Advertisement
ಎ. 18ರ ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವ ಉದಯವಾಣಿಯ ವಿಶೇಷ ಅಭಿಯಾನ. ಇದರಲ್ಲಿ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು/ ತರುಣ ಮತದಾರರು ಮತದಾನದ ಮಹತ್ವದ ಕುರಿತು ಬರೆಯುತ್ತಿದ್ದಾರೆ.ಬನ್ನಿ ಪ್ರಜಾತಂತ್ರವನ್ನು ಬೆಂಬಲಿಸೋಣ, ಮತದಾನ ಮಾಡೋಣ.
ಮತ ಹಾಕು ವುದು ಪ್ರತಿಯೊಬ್ಬ ಪ್ರಜೆಯ ಒಂದು ಆದ್ಯ ಕರ್ತವ್ಯ. ಇದರಿಂದ ಆತನು ತನ್ನ ಸ್ವಾತಂತ್ರ್ಯವನ್ನು ಗುರುತಿಸಿಕೊಳ್ಳಬಹುದು.ಮತ ದಾನವು ಪ್ರಜೆಗಳಿಗೆ ತಮ್ಮ ಆಯ್ಕೆಯ ಸ್ವಾತಂತ್ರ್ಯವನ್ನು ಖಾತ್ರಿಪಡಿಸುತ್ತದೆ. ಮತ ಹಾಕುವುದರಿಂದ ತಮಗೆ ಬೇಕಾದ ಸರಕಾರವನ್ನು ಅಧಿಕಾರಕ್ಕೆ ತರಲು ಅವಕಾಶ ವನ್ನು ಒದಗಿಸುತ್ತದೆ. ಮತದಾನವು ಒಂದು ಹೊಸ ಸರ್ಕಾರದ ಬದಲಾವಣೆಗೆ ಅವಕಾಶವನ್ನು ನೀಡುತ್ತದೆ.
-ಶೈಲಿಕಾ ಅಮಿನ್, ವೈಕುಂಠ ಬಾಳಿಗಾ ಕಾಲೇಜು, ಉಡುಪಿ ವಿದ್ಯಾವಂತರಿಗೇ ಅಧಿಕಾರ ಕೊಡಿ
ಮತದಾನ ಮೂಲಕ ನಾವು ನಮ್ಮ ಹಕ್ಕು ಹಾಗೂ ಬಾಧ್ಯತೆಗಳ ಬಗ್ಗೆ ಧ್ವನಿ ಎತ್ತಿ ಮಾತನಾಡುವ ಅವಕಾಶವನ್ನು ಪಡೆದುಕೊಂಡಿದ್ದೇವೆ. ಮತ ನೀಡದೆ ಯಾವುದೇ ಸರಕಾರದ ಕಾರ್ಯವೈಖರಿಯ ಬಗ್ಗೆ ಮಾತನಾಡುವುದು ಖಂಡಿತ ತಪ್ಪಾಗುತ್ತದೆ. ಅವಿದ್ಯಾವಂತ ರಾಜಕಾರಣಿಗಳಿಗೆ ಅಧಿಕಾರ ನೀಡಬಾರದು. ಅದರಿಂದ ಸಾರ್ವಜನಿಕ ವ್ಯವಸ್ಥೆ ನಶಿಸುತ್ತದೆ.
-ಹರ್ಷಿಣಿ ಪೂಜಾರಿ, ವೈಕುಂಠ ಬಾಳಿಗಾ ಕಾಲೇಜು, ಉಡುಪಿ
Related Articles
ಮತದಾನ ಮಾಡುವುದು ನಮ್ಮೆಲ್ಲರ ಹಕ್ಕು ಹಾಗೂ ಕರ್ತವ್ಯ. ನಮ್ಮ ಎಲ್ಲ ಅಗತ್ಯಗಳನ್ನು ಈಡೇರಿಸಿಕೊಳ್ಳಲು ನಾವು ಸೂಕ್ತವಾದ ಅಭ್ಯರ್ಥಿಯನ್ನು ಮತದಾನ ಮಾಡುವುದರ ಮೂಲಕ ಆರಿಸಬೇಕು. ದೇಶದ ಅಭಿವೃದ್ಧಿ ಮತದಾರರ ಕೈಯಲ್ಲಿದೆ. ಮತ ಅಮೂಲ್ಯವಾದ ಕಾರಣ ನಾವು ಮತದಾನ ಮಾಡದಿದ್ದರೆ ನಮ್ಮ ದೇಶಕ್ಕೆ ನಷ್ಟವಾಗುತ್ತದೆ. ಹಾಗಾಗಿ ಈ ಬಾರಿ ಎಲ್ಲರೂ ತಪ್ಪದೇ ಮತದಾನ ಮಾಡಿ ಸೂಕ್ತವಾದ ಅಭ್ಯರ್ಥಿಯನ್ನು ಆಯ್ಕೆ ಮಾಡೋಣ.
– ರಮ್ಯಾ ಬಿ., ಎಂ.ಜಿ.ಎಂ. ಕಾಲೇಜು,ಉಡುಪಿ
Advertisement
ಮತ ಚಲಾವಣೆ, ರಾಷ್ಟ್ರ ಬದಲಾವಣೆಅತ್ಯಂತ ಬಲಿಷ್ಠ ರಾಷ್ಟ್ರವಾಗಿ ಭಾರತ ಹೊರಹೊಮ್ಮಬೇಕು.ಇದಕ್ಕಾಗಿ ಪ್ರತಿಯೋರ್ವರು ಮತ ಚಲಾಯಿಸಬೇಕು. ದೇಶದ ಸಮಗ್ರ ಅಭಿವೃದ್ಧಿಗೆ ನಮ್ಮ ಮತ ನಿರ್ಣಾಯಕ. ಆದುದರಿಂದ ಈ ಪವಿತ್ರ ಕಾರ್ಯದಲ್ಲಿ ಪ್ರತಿಯೊಬ್ಬ ಪ್ರಜೆಯೂ ಪಾಲ್ಗೊಳ್ಳಬೇಕು. ರಾಷ್ಟ್ರದ ಬದಲಾವಣೆಗೆ ಮತದಾನವೇ ಮೂಲ ಅಸ್ತ್ರ. ಯುವ ಜನಾಂಗ ಇತರರಿಗೆ ಮತದಾನಕ್ಕೆ ಪ್ರೇರಣೆ ನೀಡಬೇಕು.
– ಎಸ್. ರಂಜಿತ್ ಶೆಟ್ಟಿ ಬೆಳ್ವೆ, ಸ.ಪ್ರ.ದ. ಕಾಲೇಜು, ಶಂಕರನಾರಾಯಣ ಕುಟುಂಬದಷ್ಟೇ ದೇಶವೂ ಮುಖ್ಯ
ನಮ್ಮನ್ನು ಯಾರು ಆಳಬೇಕು ಎಂದು ಚುನಾಯಿಸುವ ಹಕ್ಕು ನಮಗಿದೆ. ಒಂದು ಮತದಿಂದ ಏನೂ ಬದಲಾಗದು ಎಂದು ಎಲ್ಲರೂ ಕುಳಿತರೆ ದೇಶದ ಸ್ಥಿತಿ ಅವನತಿಯತ್ತ ಸಾಗಲಿದೆ. ಇಂದು ದೇಶದಲ್ಲಿ ಪಕ್ಷದ ಗೆಲುವನ್ನು ಶೇ 20 ರಷ್ಟು ಜನ ನಿರ್ಧರಿಸುತ್ತಿದ್ದಾರೆ. ಹೀಗಾಗಬಾರದು. ಕುಟುಂಬದಷ್ಟೇ ದೇಶವೂ ಮುಖ್ಯ. ನಮಗಾಗಿ ಮತ ಚಲಾಯಿಸಬೇಕು. ಪ್ರಜಾಪ್ರಭುತ್ವವನ್ನು ಸುಭದ್ರವಾಗಿಡಲು ಮತ ಚಲಾಯಿಸಲೇ ಬೇಕು.
– ಪೂಜಾಶ್ರೀ, ಡಾ| ಶಂಕರ ಅಡ್ಯಂತಾಯ ಕಾಲೇಜು, ನಿಟ್ಟೆ ಮತದಾನ ರಾಷ್ಟ್ರದ ಅಡಿಪಾಯ
ಮತದಾನವು ನಾಳೆಯ ನಾಯಕರನ್ನು ಆಯ್ಕೆ ಮಾಡುತ್ತದೆ. ಮತದಾನ ನಾಗರಿಕತ್ವದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಅನೇಕ ಜನರು ಯೋಚಿಸುವುದು ಒಂದು ಮತವು ಬದಲಾವಣೆ ಮಾಡುವುದಿಲ್ಲವೆಂದು ಅದರೆ ರಾಷ್ಟ್ರದ ಅಡಿಪಾಯಕ್ಕೆ ಇದೇ ಮುಖ್ಯ. ಇದು ಪ್ರತಿಯೊಬ್ಬರ ಜನ್ಮಸಿದ್ಧ ಹಕ್ಕು.
– ಮೆಲ್‌ರಿನ್ ಗ್ರೇಸಿಲ್ಲಾ ಪಿರೇರಾ, ಡಾ| ಶಂಕರ ಅಡ್ಯಂತಾಯ ಕಾಲೇಜು, ನಿಟ್ಟೆ ಮತದಾನದಿಂದ ಪ್ರಶ್ನಿಸುವ ಹಕ್ಕು
ಜವಾಬ್ದಾರಿಯುತ ಪ್ರಜೆಯಾಗಿ ಉತ್ತಮ ನಾಯಕರ ಆಯ್ಕೆಗಾಗಿ ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ. ಮತದಾನ ಮಾಡುವುದರಿಂದ ದೇಶದ ಅಭಿವೃದ್ಧಿಗೂ ನಾವು ಕಾರಣವಾದಂತಾಗುತ್ತದೆ. ಯುವ ಜನರು ಮತದಾನ ಮಾಡದಿದ್ದರೆ ಭವಿಷ್ಯದಲ್ಲಿ ನಾವು ಪ್ರಶ್ನೆ ಮಾಡುವ ಹಕ್ಕನ್ನು ಕಳೆದುಕೊಳ್ಳುತ್ತೇವೆ. ಭ್ರಷ್ಟಾಚಾರ ಮುಕ್ತ ದೇಶವನ್ನಾಗಿಸಲು ಮತದಾನ ಮಾಡಬೇಕು. ಮತ ಹಾಕಿ ದೇಶದ ಅಭಿವೃದ್ಧಿಗೆ ಕಾರಣರಾಗೋಣ.
– ಶ್ರೇಯಾ ಪಾಲನ್, ವಿದ್ಯಾನಿಕೇತನ ಪ್ರ.ದರ್ಜೆ ಕಾಲೇಜು ಕಾಪು ಒಂದು ಮತ ದೇಶದ ಅಭಿವೃದ್ಧಿಗೆ ಹಿತ
ಯುವ ಜನತೆ ಯೋಚಿಸಿ ಮತ ಚಲಾಯಿಸಬೇಕು. ದೇಶಕ್ಕಾಗಿ ಹಿರಿಯರಯ ಮಾಡಿದ ತ್ಯಾಗವನ್ನು ಸ್ಮರಿಸಿದರೆ ಖಂಡಿತಾ ಮತದಾನದ ಕಾರ್ಯದಲ್ಲಿ ನಾವು ಭಾಗಿಯಾಗುತ್ತೇವೆ. ನಮ್ಮ ಒಂದು ಮತ ದೇಶದ ಅಭಿವೃದ್ಧಿಗೆ ಕಾರಣವಾಗಲಿದೆ ಎಂಬುದನ್ನು ನಾವು ಸ್ಮರಿಸಬೇಕು. ಚುನಾಯಿಸುವ ನಾಯಕ ಹೃದಯವಂತ, ಯುವ ಜನರಿಗೆ ಪ್ರೇರಣೆಯಾಗಲಿ.
– ನಯನಾ ಎಂಜಿಎಂ ಕಾಲೇಜು, ಉಡುಪಿ ಅಭಿವೃದ್ಧಿಯತ್ತ ಸಾಗಲು ನಮ್ಮ ಮತ
ಸ್ವತಂತ್ರ ಭಾರತದ ಸ್ವತಂತ್ರ ಪ್ರಜೆಗಳು ನಾವು. ನಮ್ಮ ದೇಶ ಸಂಪೂರ್ಣವಾಗಿ ಇನ್ನೂ ಅಭಿವೃದ್ಧಿಗೊಂಡಿಲ್ಲ, ಸಮಸ್ಯೆಗಳನ್ನು ಬಗೆಹರಿಸಲು ಮತ್ತು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು, ಸೂಕ್ತವಾದ ವ್ಯಕ್ತಿಯನ್ನು ಆರಿಸಬೇಕು. ಅದಕ್ಕಾಗಿ ಮತದಾನದ ಹಕ್ಕನ್ನು ಪಡೆದವರು ದಯವಿಟ್ಟು ತಮ್ಮ ಅಮೂಲ್ಯವಾದ ಮತವನ್ನು ಸೂಕ್ತ ವ್ಯಕ್ತಿಗೆ ನೀಡಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ಪಾತ್ರ ವಹಿಸೋಣ.
– ವರುಣ್ ಕುಮಾರ್, ಮಿಲಾಗ್ರಿಸ್ ಕಾಲೇಜು, ಕಲ್ಯಾಣಪುರ ಮತ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ
ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಮತದಾನ ಎನ್ನುವುದು ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕಾಗಿದೆ. ಈ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಯುವ ಪೀಳಿಗೆಯ ಮತದಾನದ ಅವಶ್ಯಕತೆ ಹೆಚ್ಚಿದೆ. ಯುವಜನತೆಯ ಒಂದೊಂದು ಮತ ದೇಶದ ಭವಿಷ್ಯ ನಿರ್ಧರಿಸುತ್ತದೆ. ಇದಕ್ಕಾಗಿ ಮತದಾನಕ್ಕೆ ಮಹತ್ವವಿದೆ.
– ಶರಣ್ಯಾ ಶೆಟ್ಟಿ, ಮಿಲಾಗ್ರಿಸ್ ಕಾಲೇಜು, ಕಲ್ಯಾಣಪುರ ನಮಗೆ ಸಿಕ್ಕ ಅಧಿಕಾರ ಬಳಸೋಣ
ಮತದಾನ ಮಾಡುವುದು ನಮ್ಮ ಕರ್ತವ್ಯವಾಗಿದೆ. ಇದು ಸಂವಿಧಾನಬದ್ದ ಹಕ್ಕಾಗಿದೆ. ಸಂವಿಧಾನ ನಮಗೆ ನೀಡಿರುವ ಅಧಿಕಾರವನ್ನು ನಾವು ಅನುಭವಿಸುವದೇ ಆದರೆ ನಾವು ಮತದಾನದ ಮೂಲಕ ಪಾಲ್ಗೊಳ್ಳಬೇಕು. ನಾವು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರೆ ಮಾತ್ರ ಮುಂದಿನ ದಿನಗಳಲ್ಲಿ ಸರಕಾರ ಅನ್ಯಮಾರ್ಗದಲ್ಲಿ ನಡೆದರೆ ಟೀಕಿಸಬಹುದಾಗಿದೆ.
– ಶಾಂತೇರಿ ಶೆಣೈ, ಪಿಪಿಸಿ ಕಾಲೇಜು ಯುವಜನತೆಯ ಜವಾಬ್ದಾರಿ
ಮತ ಹಾಕುವುದು ನನ್ನ ಹಕ್ಕು ಮತ್ತು ಕರ್ತವ್ಯ. ನಿರೀಕ್ಷೆಗಳೊಂದಿಗೆ ಮತ ಹಾಕುತ್ತೇವೆ. ಆ ನಿರೀಕ್ಷೆ ಸಾಕಾರಗೊಂಡಾಗ ನಮ್ಮ ಮತ ಸಾರ್ಥಕವಾಯಿತೆನಿಸುತ್ತದೆ. ಯುವ ಜನತೆಗೆ ರಾಷ್ಟ್ರ ನಿರ್ಮಾಣದಲ್ಲಿ ಜವಾಬ್ದಾರಿ ಹೆಚ್ಚಿದೆ. ಇದಕ್ಕಾಗಿ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಕರ್ತವ್ಯವನ್ನು ಮಾಡಲೇಬೇಕು.
– ಅನುಷಾ ಶೆಟ್ಟಿ, ವೈಕುಂಠ ಬಾಳಿಗಾ ಕಾಲೇಜು, ಉಡುಪಿ ದೇಶದ ಅಭಿವೃದ್ಧಿಗೆ ನಿರ್ಣಾಯಕ
ನನ್ನ ಒಂದು ಮತವೂ ದೇಶದ ಅಭಿವೃದ್ಧಿಯನ್ನು ನಿರ್ಧರಿಸುತ್ತದೆ.
ಹಾಗಾಗಿ ಉತ್ತಮ ನಾಯಕರನ್ನು ಆಯ್ಕೆ ಮಾಡುವುದು ನನ್ನ ಕರ್ತವ್ಯ ಕೂಡ ಹೌದು. ಮತದಾನದಲ್ಲಿ ಭಾಗಿಯಾದರೆ ಮಾತ್ರ ನಾಳಿನ ದಿನ ನಮ್ಮ ಜನಪ್ರತಿನಿಧಿಯನ್ನು ತಪ್ಪು ಮಾಡಿದರೆ ಪ್ರಶ್ನಿಸುವ ಅಧಿಕಾರವಿರುತ್ತದೆ. ಹಾಗಾಗಿ ಮತದಾನ ಕಡ್ಡಾಯವಾಗಿ ಮಾಡುತ್ತೇನೆ.
– ಸಚಿನ್ ಮರಕಾಲ, ಬ್ಯಾರೀಸ್ ಶಿಕ್ಷಣ ವಿದ್ಯಾಲಯ ಕೋಡಿ ಉತ್ತಮ ಅಭ್ಯರ್ಥಿಗೇ ಮತ ಹಾಕಿ
ನಾವು ಮತದಾನದಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದರಿಂದ ನಮ್ಮ ಭವಿಷ್ಯದ ಕೆಲಸ ಮಾಡುತ್ತಿದ್ದೇವೆ ಎಂದು ಅರ್ಥ ಬರುತ್ತದೆ. ನಾವು ಚುನಾಯಿಸುವ ಪ್ರತಿನಿಧಿ ಯಾವ ಧರ್ಮ, ಯಾವ ಪಕ್ಷ, ಯಾವ ಜಾತಿಗೆ ಸೇರಿದ್ದಾನೆ ಎಂದು ಯೋಚಿಸುವ ಅಗತ್ಯ ಇಲ್ಲ. ನಮ್ಮ ಕ್ಷೇತ್ರದ ಪರವಾದ ಧ್ವನಿ ಎತ್ತುವ ನಾಯಕರನ್ನು ಚುನಾಯಿಸಬೇಕಾಗಿದೆ. ರಾಜಕೀಯ ಪಕ್ಷಗಳನ್ನು ನೋಡಿ ಮತದಾನ ಮಾಡುವ ಕ್ರಮ ಸ್ವೇಚ್ಛಾಚಾರಕ್ಕೆ ಕಾರಣವಾಗದಿರಲಿ. ಸೂಕ್ತ ಅಭ್ಯರ್ಥಿಗೆ ನಿಮ್ಮ ಮತ ಅಚ್ಚಾಗಲಿ.
– ಸಾತ್ವಿಕ್ ಗಡಿಯಾರ್, ಪಿಪಿಸಿ ಕಾಲೇಜು ಆಮಿಷಕ್ಕಾಗಿ ಮತ ಮಾರಿಕೊಳ್ಳಬೇಡಿ
ನನ್ನ ಕ್ಷೇತ್ರದ, ರಾಜ್ಯ ಹಾಗೂ ದೇಶದ ಅಭಿವೃದ್ಧಿ, ಒಳಿತಿಗಾಗಿ ನಾನು ಮತ ಚಲಾಯಿಸಬೇಕು. ಮತದಾನ ನಮ್ಮೆಲ್ಲರ ಮೂಲಭೂತ ಹಕ್ಕು ಹಾಗೂ ಕರ್ತವ್ಯ ಕೂಡ. ಆದರೆ ಅದನ್ನು ಹಣಕ್ಕಾಗಿ, ಆಮಿಷಕ್ಕಾಗಿ ಮಾರಿಕೊಳ್ಳಬಾರದು. ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ಹೊಣೆಗಾರಿಕೆ ಸಮರ್ಥವಾಗಿ ನಿಭಾಯಿಸೋಣ.
– ಶ್ರೀಕಲಾ ಶಿರಿಯಾರ, ಬ್ಯಾರೀಸ್ ಶಿಕ್ಷಣ ವಿದ್ಯಾಲಯ, ಕೋಡಿ ಯುವ ಪೀಳಿಗೆಯ ಜವಾಬ್ದಾರಿ
ಮತ ಹಾಕುವುದು ನನ್ನ ಹಕ್ಕು. ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ ದೇಶವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಬೇಕು. ಹೊಸದಾಗಿ ರಚಿತವಾದಂತಹ ಸರಕಾರದಿಂದ ನನ್ನ ನಿರೀಕ್ಷೆಯೆಂದರೆ ಇತ್ತೀಚಿನ ದಿನಗಳಲ್ಲಿ ಯುವಪೀಳಿಗೆಗಳು ತನ್ನ ಉತ್ತಮ ಸಮಯವನ್ನು ಸಾಮಾಜಿಕ ಜಾಲತಾಣಗಳಿಗೆ ಬಳಸುತ್ತಿದೆ. ಆದುದರಿಂದ ಅದರ ಬಳಕೆ ಮೇಲೆ ನಿಯಂತ್ರಣ ಹೇರುವ ಕ್ರಮವನ್ನು ದೇಶಾಂದ್ಯತ ತರಬೇಕು.
– ಸವಿತಾ ಸಾಣೂರು, ವೈಕುಂಠ ಬಾಳಿಗಾ ಕಾಲೇಜು, ಉಡುಪಿ