Advertisement
ದೇಶದ ಜೆಂಟಲ್‌ವುನ್‌ಗಳೇ, ನಿಮ್ಮ ಸಂತತಿ ಅಳಿಯುತ್ತಿದೆ. ನೀವು ಆ ಸಂಗತಿಯನ್ನು ಒಪ್ಪುವುದಿಲ್ಲ ಅಂತ ಗೊತ್ತು. ಹಾಗೆಂದ ಮಾತ್ರಕ್ಕೆ ವಾಸ್ತವ ಬದಲಾಗುವುದಿಲ್ಲವಲ್ಲ. ಪ್ರತೀ ಸಾರಿ ಪತ್ರಿಕೆಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಕುರಿತ ಸುದ್ದಿಯನ್ನು ಓದಿದಾಗ, ಗಂಡಸರಿಗೆ ಜೆಂಟಲ್‌ವುನ್ ಎನ್ನುವುದರ ಪರಿಕಲ್ಪನೆಯೇ ಇಲ್ಲವೇ ಎಂದು ಅಚ್ಚರಿಯಾಗುತ್ತೆ. ಜೆಂಟಲ್‌ವುನ್‌ಗಳು ಸಾಹಿತ್ಯದಲ್ಲಿ ಮಾತ್ರವೇ ಇರೋದಾ? ನಿಜಜೀವನದಲ್ಲಿ ಇರುವುದಿಲ್ಲವಾ ಅಂತಲೂ ಹಲವು ಬಾರಿ ಯೋಚಿಸಿದ್ದಿದೆ.
Related Articles
ನನ್ನನ್ನು ಕೇಳುವುದಾದರೆ, ಯಾರು ತನ್ನ ನಂಬಿಕೆಗೆ ಬದ್ಧನಾಗಿರುತ್ತಾನೋ, ಯಾರಿಗೆ ಹೆಣ್ಣಿನ ಜೊತೆ ಹೇಗೆ ನಡೆದುಕೊಳ್ಳಬೇಕೆಂಬ ಸಂಸ್ಕಾರ ಗೊತ್ತಿರುತ್ತದೋ ಅವನು ಜೆಂಟಲ್‌ವುನ್. ಅಂಥವನಿಗೆ ಚರ್ಚೆ ಮತ್ತು ವಾಗ್ವಾದ ಎರಡರ ನಡುವಿನ ಸೂಕ್ಷ್ಮ ವ್ಯತ್ಯಾಸ ತಿಳಿದಿರುತ್ತದೆ. ಅಂಥವನು ತನ್ನವಳಿಗೆ ಆಯ್ಕೆಯ ಸ್ವಾತಂತ್ರÂವನ್ನು ನೀಡುತ್ತಾನೆ.
ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿಯನ್ನೇ ನೋಡಿ. ಕ್ರಿಕೆಟ್ ಅನ್ನು ಜೆಂಟಲ್‌ವುನ್‌ಗಳ ಆಟ ಎನ್ನುತ್ತಾರೆ. ವಿರಾಟ್ ಕೊಹ್ಲಿ ಅದನ್ನು ನಿಜಕ್ಕೂ ಸಾಬೀತು ಪಡಿಸಿದ್ದಾರೆ. ಇಡೀ ಬಾರತ “ಅವನ ಹುಡುಗಿಯಿಂದಲೇ ವಿರಾಟ್‌ಗೆ ಚೆನ್ನಾಗಿ ಆಡಲು ಸಾಧ್ಯವಾಗುತ್ತಿಲ್ಲ ಎಂದು ಹಲ್ಲು ಮಸೆಯುತ್ತಿದ್ದರೆ, ಹಿಂದೆ ಮುಂದೆ ನೋಡದೆ ತಕ್ಷಣ ತನ್ನ ಹುಡುಗಿಯ ರಕ್ಷಣೆಗೆ ಧಾವಿಸಿದ್ದ. ಅವಳ ಮೇಲಿನ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದ್ದ. ಜೆಂಟಲ್‌ವುನ್‌ನ ಲಕ್ಷಣ ಎಂದರೆ ಅದು!
ದುರದೃಷ್ಟಕರ ಸಂಗತಿಯೆಂದರೆ, ಮೈದಾನದಲ್ಲಿ ಮತ್ತು ಮೈದಾನದ ಹೊರಗೆ ವಿರಾಟ್ ಕೊಹ್ಲಿಯ ವರ್ತನೆಯನ್ನು ಕೊಂಡಾಡುವ, ಆರಾಧಿಸುವ ಅವನ ಅಭಿಮಾನಿಗಳು ಹೆಣ್ಣಿನ ವಿಚಾರಕ್ಕೆ ಬಂದಾಗ ಮಾತ್ರ ಬಾಯಿಗೆ ಬಂದಂತೆ ಮಾತಾಡುತ್ತಾರೆ. ಹೆಂಗಸರ ವಿಷಯದಲ್ಲಿ, ಗಂಡಸರೂ ವಿರಾಟ್ ಕೊಹ್ಲಿಯಂತೆ ಯಾಕಿರಬಾರದು?
ಕಾಲ ಬದಲಾಗುತ್ತಿದೆ. ಗಂಡು ತನ್ನ ವರ್ತನೆಯನ್ನು, ವಿಚಾರಧಾರೆಯನ್ನು ಬದಲಿಸಿಕೊಳ್ಳಬೇಕು, ಹೆಣ್ಣನ್ನು ಗೌರವಿಸುವುದನ್ನು ಕಲಿತುಕೊಳ್ಳಬೇಕು. ನಿಜವಾದ ಜೆಂಟಲ್‌ವುನ್‌ಗಳ ಹಾಗೆ!
Advertisement