Advertisement

Mangaluru: ಬೀದಿವ್ಯಾಪಾರದಂತೆ ವಾಹನ ತೆರವು ಯಾಕಿಲ್ಲ?

02:50 PM Aug 09, 2024 | Team Udayavani |

ಸ್ಟೇಟ್‌ಬ್ಯಾಂಕ್‌: ನಗರದ ಹಲವೆಡೆ ಟೈಗರ್‌ ಕಾರ್ಯಾಚರಣೆ ಮೂಲಕ ಬೀದಿಬದಿ ವ್ಯಾಪಾರಗಳನ್ನು ತೆರವುಗೊಳಿ ಸಲಾಗಿದೆ. ವಾಹನಗಳು, ಪಾದಚಾರಿಗಳ ಸಂಚಾರ ಸುಗಮಗೊಳಿಸುವುದು ಕೂಡ ಈ ಕಾರ್ಯಾಚರಣೆಯ ಉದ್ದೇಶದಲ್ಲಿ ಸೇರಿದೆ. ಆದರೆ ಅನಧಿಕೃತ ಬೀದಿಬದಿ ವ್ಯಾಪಾರ ತೆರೆವುಗೊಳಿಸಿರುವಂತೆ ರಸ್ತೆಗ ಳಲ್ಲೇ ಪಾರ್ಕಿಂಗ್‌ ಮಾಡಿರುವ ವಾಹನಗಳ ವಿರುದ್ಧ ಕ್ರಮ ಯಾಕಿಲ್ಲ ಎಂಬ ಪ್ರಶ್ನೆ ಈಗ ಬಲವಾಗಿ ಕೇಳಿಬರುತ್ತಿದೆ.

Advertisement

ಸ್ಟೇಟ್‌ಬ್ಯಾಂಕ್‌ ಬಸ್‌ ನಿಲ್ದಾಣದ ಎದುರಿನ ರಸ್ತೆ ಸಹಿತ ನಗರದ ಅನೇಕ ಮುಖ್ಯರಸ್ತೆಗ ಳಲ್ಲಿ ವಾಹನಗಳನ್ನು ಬೇಕಾಬಿಟ್ಟಿಯಾಗಿ ನಿಲುಗಡೆ ಮಾಡುತ್ತಿರುವುದರಿಂದ ಇತರ ವಾಹನಗಳ ಸಂಚಾರಕ್ಕೆ ತೊಡಕಾಗುತ್ತಿದೆ. ಹೆಚ್ಚಿನ ಕಟ್ಟಡಗಳು ಪಾರ್ಕಿಂಗ್‌ ವ್ಯವಸ್ಥೆ ಮಾಡಿಕೊಂಡಿಲ್ಲ. ಸಾರ್ವಜನಿಕ ರಸ್ತೆಯೇ ಪಾರ್ಕಿಂಗ್‌ ಸ್ಥಳವಾಗಿ ಆಗಿ ಮಾರ್ಪಟ್ಟಿದೆ. ಇತ್ತೀಚೆಗೆ ರಸ್ತೆಗಳ ವಿಸ್ತರಣೆ ನಡೆದಿದ್ದರೂ ಅದರಿಂದ ವಾಹನಗಳ ಸಂಚಾರಕ್ಕೆ ಹೆಚ್ಚು ಪ್ರಯೋಜನವಾಗಿಲ್ಲ. ಇಂತಹ ರಸ್ತೆಗಳಲ್ಲಿ ವಾಹನಗಳ ಪಾರ್ಕಿಂಗ್‌ ಮಾಡುತ್ತಿರುವುದು ಇದಕ್ಕೆ ಮುಖ್ಯ ಕಾರಣ.

ನೋ ಪಾರ್ಕಿಂಗ್‌ ಫ‌ಲಕವೂ ಇಲ್ಲ

ಕೆಲವೇ ಕಡೆಗಳಲ್ಲಿ ಮಾತ್ರವೇ ನೋ ಪಾರ್ಕಿಂಗ್‌ ಸೂಚನ ಫ‌ಲಕವಿದೆ. ಆದರೆ ಅದೇ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಲಾ ಗುತ್ತದೆ. ಈ ಹಿಂದೊಮ್ಮೆ ನಗರದ ಪಿ.ಎಂ. ರಾವ್‌ ರಸ್ತೆ ಸಹಿತ ಹಲವೆಡೆ ದಿನ ಕ್ಕೊಂದು ಬದಿಯಲ್ಲಿ ವಾಹನ ನಿಲುಗಡೆ ಮಾಡುವ ವ್ಯವಸ್ಥೆ ಜಾರಿಗೆ ತರಲಾಗಿತ್ತು. ಈಗ ಅದು ಚಾಲ್ತಿಯಲ್ಲಿಲ್ಲ. ನೋ ಪಾರ್ಕಿಂಗ್‌ ಏರಿಯಾದಲ್ಲಿ ವಾಹನ ನಿಲುಗಡೆ ಮಾಡುವವರ ವಿರುದ್ಧ ಕ್ರಮವೂ ಆಗುತ್ತಿಲ್ಲ. ವಾಹನಗಳು ಫ‌ುಟ್‌ಪಾತ್‌ಗಳ ಮೇಲೆ ನಿಲುಗಡೆಯಾದರೂ ಕ್ರಮ ತೆಗೆದುಕೊಳ್ಳುತ್ತಿಲ್ಲ.

ಪೊಲೀಸ್‌ “ಟೈಗರ್‌’ ಮೌನ!

Advertisement

ಪಾಲಿಕೆ ಟೈಗರ್‌ ಕಾರ್ಯಾಚರಣೆ ಹೆಸರಿ ನಲ್ಲಿ ಬೀದಿಬದಿ ವ್ಯಾಪಾರಸ್ಥರನ್ನು ತೆರವು ಮಾಡಿದೆ. ಆದರೆ ಈ ಹಿಂದೆ ರಸ್ತೆಯಲ್ಲಿ, ನೋ ಪಾರ್ಕಿಂಗ್‌ ಸ್ಥಳಗಳಲ್ಲಿ ನಿಲುಗಡೆ ಮಾಡುತ್ತಿದ್ದ ವಾಹನಗಳ ತೆರವಿಗೆ ಪೊಲೀಸರು ನಡೆಸುತ್ತಿದ್ದ ಟೈಗರ್‌ ಕಾರ್ಯಾಚರಣೆ ನಿಂತಿದೆ. ಈಗ ನಿಯಮ ಮೀರಿ ನಿಲುಗಡೆಯಾಗುವ ವಾಹನಗಳ ಚಕ್ರಗಳಿಗೆ ಲಾಕ್‌ ಹಾಕಿ ಕೇಸು ದಾಖಲಿಸುವ, ಅಂತಹ ವಾಹನಗಳನ್ನು ಠಾಣೆಗೆ ಎಳೆದೊಯ್ಯುವ (ಟೋಯಿಂಗ್‌) ಕಾರ್ಯಾಚರಣೆ ಯಾಕೆ ನಡೆಸುತ್ತಿಲ್ಲ ಎಂಬುದು ಕೆಲವು ಬೀದಿಬದಿ ವ್ಯಾಪಾರಸ್ಥರು, ಪಾದಚಾರಿಗಳ ಪ್ರಶ್ನೆ.

ಆಟೋರಿಕ್ಷಾ ನಿಲುಗಡೆ

ಅನಧಿಕೃತ ಆಟೋರಿಕ್ಷಾ ಪಾರ್ಕಿಂಗ್‌ ಕೂಡ ಹೆಚ್ಚಾಗುತ್ತಿದೆ. ರಸ್ತೆ ಬದಿಯಲ್ಲಿ ಸ್ವಲ್ಪವೇ ಜಾಗ ಸಿಕ್ಕಿದರೂ ಅಲ್ಲಿ ಆಟೋ ರಿಕ್ಷಾಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಈಗ ತೆರವುಗೊಳಿಸುವ ಬೀದಿ ಬದಿ ವ್ಯಾಪಾರದ ಸ್ಥಳದಲ್ಲಿ ಕೆಲವೆಡೆ ಆಟೋ ರಿಕ್ಷಾಗಳು ನಿಲುಗಡೆಯಾಗುತ್ತಿವೆ. ಇದ ರಿಂದ ತೊಂದರೆಯಾಗುತ್ತಿದೆ. ಇದನ್ನು ಅಧಿಕಾರಿಗಳು ಯಾಕೆ ಗಮನಿಸುತ್ತಿಲ್ಲ ಎಂಬುದು ಕೂಡ ಸಾರ್ವಜನಿಕರ ದೂರು.

Advertisement

Udayavani is now on Telegram. Click here to join our channel and stay updated with the latest news.

Next