Advertisement

ಮೋದಿ ಕಪ್ಪು ಹಣ ತರಲಿಲ್ಲವೇಕೆ

03:22 PM May 27, 2017 | Team Udayavani |

ಕಲಬುರಗಿ: ಚುನಾವಣೆ ಸಂದರ್ಭದಲ್ಲಿ ದೇಶದ ಜನತೆಗೆ ಭರವಸೆ ಕೊಟ್ಟಿರುವಂತೆ ವಿದೇಶದಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತರಲು ಯಾಕೆ ಆಗಲಿಲ್ಲ. ಅದನ್ನು ತರುವ ಮನಸ್ಸು ಯಾಕೆ ಮಾಡಲಿಲ್ಲ ಎಂದು ತೊಗರಿ ಮಂಡಳಿ ಅಧ್ಯಕ್ಷರೂ ಆಗಿರುವ ಜಿಲ್ಲಾ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಭಾಗನಗೌಡ ಪಾಟೀಲ ಸಂಕನೂರ ಪ್ರಶ್ನಿಸಿದ್ದಾರೆ. 

Advertisement

ಪಕ್ಷದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೋದಿ ದೇಶದ ಜನರಿಗೆ ಮೋಸ ಮಾಡಿದ್ದಾರೆ. ಇದರಿಂದ ಅವರು ಮುಂದಿನ ದಿನಗಳಲ್ಲಿ ಹೇಳಿದ್ದೆಲ್ಲವನ್ನು ಮಾಡುತ್ತಾರೆಂದು ಹೇಗೆ ಭರವಸೆ ಇಟ್ಟುಕೊಳ್ಳುವುದು ಎಂದು ಪ್ರಶ್ನಿಸಿರುವ ಅವರು,

-ಕೇಂದ್ರದಲ್ಲಿ ಕಳೆದ ಕಾಂಗ್ರೆಸ್‌ ನೇತೃತ್ವದ ಸರಕಾರ ಜಾರಿಗೆ ತಂದಿರುವ ಯೋಜನೆಗಳಿಗೆ ಈಗಿನ ಕೇಂದ್ರ ಸರಕಾರವು ಅದೇ ಯೋಜನೆಗಳಿಗೆ ಹೊಸ ನಾಮಕರಣ ಮಾಡುತ್ತಿದೆ ಎಂದರು. ಹಿಂದೆ ಯುಪಿಎ ಜಿಎಸ್‌ಟಿ ತರಲು ಹೊರಟಾಗ ಇದೇ ಬಿಜೆಪಿಯವರು ದೊಡ್ಡ ಮಟ್ಟದಲ್ಲಿ ವಿರೋಧಿಸಿದರು.

ಇವತ್ತು ರಾಜಕಾರಣದ ಭಾಗವಾಗಿ ಜನತೆ ಮನಸ್ಸು ಗೆಲ್ಲುವುದಕ್ಕಾಗಿ ಬಿಜೆಪಿ ಸರಕಾರ ಜಾರಿಗೆ ತರುತ್ತಿದೆ. ಹಿಂದಿನ ಯುಪಿಎ ಸರಕಾರ ತಂದಂತಹ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ, ಯೋಜನೆಗಳ ಹೆಸರು ಬದಲಾಯಿಸಿ ಹೊಸ ಹೆಸರುಗಳ ಮೂಲಕ ಜನರಿಗೆ ತಪ್ಪು ಮಾಹಿತಿ ನೀಡುತ್ತ, ಮೋಸ ಮಾಡುವ ಹಾದಿಯಲ್ಲಿದ್ದಾರೆ ಎಂದು ಆರೋಪಿಸಿದರು. 

ಸ್ವತ್ಛ ಭಾರತ ಎನ್ನುವ ದೊಡ್ಡ ಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಫೋಜು ನೀಡಿದ್ದಿರಿ. ಆದರೆ, ಆಯೋಜನೆ ಏನಾಗುತ್ತಿದೆ ಎನ್ನುವುದು ನಿಮಗೆ ತಿಳಿಯುತ್ತಿಲ್ಲ. ಕೇವಲ ಜನರನ್ನು ನಂಬಿಸಿದರೆ ಸಾಲುವುದಿಲ್ಲ. ಅದನ್ನು ಜನರು ಪ್ರಯೋಜನ ಪಡೆಯುವಂತೆ ಮಾಡಬೇಕು ಎಂದರು. 

Advertisement

ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ನಿರೀಕ್ಷಿತ ಉದ್ಯೋಗ ಸೃಷ್ಟಿ ಮಾಡಲಿಲ್ಲ. 2015 ಮತ್ತು 2016 ಏಪ್ರಿಲ್‌ನಿಂದ ಡಿಸೆಂಬರ್‌ ವರೆಗೆ 1.55 ಲಕ್ಷ ಉದ್ಯೋಗ ಸೃಷ್ಟಿ ಮಾಡಿದೆ. ಆದರೆ ಕೇಂದ್ರದಲ್ಲಿ ಮನಮೋಹನಸಿಂಗ್‌ ಸರಕಾರವಿದ್ದಾಗ 2009 ರಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಸಿತು. 

ಆ ಕಾರಣಕ್ಕಾಗಿ ಭಾರತದಲ್ಲಿ ಐಟಿ ಕ್ಷೇತ್ರದಲ್ಲಿ ಆರ್ಥಿಕ ಹಿಂಜರಿತದಿಂದ ನಿರುದ್ಯೋಗ ಭೀತಿ ಹೆಚ್ಚಾಗಿದೆ ಎಂದು ಹೇಳಿದರು. ಪ್ರಧಾನಿ ಮೋದಿರೈತರ ಸಾಲ ಮನ್ನಾ ಮಾಡಲು ಮೀನಾಮೇಷ ಎಣಿಸುತ್ತಿರುವಾಗ ವಿಜಯ ಮಲ್ಯ ಮತ್ತು ಲಲಿತ್‌ ಮೋದಿಯಂತವರು ಸುಮಾರು ಸಾವಿರಾರು ಕೋಟಿ ರೂ.ಗಳನ್ನು ಲಪಟಾಯಿಸಿ ವಿದೇಶಕ್ಕೆ ಪಲಾಯನಗೊಳ್ಳಲು ಅನುವು ಮಾಡಿಕೊಡಲಾಗಿದೆ ಎಂದು ದೂರಿದರು.

ನೋಟು ಅಮಾನ್ಯಿàಕರಣ ಮಾಡಿದ್ದರಿಂದ ಜನಸಾಮಾನ್ಯರಿಗೆ ಕಷ್ಟ ಹೆಚ್ಚಿದೆ ಎಂದು ಆಪಾದಿಸಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿನಾಥ ಪಾಟೀಲ ಸೊಂತ, ಭೀಮಣ್ಣ ಸಾಲಿ, ಚಂದ್ರಶೇಖರ ಸುಲ್ತಾನಪುರ, ಕಾರ್ಮಿಕ ವಿಭಾಗದ ಶಿವಕುಮಾರ ಬಾಳಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next