ಬಹುತೇಕ ನಾವೆಲ್ಲರೂ Horror(ಭಯಾನಕ) ಸಿನಿಮಾಗಳನ್ನು ನೋಡಿರುತ್ತೇವೆ. ಆದರೆ ಭಾರತದ ಹಲವಾರು ಪ್ರದೇಶಗಳಲ್ಲಿ ದೆವ್ವಗಳು ಓಡಾಡುವ ಸ್ಥಳಗಳ ಬಗ್ಗೆ ಕೇಳಿದ್ದೀರಾ? ಅಂತಹ ಒಂದು ಕುತೂಹಲಕಾರಿ ಘಟನೆ ಬಗ್ಗೆ ನೀವು ತಿಳಿದುಕೊಳ್ಳಬೇಕು. ಪಶ್ಚಿಮಬಂಗಾಳದ “ಈ” ರೈಲ್ವೆ ನಿಲ್ದಾಣ ಕಳೆದ 42 ವರ್ಷಗಳಿಂದ ಯಾಕೆ ಬಂದ್ ಮಾಡಲಾಗಿದೆ ಎಂಬುದೇ ವಿಚಿತ್ರ ಸಂಗತಿಯಾಗಿದೆ.
ಇದನ್ನೂ ಓದಿ:ಮತ್ತೆ ಮದುವೆ ಎಂದ ನರೇಶ್-ಪವಿತ್ರಾ ಲೋಕೇಶ್
ಈ ಭಯಾನಕ ರೈಲ್ವೆ ನಿಲ್ದಾಣ ಜಾರ್ಖಂಡ್ ಗಡಿ ಸಮೀಪದ ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಕೋಟ್ಶಿಲಾ ಮುರಿ ವಿಭಾಗದಲ್ಲಿದೆ. ಜನರು ಎಷ್ಟು ಭಯಗೊಂಡಿದ್ದಾರೆಂದರೆ ಈ ರೈಲ್ವೆ ನಿಲ್ದಾಣದ ಹೆಸರನ್ನು ಕೇಳಿಸಿಕೊಳ್ಳಲು ಹೆದರುತ್ತಾರಂತೆ. ಇಂತಹ ಭೀತಿಯ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಕಳೆದ 42 ವರ್ಷಗಳಿಂದಲೂ ಕೋಟ್ಶಿಲಾ ರೈಲ್ವೆ ನಿಲ್ದಾಣವನ್ನು ಬಂದ್ ಮಾಡಿದ್ದಾರೆ. ಇಂದಿಗೂ ಕೂಡಾ ಈ ಸ್ಟೇಷನ್ ಮೂಲಕ ರೈಲು ಹಾದು ಹೋಗುವಾಗ ರೈಲಿನೊಳಗಿರುವ ಪ್ರಯಾಣಿಕರು ಮೌನಕ್ಕೆ ಶರಣಾಗುತ್ತಾರಂತೆ.
ವರದಿಯ ಪ್ರಕಾರ, ಈ ರೈಲ್ವೆ ನಿಲ್ದಾಣಕ್ಕೆ ಯಾರೂ ಕೂಡಾ ಭೇಟಿ ನೀಡುವುದಿಲ್ಲ. ಕೇವಲ ಮನುಷ್ಯರು ಮಾತ್ರವಲ್ಲ, ಪ್ರಾಣಿಗಳೂ ಕೂಡಾ ರೈಲ್ವೆ ನಿಲ್ದಾಣದಲ್ಲಿ ಕಾಣಸಿಗುವುದಿಲ್ಲ ಎಂದು ತಿಳಿಸಿದೆ.
Ghost ನಿಲ್ದಾಣವಾಗಿದ್ದು ಹೇಗೆ?
ಭಯಾನಕ ಕಥೆಯನ್ನು ಹೊಂದಿರುವ ರೈಲ್ವೆ ನಿಲ್ದಾಣದ ಹೆಸರು ಬೇಗಂಕೋಡರ್ . ಇದು 1960ರ ದಶಕದಲ್ಲಿ ಜನನಿಬಿಢ ನಿಲ್ದಾಣವಾಗಿತ್ತು. ಪುಟ್ಟ ಕುಗ್ರಾಮವಾಗಿರುವ ಬೇಗಂಕೋಡರ್ ನಲ್ಲಿ ರಾಣಿ ಸಂತಾಲ್ಸ್ ಅವರ ನೆರವಿನೊಂದಿಗೆ ರೈಲ್ವೆ ನಿಲ್ದಾಣ ನಿರ್ಮಾಣ ಮಾಡಲಾಗಿತ್ತು. ಅಂದು ಊರಿನ ಜನರು ತುಂಬಾ ಖುಷಿಪಟ್ಟಿದ್ದರು. ಆದರೆ ಗ್ರಾಮಸ್ಥರ ಸಂತೋಷ ಹೆಚ್ಚು ಸಮಯ ಮುಂದುವರಿಯಲಿಲ್ಲ. ಮೂಲಗಳ ಪ್ರಕಾರ, 1967ರಲ್ಲಿ ಬೇಗಂಕೋಡರ್ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್, ತಾನು ರಾತ್ರಿ ರೈಲ್ವೆ ಹಳಿ ಮೇಲೆ ದೆವ್ವವನ್ನು ಕಂಡಿರುವುದಾಗಿ ಹೇಳಿದ್ದರು. ಮಹಿಳೆಯ ಪ್ರೇತ ರೈಲು ಬರುತ್ತಿದ್ದಂತೆ ಅದರ ಜೊತೆ ಓಡೋಡಿ ಬರುತ್ತಾ, ನಿಲ್ದಾಣ ತಲುಪುತ್ತಿದ್ದಂತೆಯೇ ಮಾಯವಾಗುತ್ತಿದ್ದಳಂತೆ!
ಅಂದು ಸ್ಟೇಷನ್ ಮಾಸ್ಟರ್ ಘಟನೆ ಬಗ್ಗೆ ವಿವರಿಸಿದ್ದು ಹೀಗೆ, ರಾತ್ರಿ ಹೊತ್ತು ರೈಲ್ವೆ ಹಳಿ ಮೇಲೆ ಬಿಳಿ ಸೀರೆಯುಟ್ಟ ದೆವ್ವ ಓಡಾಡುತ್ತದೆ ಎಂಬುದಾಗಿತ್ತು. ಈ ಸುದ್ದಿ ಎಲ್ಲೆಡೆ ಹಬ್ಬಿತ್ತು. ಇದಾದ ನಂತರ ತಾವೂ ಕೂಡಾ ಭೂತವನ್ನು ಕಂಡಿರುವುದಾಗಿ ಹೇಳತೊಡಗಿದ್ದರು. ಹಿಂದೆ ಇದೇ ರೈಲ್ವೆ ಹಳಿಯ ಮೇಲೆ ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿಯೇ ದೆವ್ವವಾಗಿದ್ದಾಳೆ ಎಂದು ಜನರು ಮಾತನಾಡತೊಡಗಿದ್ದರು. ಇಷ್ಟೆಲ್ಲಾ ಊಹಾಪೋಹಗಳ ನಡುವೆ ರೈಲ್ವೆ ಇಲಾಖೆ ಈ ಸುದ್ದಿಯನ್ನು ನಂಬಲು ನಿರಾಕರಿಸಿತ್ತು. ಇದಾದ ಕೆಲವು ದಿನಗಳ ನಂತರ ಸ್ಟೇಷನ್ ಮಾಸ್ಟರ್ ಮತ್ತು ಕುಟುಂಬ ಸದಸ್ಯರು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದರು. ಬಳಿಕ ಇದು ಊಹಾಪೋಹವಲ್ಲ, ನೈಜ ಘಟನೆ ಎಂದು ಜನರು ನಂಬತೊಡಗಿದರು. ಸ್ಟೇಷನ್ ಮಾಸ್ಟರ್ ಕೊನೆಯುಸಿರೆಳೆದ ಘಟನೆ ನಂತರ ಯಾವ ಉದ್ಯೋಗಿಯೂ ಬೇಗಂಕೋಡರ್ ಸ್ಟೇಷನ್ ನಲ್ಲಿ ಕೆಲಸ ಮಾಡಲು ನಿರಾಕರಿಸಿದ್ದರು. ಆದರೂ ಉದ್ಯೋಗಿಗಳನ್ನು ಬೇಗಂಕೋಡರ್ ಗೆ ಕಳುಹಿಸಲು ಪ್ರಯತ್ನಿಸಿದ್ದರೂ ಯಾರೂ ಕೂಡಾ ಅಲ್ಲಿಗೆ ತೆರಳಲು ಸಿದ್ದರಾಗಿಲ್ಲವಾಗಿತ್ತು. ಕೊನೆಗೆ ರೈಲ್ವೆ ನಿಲ್ದಾಣವನ್ನು ಬಂದ್ ಮಾಡುವುದಾಗಿ ಅಧಿಕಾರಿಗಳು ಘೋಷಿಸಿಬಿಟ್ಟಿದ್ದರು.
ದೆವ್ವದ ನಿಲ್ದಾಣ ಎಂದು ಪ್ರಚಾರವಾದ ಮೇಲೆ ಬೇಗಂಕೋಡರ್ ರೈಲ್ವೆ ಸ್ಟೇಷನ್ ಬಿಕೋ ಎನ್ನತೊಡಗಿತ್ತು. ಹೀಗೆ 1990ರಲ್ಲಿ ಮತ್ತೆ ರೈಲ್ವೆ ನಿಲ್ದಾಣ ಪುನರಾರಂಭಿಸಬೇಕು ಎಂದು ಸ್ಥಳೀಯರು ಬೇಡಿಕೆ ಇಟ್ಟಿದ್ದರು. ಸುಮಾರು 42 ವರ್ಷದ ನಂತರ 2009ರಲ್ಲಿ ರೈಲ್ವೆ ಸಚಿವೆಯಾಗಿದ್ದ ಮಮತಾ ಬ್ಯಾನರ್ಜಿ, ಬೇಗರಕೋಡಮ್ ರೈಲ್ವೆ ನಿಲ್ದಾಣವನ್ನು ಪುನರಾರಂಭಿಸಿದ್ದರು. ಇಲ್ಲಿ ರೈಲುಗಳು ಬಂದು ನಿಲ್ಲುತ್ತವೆ ವಿನಃ ಇಂದಿಗೂ ಯಾವುದೇ ಒಬ್ಬ ರೈಲ್ವೆ ಉದ್ಯೋಗಿ ಕಾರ್ಯನಿರ್ವಹಿಸುತ್ತಿಲ್ಲ!