Advertisement

World Cup: ಹಾರ್ದಿಕ್ ಬದಲು ಪ್ರಸಿಧ್ ಗೆ ಅವಕಾಶ ನೀಡಿದ್ಯಾಕೆ? ಕಾರಣ ಹೇಳಿದ ಕೋಚ್ ರಾಹುಲ್

04:17 PM Nov 05, 2023 | Team Udayavani |

ಕೋಲ್ಕತ್ತಾ: ಐಸಿಸಿ ಏಕದಿನ ಕ್ರಿಕೆಟ್ ಕೂಟದಲ್ಲಿ ಸತತ ಪಂದ್ಯಗಳನ್ನು ಗೆದ್ದು ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈಗಾಗಲೇ ಸೆಮಿ ಫೈನಲ್ ಗೆ ಲಗ್ಗೆಯಿಟ್ಟಿರುವ ತಂಡಕ್ಕೆ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿ ಕೊಂಚಮಟ್ಟಿಗೆ ಹೊಡೆತ ನೀಡಿದೆ. ಕಳೆದ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಗಾಯಗೊಂಡಿದ್ದ ಹಾರ್ದಿಕ್ ನಿರೀಕ್ಷಿತ ವೇಗದಲ್ಲಿ ಗುಣಮುಖರಾಗದ ಕಾರಣ ಸಂಪೂರ್ಣ ಕೂಟದಿಂದಲೇ ಹೊರಬಿದ್ದಿದ್ದಾರೆ.

Advertisement

ಹಾರ್ದಿಕ್ ಬದಲಿಗೆ ಕೆಎಲ್ ರಾಹುಲ್ ಅವರನ್ನು ತಂಡದ ಉಪನಾಯಕರನ್ನಾಗಿ ನೇಮಿಸಲಾಗಿದೆ. ತಂಡಕ್ಕೆ ಪಾಂಡ್ಯ ಬದಲು ಕನ್ನಡಿಗ, ವೇಗಿ ಪ್ರಸಿಧ್ ಕೃಷ್ಣ ಅವರನ್ನು ಸೇರಿಸಿಕೊಳ್ಳಲಾಗಿದೆ. ಆಲ್ ರೌಂಡರ್ ಹಾರ್ದಿಕ್ ಬದಲಿಗೆ ವೇಗಿಯನ್ನು ಆಯ್ಕೆ ಮಾಡಿರುವ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಅದಕ್ಕೆ ಇದೀಗ ಕೋಚ್ ರಾಹುಲ್ ದ್ರಾವಿಡ್ ಉತ್ತರ ನೀಡಿದ್ದಾರೆ.

“ಇದು ಬಹಳ ಸ್ಪಷ್ಟವಾದ ಆಲೋಚನಾ ಪ್ರಕ್ರಿಯೆ. ನಾವು ಮೂರು ವೇಗದ ಬೌಲರ್‌ಗಳು ಮತ್ತು ಇಬ್ಬರು ಸ್ಪಿನ್ನರ್‌ ಗಳ ಸಂಯೋಜನೆಯಲ್ಲಿ ಆಡಿದ್ದೇವೆ. ನಮ್ಮ ಮೀಸಲುಗಳಲ್ಲಿ, 15ರ ಬಳಗದಲ್ಲಿ ಹೊರಗೆ ಕುಳಿತಿರುವ ಹುಡುಗರಲ್ಲಿ, ನಾವು ಸ್ಪಿನ್‌ಗೆ ಬ್ಯಾಕಪ್ ಹೊಂದಿದ್ದೇವೆ. ನಾವು ಬ್ಯಾಟಿಂಗ್ ಬ್ಯಾಕಪ್ ಹೊಂದಿದ್ದೇವೆ. ಹೀಗಾಗಿ ವೇಗದ ಬೌಲಿಂಗ್ ಬ್ಯಾಕಪ್ ಗೆ ಪ್ರಸಿಧ್ ರನ್ನು ಆಯ್ಕೆ ಮಾಡಲಾಗಿದೆ” ಎಂದರು.

“ಅನಾರೋಗ್ಯದ ಸಮಸ್ಯೆ, ಸಣ್ಣ ಹುಳುಕು ಅಥವಾ ಗಾಯದ ಸಮಸ್ಯೆ ಇದ್ದರೆ, ಅದಕ್ಕಾಗಿ ನಾವು ಬ್ಯಾಕಪ್ ಅನ್ನು ಹೊಂದಿರಬೇಕು. ಇತರ ಸಂಯೋಜನೆಗಳನ್ನು ಆಡಲು ಅದು ನಮಗೆ ಅನುಮತಿಸುತ್ತದೆ” ಎಂದು ಮುಖ್ಯ ಕೋಚ್ ಸೇರಿಸಿದರು.

28 ವರ್ಷದ ಪ್ರಸಿಧ್ ಕೃಷ್ಣ ಅವರು ಭಾರತದ ಪರ 17 ಏಕದಿನ ಪಂದ್ಯಗಳನ್ನಾಡಿ 29 ವಿಕೆಟ್ ಪಡೆದಿದ್ದಾರೆ. ಈ ವಿಶ್ವಕಪ್ ಗೂ ಮೊದಲು ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅವರು ಆಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next