Advertisement

ಬಿಜೆಪಿ ಆಡಳಿತ ಇರುವ ರಾಜ್ಯಗಳಬಗ್ಗೆ ಮಾತ್ರ ಚರ್ಚೆ ಏಕೆ?

12:19 PM Oct 14, 2021 | Team Udayavani |

ಬಾಸ್ಟನ್‌: ಉತ್ತರ ಪ್ರದೇಶದ ಲಖೀಂಪುರಖೇರಿಯಲ್ಲಿ ರೈತರ ಹತ್ಯೆಯಾಗಿರುವುದು ಖಂಡನೀಯ. ಪ್ರಕರಣದ ಬಗ್ಗೆ ಕೇಂದ್ರ ಸರ್ಕಾರ ಮೌನವಾಗಿ ಕುಳಿತಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸ್ಪಷ್ಟಪಡಿಸಿದ್ದಾರೆ. ಅಮೆರಿಕ ಪ್ರವಾಸದಲ್ಲಿರುವ ಅವರು ಹಾರ್ವರ್ಡ್‌ ಕೆನೆಡಿ ಸ್ಕೂಲ್‌ನಲ್ಲಿ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

“ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಏನಾದರೂ ಘಟನೆಗಳಾದರೆ ಮಾತ್ರ ಎಲ್ಲೆಡೆ ಚರ್ಚೆಯಾಗುತ್ತದೆ. ಭಾರತದ ಇತರ ರಾಜ್ಯಗಳಲ್ಲಿಯೂ ಅಂಥ ಘಟನೆಗಳ ಬಗ್ಗೆ ಯಾಕೆ ಮೌನ ಕಂಡುಬರುತ್ತದೆ. ಅದುವೇ ನನಗೆ ಇರುವ ಚಿಂತೆ. ನಾಲ್ವರು ರೈತರ ಹತ್ಯೆಯಾದದ್ದು ಖಂಡನೀಯವೇ’ ಎಂದು ವಿತ್ತ ಸಚಿವರು ಹೇಳಿದ್ದಾರೆ.

ನೊಬೆಲ್‌ ಪುರಸ್ಕೃತ ಅಮಾರ್ತ್ಯ ಸೆನ್‌ ವಿರುದ್ಧವೂ ಕಟಕಿಯಾಡಿದ ನಿರ್ಮಲಾ ಸೀತಾರಾಮನ್‌ ಅವರಂಥ ವ್ಯಕ್ತಿಗಳು ದೇಶದ ಇತರ ಭಾಗಗಳಲ್ಲಿ ಆಗುತ್ತಿರುವ ಘಟನೆಗಳ ಬಗ್ಗೆಯೂ ಧ್ವನಿ ಎತ್ತಬೇಕು ಎಂದು ಲಘುವಾಗಿ ಹೇಳಿದ್ದಾರೆ. ರೈತ ಕಾಯ್ದೆಗಳ ವಿರುದ್ಧ ಪಂಜಾಬ್‌ ಮತ್ತು ಹರ್ಯಾಣ, ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಮಾತ್ರ ಪ್ರತಿಭಟನೆ ನಡೆಯುತ್ತಿದೆ ಎಂದಿದ್ದಾರೆ.

ಕೊರತೆ ಇಲ್ಲ: ದೇಶದಲ್ಲಿ ಕಲ್ಲಿದ್ದಲು ಕೊರತೆ ಉಂಟಾಗಿಲ್ಲ. ಈ ಬಗ್ಗೆ ಇರುವ ವರದಿಗಳು ಆಧಾರ ರಹಿತ ಎಂದಿದ್ದಾರೆ ನಿರ್ಮಲಾ. ದೇಶದಲ್ಲಿ ವಿದ್ಯುತ್‌ ಅಗತ್ಯಕ್ಕಿಂತ ಹೆಚ್ಚಾಗಿಯೇ ಇದೆ ಎಂದಿದ್ದಾರೆ.

ಸುಧಾರಣೆ ಬೇಕು: ಐಎಂಎಫ್, ವಿಶ್ವ  ಬ್ಯಾಂಕ್‌, ಅಂತಾರಾಷ್ಟ್ರೀಯ ಹಣಕಾಸು ನಿಧಿ ಸೇರಿದಂತೆ ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಕೂಡ ಆಮೂಲಾಗ್ರ ಬದಲಾವಣೆಯಾಗಬೇಕು. ಈ ಮೂರು ಸಂಸ್ಥೆಗಳು ನಿಜವಾಗಿ ಅಗತ್ಯ ಇರುವ ರಾಷ್ಟ್ರಗಳ ಪರವಾಗಿ ಮಾತನಾಡುವುದಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next