Advertisement

ಚಳಿಗಾಲದ ಆಹಾರ; ಇರಲಿ ಹೆಚ್ಚಿನ ಕಾಳಜಿ

06:19 PM Jan 06, 2021 | Team Udayavani |

ಚಳಿಗಾಲದಲ್ಲಿ ವ್ಯಾಯಾಮ ಎಷ್ಟು ಮುಖ್ಯ ನಾವು ಸೇವಿಸುವ ಆಹಾರದ ಬಗ್ಗೆ ಕಾಳಜಿ ವಹಿಸುವುದು ಕೂಡ ಅಷ್ಟೇ ಮುಖ್ಯ. ಮುಖ್ಯವಾಗಿ ಹೆಚ್ಚು ಖಾರ, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವಿಸದೇ ಇರುವುದು ಒಳ್ಳೆಯದು. ಅದರಲ್ಲೂ ಹೆಚ್ಚಾಗಿ ಆರೋಗ್ಯದ ಬಗ್ಗೆ ಕಾಳಜಿಯಿಟ್ಟು ದೇಹ ದಂಡನೆ ಮಾಡುವವರು ಕೆಲವೊಂದು ಆಹಾರಗಳನ್ನು ಸೇವಿಸಲೇಬೇಕು. ಅವುಗಳೆಂದರೆ

Advertisement

ಸೂಪ್‌
ಕಡಿಮೆ ಕೊಬ್ಬಿನಾಂಶವಿರುವ ಸೂಪ್‌ನಲ್ಲಿ ಪೋಷಕಾಂಶಗಳು ಸಮೃದ್ಧವಾಗಿರುತ್ತವೆ. ಇದು ದೇಹಕ್ಕೆ ಅಗತ್ಯವಿರುವ ಎಲ್ಲ ಪೋಷಕಾಂಶಗಳನ್ನು ಒದಗಿಸುವುದು ಮಾತ್ರವಲ್ಲ ಚಳಿಗಾಲದಲ್ಲಿ ಸಾಮಾನ್ಯವಾಗಿ ಹೆಚ್ಚು ತಿನ್ನುವ  ಬಯಕೆಯನ್ನು ನಿಯಂತ್ರಿಸಿ ದೇಹದ ತೂಕ ಸಮತೋಲನದಲ್ಲಿರಿಸಲು ನೆರವಾಗುತ್ತದೆ.

ಚಾಕೊಲೇಟ್‌
ಬಿಸಿ ಚಾಕೊಲೇಟ್‌ ಸೇವನೆ ಚಳಿಗಾಲದಲ್ಲಿ ಅತ್ಯುತ್ತಮ. ಅಂದರೆ ಚಾಕೊಲೇಟ್‌ ಬೆರೆಸಿದ ಹಾಲು ಸೇವಿಸುವುದರಿಂದ ಕಠಿನ ವ್ಯಾಯಾಮದ ಬಳಿಕ ದೇಹಕ್ಕೆ ಬೇಕಾದ ಕಾರ್ಬೋಹೈಡ್ರೇಟ್‌ ಅನ್ನು ಇದು ಒದಗಿಸುತ್ತದೆ. ಇದರಿಂದ ದೇಹ ಮತ್ತು ಮಾನಸಿಕ ಒತ್ತಡವೂ ನಿವಾರಣೆಯಾಗುತ್ತದೆ. ಆದರೆ ಇದು ಸಂಪೂರ್ಣ ಆಹಾರವಲ್ಲ. ಹೀಗಾಗಿ ವ್ಯಾಯಾಮದ ಬಳಿಕ ಒಂದು ಗ್ಲಾಸ್‌ ಬಿಸಿ ಚಾಕೊಲೇಟ್‌ ಹಾಲನ್ನು ಸೇವಿಸಬಹುದು.

ತಂಪುಬೀಜ
ತಂಪು ಬೀಜ ಎಂದೇ ಕರೆಯಲ್ಪಡುವ ಕಾಮಕಸ್ತೂರಿ ಬೀಜ ದೇಹಕ್ಕೆ ಚೈತನ್ಯ ಒದಗಿಸುವಲ್ಲಿ ಸಹಕಾರಿಯಾಗಿದೆ. ಇದರಲ್ಲಿ ಪ್ರೋಟೀನ್‌, ನಾರಿನಾಂಶ, ಮ್ಯಾಂಗನೀಸ್‌, ರಂಜಕ ಹಾಗೂ ಕ್ಯಾಲ್ಸಿಯಂ ಅಧಿಕವಾಗಿದೆ.

ನವಣೆ
ನವಣೆಯನ್ನು ಅನ್ನ ಅಥವಾ ಉಪ್ಪಿಟ್ಟು ಮಾಡಿ ತಿನ್ನುವುದರಿಂದ ದೇಹಕ್ಕೆ ಅಗತ್ಯವಾಗಿ ಬೇಕಾದ ಪೋಷಕಾಂಶಗಳು ದೊರೆಯುತ್ತವೆ. ಇದು ಗ್ಲುಟೆನ್‌ ಮುಕ್ತವಾಗಿದ್ದು, ಅತ್ಯಧಿಕ ಪ್ರಮಾಣದ ಪ್ರೋಟೀನ್‌ ಹೊಂದಿದೆ. ದೇಹಕ್ಕೆ ಸಕ್ಕರೆ ಪ್ರಮಾಣವನ್ನು ಸ್ಥಿರತೆಯಲ್ಲಿಟ್ಟು, ದೀರ್ಘ‌ಕಾಲದವರೆಗೆ ಹೊಟ್ಟೆ ತುಂಬಿದ ಅನುಭವವನ್ನು ಕೊಡುತ್ತದೆ. ಹೀಗಾಗಿ ದೇಹದ ತೂಕ ಸಮತೋಲನದಲ್ಲಿರಿಸಬಹುದು.

Advertisement

ಶುಂಠಿ
ಅತ್ಯಧಿಕ ಪ್ರಮಾಣದಲ್ಲಿ ರೋಗ ನಿರೋಧಕ ಶಕ್ತಿ ಹೊಂದಿರುವ ಶುಂಠಿ ದಿನವಿಡೀ ಉಲ್ಲಾಸದಿಂದರಲು ಸಹಕಾರಿಯಾಗುತ್ತದೆ. ಚಳಿಗಾಲದಲ್ಲಿ ಉಂಟಾಗುವ ಶೀತ,
ಕಫ‌, ಕೆಮ್ಮಿನ ಸಮಸ್ಯೆಯಿಂದ ಆರೋಗ್ಯವನ್ನು ಕಾಪಾಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next