ವಾಷಿಂಗ್ಟನ್ : ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿನಿ ಜಾನ್ವಿ ಕಂಡುಲಾ ಅವರನ್ನು ರಸ್ತೆ ಅಪಘಾತದಲ್ಲಿ ಕೊಂದ ಪೊಲೀಸ್ ಅಧಿಕಾರಿ ಶಿಕ್ಷೆಯಿಂದ ಪಾರಾಗಿದ್ದಾನೆ.
ಹೌದು ಅಮೇರಿಕನ್ ಪ್ರಾಸಿಕ್ಯೂಟರ್ ಪ್ರಕಾರ, ಪೊಲೀಸ್ ಅಧಿಕಾರಿಯ ವಿರುದ್ಧ ಯಾವುದೇ ಸಾಕ್ಷಾಧಾರಗಳು ಸಿಕ್ಕಿರದ ಕರಣ ಪೊಲೀಸ್ ಅಧಿಕಾರಿ ಶಿಕ್ಷೆಯಿಂದ ಹೊರಬಂದಿದ್ದಾರೆ ಎನ್ನಲಾಗಿದೆ.
ಅಲ್ಲದೆ ಬಾಡಿ ಫೂಟೇಜ್ ಕ್ಯಾಮೆರಾದ ವೈರಲ್ ವೀಡಿಯೊವನ್ನು ನ್ಯಾಯಾಲಯವು ಸಾಕ್ಷಿಯಾಗಿ ಪರಿಗಣಿಸಿಲ್ಲ, ಆದ್ದರಿಂದ ಪೊಲೀಸ್ ಅಧಿಕಾರಿಯ ವಿರುದ್ಧ ಪ್ರಕರಣವನ್ನು ದಾಖಲಿಸಲಾಗುವುದಿಲ್ಲ. ಬುಧವಾರ, ಕಿಂಗ್ ಕೌಂಟಿ ಪ್ರಾಸಿಕ್ಯೂಟರ್ ಕಚೇರಿಯು ಸಿಯಾಟಲ್ ಪೊಲೀಸ್ ಅಧಿಕಾರಿ ಕೆವಿನ್ ಡೇವ್ ವಿರುದ್ಧ ಕ್ರಿಮಿನಲ್ ಆರೋಪ ಮುಂದುವರೆಸಲು ಸಾಧ್ಯವಿಲ್ಲ ಎಂದು ಫಾಕ್ಸ್ -13 ವರದಿ ಮಾಡಿದೆ.
“ಕಂಡುಲಾ ಅವರ ಸಾವು ಹೃದಯವಿದ್ರಾವಕವಾಗಿದೆ ಮತ್ತು ಇದು ಪ್ರಪಂಚದಾದ್ಯಂತದ ಜನರ ಮೇಲೆ ಪರಿಣಾಮ ಬೀರಿದೆ” ಎಂದು ಕಿಂಗ್ ಕೌಂಟಿ ಪ್ರಾಸಿಕ್ಯೂಟಿಂಗ್ ಅಟಾರ್ನಿ ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜನವರಿ 23, 2023 ರಂದು ತುರ್ತು ಕರೆ ಸ್ವೀಕರಿಸಿದ ಸಿಯಾಟಲ್ ಪೊಲೀಸ್ ಅಧಿಕಾರಿ ಕೆವಿನ್ ಡೇವ್ ಅವರು ಕಾರು ಚಲಾಯಿಸುವ ವೇಳೆ ಭಾರತೀಯ ವಿದ್ಯಾರ್ಥಿನಿಗೆ ಡಿಕ್ಕಿ ಹೊಡೆದಿದ್ದರು ಡಿಕ್ಕಿಯ ರಭಸಕ್ಕೆ 23 ವರ್ಷದ ಭಾರತೀಯ ವಿದ್ಯಾರ್ಥಿನಿ ಜಾನ್ವಿ ಕಂದುಲಾ 100 ಅಡಿ ದೂರ ಬಿದ್ದಿದ್ದಳು. ವರದಿಯ ಪ್ರಕಾರ ರಸ್ತೆ ಅಪಘಾತದ ಸಂದರ್ಭದಲ್ಲಿ ಕೆವಿನ್ ಡೇವ್ ತನ್ನ ವಾಹನವನ್ನು ಗಂಟೆಗೆ 119 ಕಿಲೋಮೀಟರ್ ವೇಗದಲ್ಲಿ ಚಲಾಯಿಸುತ್ತಿದ್ದರು ಎನ್ನಲಾಗಿದೆ. ಅಲ್ಲದೆ ವಿದ್ಯಾರ್ಥಿನಿಯ ಸಾವಿನ ವಿಚಾರದಲ್ಲಿ ಪೊಲೀಸ್ ಅಧಿಕಾರಿ ಕೀಳು ಮಟ್ಟದ ಮಾತುಗಳನ್ನು ಆಡುತ್ತಿದ್ದರು ಎನ್ನಲಾಗಿದ್ದು ಇದರ ವಿಚಾರವಾಗಿ ಪ್ರತಿಭಟನೆಗಳು ನಡೆದಿದ್ದವು.
ಇದನ್ನೂ ಓದಿ: Summons: ಮದ್ಯ ನೀತಿ ಪ್ರಕರಣ… ತನಿಖಾ ಸಂಸ್ಥೆಯಿಂದ ಕೇಜ್ರಿವಾಲ್‌ಗೆ 7ನೇ ಬಾರಿಗೆ ಸಮನ್ಸ್