Advertisement
ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವ ಸಂಬಂಧ ಶಾಸಕರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ತಾವಿದ್ದ ಸ್ಥಳದಲ್ಲೇ ದಿಢೀರ್ ಸಭೆ ನಡೆಸಿದ ಅವರು, ನಾಗರಿಕರ ಸಮ್ಮುಖದಲ್ಲೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕಳೆದ 4-5 ತಿಂಗಳ ಹಿಂದೆಯೇ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈಗಲೂ ಅರ್ಧದಷ್ಟು ಕಾಮಗಾರಿ ಸಹ
ಆಗಿಲ್ಲ. ಈ ರೀತಿಯಾದರೆ ಜನರು ಜನಪ್ರತಿನಿಧಿಗಳನ್ನು ದೂರುವುದಿಲ್ಲವೆ? ಅಧಿಕಾರಿಗಳು ಮಾಡಿದ ತಪ್ಪಿಗೆ ನಾವು ಉತ್ತರ ನೀಡಬೇಕಿದೆ ಎಂದು ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಹಳೆ ಭಾಗದ ಎಲ್ಲಾ ಕಾಮಗಾರಿಗಳನ್ನು ಆದಷ್ಟು ಶೀಘ್ರ ಮುಗಿಸಬೇಕು. ಜತೆಗೆ ಗುಣಮಟ್ಟ ಕಾಪಾಡಿಕೊಳ್ಳಬೇಕು. ಈ
ಭಾಗದಲ್ಲಿ ಕಾಮಗಾರಿಗಳ ವಿಳಂಬದಿಂದ ವ್ಯಾಪಾರ-ವಹಿವಾಟಿಗೆ ಸಾಕಷ್ಟು ತೊಂದರೆ ಆಗಿದೆ. ವರ್ತಕರು ಸಹ ತಾಳ್ಮೆಯಿಂದ ಇದ್ದಾರೆ. ಅವರ ತಾಳ್ಮೆ ಪರೀಕ್ಷಿಸದೆ ಕಾಮಗಾರಿ ಬೇಗ ಮುಗಿಸಿ, ಇಲ್ಲ ಅವರಿಗೆ ಆಗಿರುವ ನಷ್ಟ ತುಂಬಿಕೊಡಿ. ಈಗ ನಡೆಸುತ್ತಿರುವ ಕಾಮಗಾರಿಗಳೆಲ್ಲ ಮುಕ್ತಾಯ ಆದ ನಂತರವೇ ಮುಂದಿನ ಕಾಮಗಾರಿ ಆರಂಭಿಸಬೇಕು.
Related Articles
Advertisement