Advertisement
“ಕರ್ನಾಟಕ ಅಮಾನವೀಯ, ದುಷ್ಟ, ವಾಮಾಚಾರ ಪ್ರತಿ ಬಂಧಕ ಮತ್ತು ನಿರ್ಮೂಲನ ಮಸೂದೆ 2017′ ಬರುವ ನವೆಂಬರ್‌ನಲ್ಲಿ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾ ಗುತ್ತಿರುವುದು ಸ್ವಾಗತಾರ್ಹ. ನಾಲ್ಕು ವರ್ಷಗಳ ನಂತರವಾದರೂ ಅದಕ್ಕೆ ಜೀವ ಬರುತ್ತಿರುವುದು ಸಂತೋಷ ತರುತ್ತಿದೆಯಾದರೂ ಎಲ್ಲ ಅಮಾನವೀಯ ಆಚರಣೆಗಳಿಗೆ ಮೂಲ ಕಾರಣವಾದ ಮೂಢನಂಬಿಕೆಯನ್ನೇ ಶೀರ್ಷಿಕೆಯಿಂದ ಕಿತ್ತೂಗೆದಿರುವುದು ಸರಿಯಲ್ಲ ಅನಿಸುತ್ತದೆ. ಏಕೆಂದರೆ ಮೂಢ ನಂಬಿಕೆ ಎಂಬುದು ಉದ್ದೇಶಪೂರ್ವಕವಾಗಿ ಜನರ ಮನಸ್ಸಿನಲ್ಲಿ ವ್ಯವಸ್ಥೆ ಬೆಳೆಸಿರುವಂತಹುದು.
Related Articles
Advertisement
ಯಾವುದೇ ಒತ್ತಡಕ್ಕೆ ಒಳಗಾಗದೇ ಸ್ವ ಇಚ್ಛೆಯಿಂದ ವೈಯಕ್ತಿಕ ಸಿದ್ಧಿಗಾಗಿ ಪಾಲಿಸುವ ಆಚಾರ ವಿಚಾರ ಮತ್ತು ಪದ್ಧತಿಗಳು, “”ನಂಬಿಕೆ.” ಬೇರೆಯವರನ್ನು ಮಾನಸಿಕವಾಗಿ ಒತ್ತಡಕ್ಕೆ ಸಿಲುಕಿಸಿ ಆಚರಿಸುವಂತೆ ಮಾಡುವುದು ಮೂಢನಂಬಿಕೆ. ವೈಜ್ಞಾನಿಕ ಮನೋವೃತ್ತಿಯ ಪರಿಭಾಷೆಯಲ್ಲಿ ಯಾವುದೇ ಪುರಾವೆ ಇಲ್ಲದೇ, ಪುರಾವೆಯ ನಿರೀಕ್ಷೆಯೂ ಇಲ್ಲದೇ ಒಂದು ಶಕ್ತಿ, ಸಂಗತಿ ಇದೆ. ನಡೆಯುತ್ತೆ ಎಂದು ಭಾವಿಸುವ ಮನಸ್ಥಿತಿ ನಂಬಿಕೆ, ಇಂಥ ನಂಬಿಕೆಗೆ ವಿರುದ್ಧವಾದ ಪುರಾವೆ ಸಿಕ್ಕಿದ ನಂತರವೂ ಅದನ್ನು ಉಪೇಕ್ಷಿಸಿ ಹಿಂದಿನ ನಂಬಿಕೆ ಮುಂದುವರೆಸಿಕೊಂಡು ಹೋಗುವುದು ಮೂಢನಂಬಿಕೆ.
2013ರ ಮಸೂದೆಯು ಪ್ರಸ್ತುತ ಮಂಡಿಸಲಿರುವ ರಿಫೈನ್ ಆದ ಸ್ವರೂಪವನ್ನು ಪಡೆದಿದೆ. ಇದಕ್ಕೆ ಬಹುಶಃ ಜೋತಿಷ್ಯ, ವಾಸ್ತುವಿನಂತಹ ಸೋಕಾಲ್ಡ್ ತಜ್ಞರ, ಟಿವಿ ಮಾಧ್ಯಮದವರ ಬೃಹತ್ ಲಾಬಿಯೂ ಕಾರಣವಿರಬಹುದು. ನಮಗೆಲ್ಲರಿಗೂ ತಿಳಿದಿರುವ ಹಾಗೆ ದೇಹದ ಆರೋಗ್ಯ, ಮಾನಸಿಕ ಆರೋಗ್ಯ,
ಶಿಕ್ಷಣ, ವಾಣಿಜ್ಯ, ಉದ್ಯೋಗ, ವಾಸ್ತುಶಿಲ್ಪ, ಪಾರಂಪರಿಕ ಸಮಸ್ಯೆ ಗಳು, ಕಾನೂನು ಮುಂತಾದ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾದ ತಜ್ಞರು ಇರುತ್ತಾರೆ. ಅದಕ್ಕಾಗಿ ವರ್ಷಾನು ಗಟ್ಟಲೇ ಅಧ್ಯಯನ ಮಾಡಿ ಪರಿಣತಿ ಹೊಂದಿರುತ್ತಾರೆ. ಅವರು ತಮಗೆ ಗೊತ್ತಿಲ್ಲದ ಮತ್ತೂಂದು ವಿಷಯದ ಬಗ್ಗೆ ಮೂಗು ತೂರಿಸದೇ ತಮ್ಮ ಅಭಿಪ್ರಾಯ ನೀಡುತ್ತಾರೆ. ಆದರೆ ಟಿವಿಯಲ್ಲಿ ದರ್ಶನ ನೋಡುವ ಜೋತಿಷಿಗಳು ಈ ಎಲ್ಲ ಕ್ಷೇತ್ರಗಳ ಸಮಸ್ಯೆಗಳ ಬಗ್ಗೆ ಒಬ್ಬರೇ ಪರಿಹಾರ ನೀಡಬಲ್ಲ ಮಹಾ(ಅ)ಜ್ಞಾನಿಗಳಾಗಿರುತ್ತಾರೆ. ಇಂತಹ ಸ್ವಯಂ ಸಿದ್ಧಿಪುರುಷ (ಕೆಲವು ಮಹಿಳಾ ಜೋತಿಷಿಗಳು ಇದ್ದಾರೆ)ರನ್ನು ಮಸೂದೆ ಹೊರಗಿಟ್ಟಿದ್ದು ದುರಂತವೇ ಸರಿ, ಮಸೂದೆಯ ಪರಿಶೀಲನಾ ಸಮಿತಿಯು ಜೋತಿಷ್ಯದಲ್ಲಿ ಹೀಗೆ ಆಗುತ್ತದೆಂದು ಲಿಖೀತವಾಗಿ ಹೇಳುವುದಿಲ್ಲ. ಹೀಗಾಗಿ ಅದನ್ನು ಕಾಯ್ದೆಯ ವ್ಯಾಪ್ತಿಗೆ ತಂದು ಅಪರಾಧ ಎಂದು ಪರಿಗಣಿಸಿದರೆ ಸಾಬೀತು ಪಡಿಸುವುದು ಕಷ್ಟ. ಇಂದು ಜೋತಿಷ್ಯ, ವಾಸ್ತು ಬೃಹತ್ ವಾಣಿಜ್ಯ ಉದ್ದೇಶಗಳಾಗಿ ಸರಕುಗಳಾಗಿವೆ. ಹಣ ಪಡೆದು ಗ್ರಾಹಕ ಸೇವೆ ಒದಗಿಸುತ್ತವೆ. ಆದರೂ ಗ್ರಾಹಕ ಹಿತರಕ್ಷಣೆ ಕಾಯ್ದೆಗೆ ಒಳಪಡುವುದಿಲ್ಲ. ಶಾಪಿಂಗ್ ಕಾಂಪ್ಲೆಕ್ಸ್‌ಗಳು ಇರುವ ರಸ್ತೆಗಳಲ್ಲಿಯೇ ದೊಡ್ಡ ದೊಡ್ಡ ಫಲಕ ಹಾಕಿಕೊಂಡು ನಡೆಸುವ ಜ್ಯೋತಿಷ್ಯಾಲಯಗಳು ಯಾವ ಟ್ರೇಡ್ ಲೈಸನ್ಸ್ ಪಡೆದಿರುತ್ತವೆ? ಇವು ಫೀ ಪಡೆಯು ವುದಿಲ್ಲ, ಕಾಣಿಕೆ, ಉಡುಗೊರೆ ಪಡೆಯುತ್ತವೆ. ರಸೀದಿ ನೀಡುವುದಿಲ್ಲ, ಸೇವೆಯ ವಸ್ತುವಿನ ಗ್ಯಾರಂಟಿ ಕೊಡುವುದಿಲ್ಲ. ಆದರೂ ಅದು ವಂಚನೆಯಲ್ಲ. ನಂಬಿಕೆ. ಒಬ್ಬ ಟಿವಿ ಜೋತಿಷಿ ಪ್ರಶ್ನೆ ಕೇಳಿದ ಗ್ರಾಮೀಣ ಪ್ರದೇಶದ ತಾಯಿಯೊಬ್ಬಳಿಗೆ “”ನಿಮ್ಮ ಮಗಳಿಂದಲೇ ನಿಮಗೆ ಇಷ್ಟೆಲ್ಲ ತೊಂದರೆಯಾಗುತ್ತಿದೆ. ಅವಳ ಜಾತಕ ಸರಿಯಿಲ್ಲ. ಅವಳಿಂದ ನಿಮ್ಮ ಹಾಗೂ ಪತಿಯ ಪ್ರಾಣಕ್ಕೂ ಸಂಚಕಾರವಿದೆ” ಎಂದು ಬೊಗಳೆ ಬಿಟ್ಟಾಗ ಅದನ್ನು ನಂಬಿದ ತಾಯಿ ತನ್ನ ಪತಿಯೊಂದಿಗೆ ಸೇರಿ ತನ್ನದೇ ಕರುಳ ಕುಡಿಯನ್ನು ಹತ್ಯೆಗೈದಿದ್ದು, ಮಾಧ್ಯಮದಲ್ಲಿ ವರದಿಯಾಗಿತ್ತು. ಈಗ ಹತ್ಯೆಗೈದ ತಂದೆ, ತಾಯಿ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಆದರೆ, ಅವರಿಂದ ಕೃತ್ಯ ಮಾಡಿಸಲು ಪ್ರೇರಣೆ ನೀಡಿದ ಜೋತಿಷಿ ಮಾತ್ರ ಟಿವಿಯಲ್ಲಿ ಅದೇ ಠೀವಿಯಲ್ಲಿ ಕುಳಿತು ಮತ್ತೂಬ್ಬ ತಾಯಿಗೆ ಮತ್ತೂಂದು ಕೃತ್ಯವೆಸಗಲು ಪ್ರೇರೇಪಿಸುತ್ತಿರುತ್ತಾನೆ. ಆ ಜೋತಿಷಿಗೆ ಶಿಕ್ಷೆ ಯಾರು ಕೊಡಬೇಕು? ಏನೇ ಇರಲಿ ಮಡೆಸ್ನಾನದಂತಹ ಆಚರಣೆಗಳು, ಅಮಾನ ವೀಯ ಕೃತ್ಯಗಳು, ಮಹಿಳೆಯರನ್ನು ಲೈಂಗಿಕವಾಗಿ ಶೋಷಿ
ಸುವ ಬೆತ್ತಲೆ ಸೇವೆಯಂತಹ ಆಚರಣೆಗಳನ್ನು ಮಟ್ಟಹಾಕುವ ಮಸೂದೆಯನ್ನು ವಿಧಾನಸಭಾ ಚುನಾವಣೆ ಮುಂದಿರುವಾ ಗಲೂ ಧೈರ್ಯವಾಗಿ ಸರಕಾರ ಮಂಡನೆ ಮಾಡುವ ನಿರ್ಧಾರ ಕೈಗೊಂಡಿರುವುದು ಶ್ಲಾಘನೀಯ. ಕಾನೂನು ಸಚಿವರು ಹೇಳಿದಂತೆ ಒಮ್ಮೆ ಕಾನೂನು ಜಾರಿಗೆ ಬಂದ ನಂತರ ಆಗುವ ಬೆಳವಣಿಗೆ ಗಮನಿಸಿ ತಿದ್ದುಪಡಿ ತರುತ್ತಾ ಹೋಗಬಹುದು. ಅದೊಂದು ಸಮಾಧಾನದ ಅಂಶ. ಇದು ಅನೇಕ ವರುಷಗಳ ತಪಸ್ಸಿನ ಹೋರಾಟಕ್ಕೆ ಸಂದ ಜಯ ಎಂದು ಭಾವಿಸೋಣ. ಕುವೆಂಪು ಅವರ ಮಾತಿನಂತೆ “ಮೌಡ್ಯತೆಯ ಮಾರಿಯನು ಹೊರದೂಡಲೇ ತನ್ನಿ, ವಿಜ್ಞಾನದೀವಿಗೆಯ ಹಿಡಿಯಬನ್ನಿ’. ನಾವೆಲ್ಲರೂ ವೈಜ್ಞಾನಿಕ ಮನೋಭಾವದ ಬೆಳಕಿ ನಲ್ಲಿ ನಮ್ಮ ಬದುಕುಗಳನ್ನ ಹಸನುಗೊಳಿಸಿಕೊಳ್ಳೋಣ. ನಮ್ಮ ದೇಶದ ಸಾಮಾಜಿಕ, ಆರ್ಥಿಕ ಹಿನ್ನಡೆಗೂ ಮೂಲ ಕಾರಣ ಮೂಢನಂಬಿಕೆಗಳು ಎನ್ನುವುದನ್ನು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನೂ ನೆನಪಿನಲ್ಲಿಟ್ಟುಕೊಳ್ಳಬೇಕು. ಎಚ್.ನರಸಿಂಹಯ್ಯನವರಂತಹ ವಿಚಾರವಾದಿಗಳು ಕಟ್ಟಿದ ಕರ್ನಾಟಕದಲ್ಲಿ ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್‌ರಂತಹ ವಿಚಾರವಾದಿಗಳು ಹತ್ಯೆಯಾಗಿ ಎಲ್ಲರೂ ದಿಗ್ಭ್ರಮೆಯಲ್ಲಿರುವ ಸಂದರ್ಭದಲ್ಲಿ ಕರ್ನಾಟಕ ಅಮಾನವೀಯ, ದುಷ್ಟ, ವಾಮಾ
ಚಾರ ಪ್ರತಿಬಂಧಕ ಮಸೂದೆ ಮಂಡನೆಗೊಂಡು ಜಾರಿಯಾಗಲು ಹೊರಟಿರುವುದು ಸ್ವಲ್ಪ ಮಟ್ಟಿಗೆ ಮನಸ್ಸಿಗೆ ಸಮಾಧಾನ ತಂದು ಕೊಟ್ಟಿರುವುದು ಸತ್ಯ. ಮಹಾರಾಷ್ಟ್ರದಲ್ಲಿ ಕಾಯ್ದೆ ಜಾರಿಯಾದ ನಂತರ ನರಬಲಿ ಪ್ರಕರಣಗಳಲ್ಲಿ ಇಸ್ಲಾಂ ಧರ್ಮದ ಅನೇಕರು ಶಿಕ್ಷೆಗೊಳಗಾಗಿ ಜೈಲಿನಲ್ಲಿದ್ದಾರೆಂಬುದು ಪ್ರಮುಖ ಅಂಶ. (ಚರ್ಚೆಗೆ ಮುಕ್ತ ಆಹ್ವಾನ- udayavanivedike@manipalmedia.com) ಡಾ| ವಸುಂಧರಾ ಭೂಪತಿ, ಅಧ್ಯಕ್ಷೆ, ಕನ್ನಡ ಪುಸ್ತಕ ಪ್ರಾಧಿಕಾರ