Advertisement

ನೂತನ ವಿಮಾನ ಖರೀದಿಸ್ತೀರಿ, ನೇತಾಜಿ ಸ್ಮಾರಕ ಯಾಕೆ ನಿರ್ಮಿಸಿಲ್ಲ: ಕೇಂದ್ರಕ್ಕೆ ಮಮತಾ

03:11 PM Jan 23, 2021 | Team Udayavani |

ಕೋಲ್ಕತಾ: ನೇತಾಜಿ ಜನ್ಮ ದಿನಾಚರಣೆಯನ್ನು ಇನ್ನೂ ರಾಷ್ಟ್ರೀಯ ರಜಾ ದಿನವೆಂದು ಘೋಷಿಸದಿರುವ ಕೇಂದ್ರ ಸರ್ಕಾರದ ನಿಲುವನ್ನು ವಿರೋಧಿಸುವುದಾಗಿ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದು, ಹೊಸ ಸಂಸತ್ ಕಟ್ಟಡ ನಿರ್ಮಿಸುತ್ತಿದ್ದೀರಿ, ನೂತನ ವಿಮಾನ ಖರೀದಿಸುತ್ತಿದ್ದೀರಿ. ಆದರೆ ಇನ್ನೂ ನೇತಾಜಿ ಸ್ಮಾರಕವನ್ನು ಯಾಕೆ ನಿರ್ಮಿಸಿಲ್ಲ ಎಂದು ಪ್ರಶ್ನಿಸಿದರು.

Advertisement

ಇದನ್ನೂ ಓದಿ:ಯತ್ನಾಳ್ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಕೇಂದ್ರಕ್ಕೆ ಶಿಫಾರಸ್ಸು : ಕಟೀಲ್ ಹೇಳಿಕೆ

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ(ಜನವರಿ 23, 2021) ನೇತಾಜಿ ಸುಭಾಶ್ಚಂದ್ರ ಬೋಸ್ ಅವರ 124ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕೋಲ್ಕತಾಕ್ಕೆ ಆಗಮಿಸುವ ಮುನ್ನ ಮಮತಾ ಬ್ಯಾನರ್ಜಿ ಆರು ಕಿಲೋ ಮೀಟರ್ ಪಾದಯಾತ್ರೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ನೀವು ಯಾವುದೇ ಬಂದರು ಪ್ರದೇಶಕ್ಕೆ ಶ್ಯಾಮ್ ಪ್ರಸಾದ್ ಮುಖರ್ಜಿ ಹೆಸರನ್ನು ಕೊಡಿ, ನಮ್ಮದೇನು ಆಕ್ಷೇಪವಿಲ್ಲ, ಆದರೆ ನೇತಾಜಿಯವರ ಸ್ಮಾರಕ ಇನ್ನೂ ನಿರ್ಮಿಸಿಲ್ಲ ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:ಜೈಲುಪಾಲಾದ ಲಾಲು ಆರೋಗ್ಯ ಸ್ಥಿತಿ ಗಂಭೀರ; ದೆಹಲಿ ಏಮ್ಸ್ ಗೆ ಸ್ಥಳಾಂತರ ಸಾಧ್ಯತೆ

Advertisement

ಕೇಂದ್ರ ಸರ್ಕಾರ ಕಳೆದ ವರ್ಷ ಜೂನ್ ನಲ್ಲಿ ಕೋಲ್ಕತಾ ಬಂದರನ್ನು ಭಾರತೀಯ ಜನಸಂಘದ ಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಬಂದರು ಎಂದು ಮರುನಾಮಕರಣ ಮಾಡಿತ್ತು. ಅಷ್ಟೇ ಅಲ್ಲ ನೇತಾಜಿ ಅವರ ಕನಸಿನ ಯೋಜನಾ ಆಯೋಗವನ್ನು ರದ್ದುಗೊಳಿಸಿ, ನೀತಿ ಆಯೋಗ್ ಎಂದು ಬದಲಾಯಿಸಿದ್ದೀರಿ ಎಂದು ಕೇಂದ್ರದ ನಿರ್ಧಾರವನ್ನು ಟೀಕಿಸಿದ್ದು, ಯೋಜನಾ ಆಯೋಗವನ್ನು ಮರುಸ್ಥಾಪಿಸುವಂತೆ ಈ ಸಂದರ್ಭದಲ್ಲಿ ಮಮತಾ ಒತ್ತಾಯಿಸಿದರು.

“ನೇತಾಜಿ ಅವರ ಜನ್ಮ ದಿನವನ್ನು “ಪರಾಕ್ರಮ್ ದಿವಸ್ “ ಎಂದು ಕೇಂದ್ರ ಸರ್ಕಾರ ಹೆಸರಿಸಿದೆ. ಆದರೆ ಪರಾಕ್ರಮ್ ದಿವಸ್ ಅರ್ಥವೇನು? ನಮಗೆ ಇಂದು ದೇಶನಾಯಕ್ ದಿವಸವಾಗಬೇಕಾಗಿದೆ. ನಿಮ್ಮ ಕ್ರಮ ಸರಿಯಾದುದಲ್ಲ, ನಾವು ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡುತ್ತೇವೆ ಎಂದು ಮಮತಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next