Advertisement

ಉತ್ತರದಿಕ್ಕಿಗೆ ತಲೆಹಾಕಿ ಮಲಗಬಾರದೇಕೆ?

07:00 AM Aug 04, 2018 | |

ಮಾನವನ ಇಡೀ ದೇಹ ರಕ್ತದಿಂದ ತುಂಬಿಕೊಂಡಿರುವುದರಿಂದ ರಕ್ತಪರಿಚಲನೆಗೆ ಅಡ್ಡಿಯುಂಟಾದಾಗ ದೇಹ ನಿತ್ರಾಣಗೊಳ್ಳುತ್ತದೆ. ಇದರಿಂದ ಆರೋಗ್ಯದಲ್ಲಿಯೂ ಏರುಪೇರುಗಳಾಗುತ್ತವೆ. ಹಾಗಾಗಿಯೇ ಉತ್ತರಕ್ಕೆ ತಲೆಹಾಕಿ ಮಲಗುವುದು ನಿಷಿದ್ಧವೆನ್ನಲಾಗುತ್ತದೆ. 

Advertisement

 ಹಿಂದಿನವರು ಯಾವುದೇ ಹೊಸ ಸ್ಥಳಗಳಿಗೆ ಹೋದಾಗ, ಮಲಗುವ ಮೊದಲು ಉತ್ತರ ದಿಕ್ಕು ಯಾವಕಡೆ ಬರುತ್ತದೆಂದು ತಿಳಿದುಕೊಂಡು ಆ ದಿಕ್ಕಿಗೆ ತಲೆಹಾಕದೆ ಪೂರ್ವ, ಪಶ್ಚಿಮ ಅಥವಾ ದಕ್ಷಿಣದ ಕಡೆಗೆ ತಲೆಹಾಕಿ ಮಲಗುತ್ತಾರೆ. ಅಲ್ಲದೆ, ಇದನ್ನೊಂದು ಮಹಣ್ತೀದ ಸಂಪ್ರದಾಯವಾಗಿ ಪಾಲಿಸುತ್ತಾರೆ;ಆಚರಿಸುತ್ತಾರೆ. ಹಾಗೂ ನಮ್ಮ ಮುಂದಿನ ಪೀಳಿಗೆಗೆ ಪ್ರಸಾರ ಮಾಡುತ್ತಾರೆ. ಪಶ್ಚಿಮಕ್ಕೆ ತಲೆಹಾಕಿ ಮಲಗುವುದು ಉತ್ತಮ ಎಂಬ ನಂಬಿಕೆಯೂ ಇದೆ.  ನಾವು ಕೂಡ ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದ್ದೇವೆ. ತೀರಾ ಹಿಂದಿನವರಲ್ಲಿ ಇದಕ್ಕೆ ಕಾರಣವನ್ನು ಕೇಳಿದರೆ ಅವರು ಅದನ್ನು ಒಂದು ಸುಂದರವಾದ ಕಥೆಯ ರೂಪದಲ್ಲಿ ಹೇಳುತ್ತಾರೆ.

ಕೈಲಾಸ ಪರ್ವತದಲ್ಲಿ ಶಿವನಿಲ್ಲದ ಸಮಯದಲ್ಲಿ ತನ್ನ ಬೇಸರದಿಂದ ಹೊರಬರಲು ಪಾರ್ವತಿಯು ಒಂದು ಸುಂದರವಾದ ಮಣ್ಣಿನ ಮೂರ್ತಿಯನ್ನು ಮಾಡುತ್ತಾಳೆ. ಮೂರ್ತಿಯನ್ನು ಪೂರ್ತಿಗೊಳಿಸಿ ನೋಡುವಾಗ ಅದೊಂದು ಸುಂದರ ಬಾಲಕನ ರೂಪತಾಳಿತ್ತು. ಉಲ್ಲಸಿತಳಾದ ಪಾರ್ವತಿ ತನ್ನ ದೈವೀಶಕ್ತಿಯಿಂದ ಆ ಮೂರ್ತಿಗೆ ಪ್ರಾಣವನ್ನು ನೀಡುತ್ತಾಳೆ. ಆಗ ಆ ಮು¨ªಾದ ಬಾಲಕ, ಅಮ್ಮನನ್ನು ಮುದ್ದಾಡಿ, ತನ್ನ ತುಂಟಾಟಗಳಿಂದ ಅಮ್ಮನ ಬೇಸರವನ್ನು ಕಳೆಯುತ್ತಾನೆ. ತನ್ನ ಅಗತ್ಯದ ಕಾರ್ಯಕ್ಕೆಂದು ಹೊರಟ ಪಾರ್ವತಿ ಆ ಬಾಲಕನನ್ನು ಕೈಲಾಸದ ಹೊರಬಾಗಿಲಿನಲ್ಲಿ ನಿಲ್ಲಿಸಿ ಯಾರೇ ಬಂದರೂ, ನಾನು ಬರುವತನಕ ಬಾಗಿಲನ್ನು ತೆರೆಯಬಾರದೆಂದು ಆದೇಶಿಸಿ ಹೋಗುತ್ತಾಳೆ.

ಕೆಲವೇ ಹೊತ್ತಿನಲ್ಲಿ ಬಂದ ಶಿವ ತನಗೆ ಗುರುತುಪರಿಚಯವಿಲ್ಲದ ಈ ಬಾಲಕನಿಂದ ಕೈಲಾಸದ ಒಳಕ್ಕೆ ಹೋಗದಂತೆ ತಡೆಯಲ್ಪಟ್ಟಾಗ ಕುಪಿತಗೊಂಡು ತ್ರಿಶೂಲದಿಂದ ರುಂಡವನ್ನು ಬೇರ್ಪಡಿಸುತ್ತಾನೆ. ಆ ಬಾಲಕ ನೆಲಕ್ಕುರುಳುತ್ತಿದ್ದಂತೆ ಅಲ್ಲಿಗೆ ಬಂದ ಪಾರ್ವತಿ ನಡೆದುದೆಲ್ಲವನ್ನೂ ತಿಳಿಸಿ, ನನಗೆ ಆ ಬಾಲಕ ಬೇಕೇಬೇಕೆಂದು ಹಟ ಹಿಡಿಯುತ್ತಾಳೆ; ಕಣ್ಣೀರು ಸುರಿಸುತ್ತಾಳೆ. ಶಿವನಿಗೂ ಪಶ್ಚಾತಾಪವುಂಟಾಗಿ ಅ ಬಾಲಕನಿಗೆ ಮುಖವನ್ನು ಸೇರಿಸುವ ನಿರ್ಧಾರಕ್ಕೆ ಬಂದು ತನ್ನ ಗಣಗಳಿಗೆ ಉತ್ತರ ದಿಕ್ಕಿಗೆ ತಲೆಯಟ್ಟು ಮಲಗಿದ ಯಾವುದೇ ಜೀವಿಯ ರುಂಡವನ್ನು ತೆಗದು ತನ್ನಿ ಎಂದು ಆದೇಶವೀಯುತ್ತಾನೆ. ಅದರಂತೆ ಅವನ ಗಣಗಳು ಉತ್ತರಕ್ಕೆ ತಲೆಹಾಕಿ ಮಲಗಿದ್ದ ಆನೆಯೊಂದರ ಮೊಗವನ್ನು ತಂದು ಶಿವನಿಗೊಪ್ಪಿಸತ್ತಾರೆ. ಅದೇ ರುಂಡವನ್ನು ಆ ಬಾಲಕನಿಗೆ ಸೇರಿಸಿ ಮತ್ತೆ ಪ್ರಾಣವನ್ನು ಕೊಡುತ್ತಾನೆ. ಆತನೇ ಪ್ರಥಮ ವಂದಿತ, ವಿಘ್ನನಿವಾರಕ ಗಣಪತಿ.

 ಇಲ್ಲಿ ಉತ್ತರದಿಕ್ಕಿಗೆ ತಲೆಯಿಟ್ಟು ಮಲಗಿದರೆ ನಮ್ಮ ದೇಹಕ್ಕೆ ಅಪಾಯವಿದೆ ಮತ್ತು ಅದು ನಮ್ಮ ಸಾವಿಗೂ ಕಾರಣವಾಗಬಹುದೆಂಬುದರ ಸೂಚನೆ ಇದೆ. ದೇವರೇ ಅದನ್ನು ನಮಗೆ ತೋರಿಸಿಕೊಟ್ಟಿದ್ದಾನೆ. ಇದು ನಂಬಿಕೆ ಮತ್ತು ಸಂಪ್ರದಾಯ ಕೂಡ. ಹಾಗಾದರೆ ನಿಜವಾಗಿಯೂ ಉತ್ತರದಿಕ್ಕಿಗೆ ಮಲಗಿದರೆ ತೊಂದರೆ ಬಾಧಿಸುವುದು ಸತ್ಯವೇ? ಎಂದು ಪರಾಮರ್ಶಿಸುತ್ತ ಹೋದರೆ ವೈಜ್ಞಾನಿಕವಾದ ಉತ್ತರವೇ ಸಿಗುತ್ತದೆ.

Advertisement

ಭೂಮಿಯೊಂದು ಬಲವಾದ ಅಯಸ್ಕಾಂತ. ಹಾಗೂ  ತನ್ನದೇ ಆದ ಅಯಸ್ಕಾಂತೀಯ ಕ್ಷೇತ್ರವನ್ನು ಹೊಂದಿರುವ ಗ್ರಹ. ಅದೇ ರೀತಿ ಭೂಮಿಯಲ್ಲಿ ವಾಸಿಸುವ ಮನುಷ್ಯನ ದೇಹವು ತನ್ನದೇ ಆದ ಅಯಸ್ಕಾಂತೀಯ  ಕ್ಷೇತ್ರವನ್ನು ಹೊಂದಿರುತ್ತದೆ. ಉತ್ತರಕ್ಕೆ ತಲೆ ಹಾಕಿ ಮಲಗುವುದರಿಂದ ನಮ್ಮ ದೇಹದ ಅಯಸ್ಕಾಂತೀಯ ಕ್ಷೇತ್ರ ಅಸಮಪಾರ್ಶ್ವತೆಯನ್ನು ಹೊಂದುತ್ತದೆ. ಇದರಿಂದಾಗಿ ದೇಹದ ರಕ್ತಸಂಚಲನೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ಏಕೆಂದರೆ ನಮ್ಮ ರಕ್ತವು ಅತ್ಯಧಿಕ ಕಬ್ಬಿಣಾಂಶವನ್ನು ಹೊಂದಿರುತ್ತದೆ. ಕಬ್ಬಿಣ ಮತ್ತು ಅಯಸ್ಕಾಂತ ಪರಸ್ಪರ ಅತೀ ಆಕರ್ಷಣೀಯ ವಸ್ತುಗಳು. ಮಾನವನ ಇಡೀ ದೇಹ ರಕ್ತದಿಂದ ತುಂಬಿಕೊಂಡಿರುವುದರಿಂದ ರಕ್ತಪರಿಚಲನೆಗೆ ಅಡ್ಡಿಯುಂಟಾದಾಗ ದೇಹ ನಿತ್ರಾಣಗೊಳ್ಳುತ್ತದೆ. ಇದರಿಂದ ಆರೋಗ್ಯದಲ್ಲಿಯೂ ಏರುಪೇರುಗಳಾಗುತ್ತವೆ. ಹಾಗಾಗಿಯೇ ಉತ್ತರಕ್ಕೆ ತಲೆಹಾಕಿ ಮಲಗುವುದು ನಿಷಿದ್ಧವೆನ್ನಲಾಗುತ್ತದೆ. ಇದು ಕೇವಲ ನಂಬಿಕೆ ಮಾತ್ರವೇ ಆಗಿರದೆ ವೈಜ್ಞಾನಿಕ ಕಾರಣವನ್ನು ಹೊಂದಿದೆ ಎಂಬುದು ನಿರೂಪಿತವಾಗಿದೆ.

ಸಂಪ್ರದಾಯದ ರಹಸ್ಯ:ಹಿಂದಿನಿಂದ ಬಂದ ಸಂಪ್ರದಾಯಗಳೆಲ್ಲವೂ ಅಸಂಬದ್ಧವಲ್ಲ; ಅದನ್ನು ಅರಿತು ಪಾಲಿಸುವ ಜ್ಞಾನವನ್ನು ಹೊಂದಬೇಕಷ್ಟೆ.

  ವಿಷ್ಣು ಭಟ್ಟ ಹೊಸ್ಮನೆ

Advertisement

Udayavani is now on Telegram. Click here to join our channel and stay updated with the latest news.

Next