ಕೊಲಂಬೊ: ಲಂಕಾ ಪ್ರೀಮಿಯರ್ ಲೀಗ್ (ಎಲ್ ಪಿಎಲ್) ನಲ್ಲಿ ಭಾರತದ ಮಾಜಿ ಆಟಗಾರ ಸುರೇಶ್ ರೈನಾ ಆಡಲಿದ್ದಾರೆ ಎಂಬ ಸುದ್ದಿ ಭಾರತೀಯ ಕ್ರೀಡಾಭಿಮಾನಿಗಳಿಗೆ ಸಂತಸ ಮೂಡಿಸಿತ್ತು. ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ಆಟಗಾರ ಲಂಕನ್ ಲೀಗ್ ನಲ್ಲಿ ಬ್ಯಾಟ್ ಬೀಸುವುದನ್ನು ನೋಡಲು ಕಾತರರಾಗಿದ್ದರು. ಆದರೆ ಬುಧವಾರ ನಡೆದ ಹರಾಜಿನಲ್ಲಿ ರೈನಾ ಹೆಸರು ಬಾರದೆ ಇದ್ದಿದ್ದು ಹಲವು ಗುಮಾನಿಗಳಿಗೆ ಕಾರಣವಾಗಿದೆ.
11ನೇ ಸೆಟ್ ನ ಹರಾಜಿನಲ್ಲಿ ಸುರೇಶ್ ರೈನಾ ಹೆಸರಿತ್ತು. ಆದರೆ ಹರಾಜು ನಡೆಸುತ್ತಿದ್ದ ಚಾರು ಶರ್ಮಾ ಅವರು ರೈನಾ ಹೆಸರನ್ನು ಕಡೆಗಣಿಸಿದರು. ರೈನಾ ಹೊರತು ಪಡಿಸಿ ಉಳಿದೆಲ್ಲರ ಹೆಸರನ್ನು ಹರಾಜಿನಲ್ಲಿ ಕೂಗಲಾಯಿತು. ಇದು ಭಾರತೀಯ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ:KISSING SCENE: 21ರ ನಟಿಗೆ ಲಿಪ್‌ಲಾಕ್ ಮಾಡಿ ಟ್ರೋಲಾದ 49ರ ನಟ; ಅಸಹ್ಯವೆಂದ ನೆಟ್ಟಿಗರು
ಇದರ ಬಗ್ಗೆ ಇದುವರೆಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಯಾವುದೇ ಸ್ಪಷ್ಟೀಕರಣ ನೀಡಿಲ್ಲ. ಆದರೆ ವರದಿಯ ಪ್ರಕಾರ ಸುರೇಶ್ ರೈನಾ ಅವರು ಲಂಕಾ ಪ್ರೀಮಿಯರ್ ಲೀಗ್ ನಲ್ಲಿ ಆಡಲು ಹೆಸರು ನೋಂದಾಯಿಸಿಲ್ಲ. ಅವರ ಒಪ್ಪಿಗೆ ಇಲ್ಲದೆ ಲಂಕಾ ಮಂಡಳಿ ರೈನಾ ಹೆಸರು ಬಳಸಿದೆ ಎನ್ನಲಾಗಿದೆ.
ಜಾಗರಣ್ ನ್ಯೂಸ್ ವರದಿಗಾರ ಅಭಿಷೇಕ್ ತ್ರಿಪಾಠಿ ತಮ್ಮ ಟ್ವಿಟರ್ ಪ್ರೊಫೈಲ್ ನಲ್ಲಿ ಪೋಸ್ಟ್ ಮಾಡಿದ್ದು, ‘ರೈನಾ ಹರಾಜಿಗೆ ನೋಂದಾಯಿಸಿಲ್ಲ. ಲಂಕಾ ಪ್ರೀಮಿಯರ್ ಲೀಗ್ ನಲ್ಲಿ ಆಡುವುದಿಲ್ಲ’ ಎಂದು ಅಭಿಮಾನಿಗಳಿಗೆ ತಿಳಿಸಿದರು.
ತಮ್ಮ ಬ್ರ್ಯಾಂಡ್ ಅನ್ನು ಪ್ರಚಾರ ಮಾಡಲು ರೈನಾ ಅವರ ಹೆಸರನ್ನು ಶ್ರೀಲಂಕಾ ಕ್ರಿಕೆಟ್ ಉದ್ದೇಶಪೂರ್ವಕವಾಗಿ ಬಳಸಿದೆ ಎಂದು ಟ್ವಿಟರ್ ನಲ್ಲಿ ಅನೇಕ ಅಭಿಮಾನಿಗಳು ಟೀಕೆ ಮಾಡಿದ್ದಾರೆ. ಆದರೆ ರೈನಾ ಅಥವಾ ಎಸ್‌ಎಲ್‌ಸಿ ಹೇಳಿಕೆಯನ್ನು ಬಿಡುಗಡೆ ಮಾಡಿದ ನಂತರ ವಿಷಯಗಳು ಸ್ಪಷ್ಟವಾಗಬಹುದು.