Advertisement

Rakshit Shetty; ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ಬಿಡುಗಡೆ ಮತ್ತೆ ಮುಂದೆ ಹಾಕಿದ್ಯಾಕೆ?

12:57 PM Oct 22, 2023 | Team Udayavani |

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ರಕ್ಷಿತ್‌ ಶೆಟ್ಟಿ ನಟನೆಯ “ಸಪ್ತಸಾಗರದಾಚೆ ಎಲ್ಲೋ -ಸೈಡ್‌ ಬಿ’ ಚಿತ್ರ ಅಕ್ಟೋಬರ್‌ 20ಕ್ಕೆ ತೆರೆಕಾಣಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ದೂಡಿದ್ದ ಚಿತ್ರತಂಡ ಅ.27ಕ್ಕೆ ಬರುವುದಾಗಿ ಘೋಷಿಸಿಕೊಂಡಿತ್ತು. ಆದರೆ, ಈಗ ಇದರಲ್ಲೂ ಬದಲಾವಣೆಯಾಗಿದೆ. ಚಿತ್ರದ ಬಿಡುಗಡೆಯನ್ನು ಚಿತ್ರತಂಡ ಮತ್ತೆ ಮುಂದಕ್ಕೆ ಹಾಕಿದ್ದು ನವೆಂಬರ್‌ 17 ಕ್ಕೆ ತೆರೆಕಾಣಲಿದೆ.

Advertisement

ಈ ಬಾರಿಯ ವಿಶೇಷವೆಂದರೆ “ಸಪ್ತಸಾಗರದಾಚೆ ಎಲ್ಲೋ’ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಒಟ್ಟಿಗೆ ಬಿಡುಗಡೆಯಾಗುತ್ತಿದೆ. ಕನ್ನಡದ ಜೊತೆಗೆ ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಏಕಕಾಲಕ್ಕೆ ನ.17ರಂದೇ ತೆರೆಕಾಣಲಿದೆ. ಪ್ಯಾನ್‌ ಇಂಡಿಯಾ ರಿಲೀಸ್‌ ತಯಾರಿ ಹಿನ್ನೆಲೆಯಲ್ಲಿ ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹಾಕಲಾಗಿದೆ ಎನ್ನಲಾಗಿದೆ.

ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಮೊದಲ ಭಾಗ ಹಿಟ್‌ಲಿಸ್ಟ್‌ ಸೇರಿದೆ. ಒಂದು ಇಂಟೆನ್ಸ್‌ ಲವ್‌ಸ್ಟೋರಿಯಜೊತೆಗೆ ಒಂದು ಕರಾಳ ಜಗತ್ತಿನ ಅನಾವರಣವನ್ನು ಮಾಡಲಾಗಿತ್ತು. ರಕ್ಷಿತ್‌ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್‌ ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಚಿತ್ರತಂಡ ಖುಷಿಯಾಗಿತ್ತು. ಈಗ ಚಿತ್ರದ ಮುಂದುವರೆದ ಭಾಗದ ಮೇಲಿನ ನಿರೀಕ್ಷೆ ಕೂಡಾ ಹೆಚ್ಚಿದೆ. ಈ ಭಾಗದಲ್ಲಿ ಮಾಸ್‌ ಅಂಶಗಳ ಜೊತೆಗೆ ನಾಯಕನ ಹೊಸ ಲೋಕ ಹಾಗೂ ಹೊಸ ಬದುಕಿನ ಅನಾವರಣ ಆಗಲಿದೆ. ಈ ಭಾಗದಲ್ಲಿ ಚೈತ್ರಾ ಆಚಾರ್‌ ಪಾತ್ರಕ್ಕೂ ಹೆಚ್ಚಿನ ಮಹತ್ವವಿದೆ ಎನ್ನಲಾಗಿದೆ.

ಇನ್ನು, ಈ ಚಿತ್ರವನ್ನು ರಕ್ಷಿತ್‌ ಶೆಟ್ಟಿ ತಮ್ಮ ಪರಂವ ಪಿಕ್ಚರ್ಸ್‌ ಬ್ಯಾನರ್‌ನಡಿ ನಿರ್ಮಿಸಿದ್ದು, ಹೇಮಂತ್‌ ರಾವ್‌ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಚರಣ್‌ ರಾಜ್‌ ಸಂಗೀತವಿದೆ

Advertisement

Udayavani is now on Telegram. Click here to join our channel and stay updated with the latest news.

Next