ್‌ ಎಫೆಕ್ಟಿವ್‌ ಡಿಸಾರ್ಡರ್‌ ಎನ್ನಲಾಗುತ್ತದೆ. ಇದು ಒಂದು ರೀತಿಯ ಮಾನಸಿಕ ಖನ್ನತೆಯಾಗಿದೆ. ಇದರಿಂದ ಹೆಚ್ಚು ತಿನ್ನುವುದು, ಕಳಪೆ ಆಹಾರ ಆಯ್ಕೆ ಮಾಡುವುದು, ಉದಾಸೀನತೆ ಉಂಟಾಗುತ್ತದೆ. ಈ ಸಮಸ್ಯೆ ನಿವಾರಿಸಲು ಸೂರ್ಯನ ಬೆಳಕಿನಲ್ಲಿ ಸ್ವಲ್ಪ ಹೊತ್ತು ಕಳೆಯುವುದು ಅತ್ಯಗತ್ಯ.

ಆಹಾರದ ಆಯ್ಕೆ
ಚಳಿಗಾಲದಲ್ಲಿ ನಾವು ಹೆಚ್ಚಾಗಿ ಕಾರ್ಬ್, ಕೊಬ್ಬು ತುಂಬಿದ ಆಹಾರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತೇವೆ. ಇದು ದೇಹದ ತೂಕ ಹೆಚ್ಚಾಗಲು ಕಾರಣವಾಗುತ್ತದೆ.
ಇದರ ಬದಲು ಕೆನೆ ಸೂಪ್‌ ಆಯ್ಕೆ ಮಾಡಿಕೊಳ್ಳಬಹುದು.

ಇದನ್ನೂ ಓದಿ:ಬೆಂಗಳೂರಿಗೂ ಕಾಲಿಡ್ತು ಯುಕೆ ವೈರಸ್! ಹತ್ತು ದಿನವಾದರೂ ಪತ್ತೆಯಾಗಿಲ್ಲ 361 ಪ್ರಯಾಣಿಕರು!

Advertisement

ಕಡಿಮೆ ನೀರು ಸೇವನೆ
ಚಳಿಗಾಲದಲ್ಲಿ ನೀರು ಕಡಿಮೆ ಸೇವಿಸುವುದರಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಕೊಬ್ಬು ಸಂಗ್ರಹವಾಗಿ ದೇಹದ ತೂಕ ಹೆಚ್ಚಾಗುವುದು ಸಾಮಾನ್ಯ.

ಹಾರ್ಮೋನಿನಲ್ಲಿ ಏರುಪೇರು
ಋತುವಿನ ಬದಲಾವಣೆ ಹಾರ್ಮೋನಿನಲ್ಲಿ ಏರುಪೇರು ಉಂಟಾಗುತ್ತದೆ. ಇದು ಮಧುಮೇಹ, ಥೈರಾಯ್ಡ ನಿಂದ ಬಳಲುತ್ತಿರುವವರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಇದರಿಂದ ಹೆಚ್ಚು ತಿನ್ನುವ ಬಯಕೆ ಉಂಟಾಗುವುದು ಸಹಜ. ಹೀಗಾಗಿ ಇಂಥವರು ಹಾರ್ಮೋನ್‌ಗಳು ನಿಯಂತ್ರಣದಲ್ಲಿವೆಯೇ ಎಂಬುದನ್ನು ವೈದ್ಯರಲ್ಲಿ ಪರೀಕ್ಷೆ ಮಾಡಿಕೊಳ್ಳುವುದು ಉತ್ತಮ.

Advertisement

Udayavani is now on Telegram. Click here to join our channel and stay updated with the latest news.

Next