ಕೋಲ್ಕತ್ತಾ: 17ನೇ ಸೀಸನ್ ಐಪಿಎಲ್ ನ 28ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದೆ. ಟಾಸ್ ಗೆದ್ದಿರುವ ಕೆಕೆಆರ್ ತಂಡವು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಲಕ್ನೋ ತಂಡವು ಇಂದಿನ ಪಂದ್ಯಕ್ಕೆ ವಿಶೇಷ ಜೆರ್ಸಿಯೊಂದಿಗೆ ಆಡುತ್ತಿದೆ. ಹಸಿರು ಮತ್ತು ಮರೂನ್ ಜರ್ಸಿಯನ್ನು ಧರಿಸಿ ಇಂದಿನ ಪಂದ್ಯದಲ್ಲಿ ಆಡಲಿಳಿದಿದೆ.
ಸಾಮಾನ್ಯವಾಗಿ ಗಾಢ ನೀಲಿ ಬಣ್ಣಗಳನ್ನು ಹೊಂದಿರುವ ಫ್ರಾಂಚೈಸ್ ಸಂಜೀವ್ ಗೋಯೆಂಕಾ ಅವರ ಆರ್ ಪಿಎಸ್ ಜಿಗುಂಪಿನ ಒಡೆತನದಲ್ಲಿದೆ. ಇದು ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ನಲ್ಲಿ ಪ್ರತಿಷ್ಠಿತ ಮೋಹನ್ ಬಗಾನ್ ಸೂಪರ್ ಜೈಂಟ್ ಫುಟ್ಬಾಲ್ ಕ್ಲಬ್ ಅನ್ನು ಸಹ ಹೊಂದಿದೆ.
ಹೀಗಾಗಿ, ಐಎಸ್ಎಲ್ ಹಾಲಿ ಚಾಂಪಿಯನ್ ಆಗಿರುವ ಐಕಾನಿಕ್ ಕ್ಲಬ್ ಮತ್ತು ಕೋಲ್ಕತ್ತಾ ನಗರಕ್ಕೆ ಗೌರವಾರ್ಥವಾಗಿ ಎಲ್ಎಸ್ ಜಿ ಭಾನುವಾರ ವಿಭಿನ್ನ ಅವತಾರದಲ್ಲಿ ಆಡುತ್ತಿದೆ.
ಆರ್ ಪಿಎಸ್ ಜಿ ಗ್ರೂಪ್ 2020 ರ ಜನವರಿಯಲ್ಲಿ ಮೋಹನ್ ಬಗಾನ್ ಫುಟ್ಬಾಲ್ ಕ್ಲಬ್ ನಲ್ಲಿ ಹೆಚ್ಚಿನ ಷೇರುಗಳನ್ನು ಸ್ವಾಧೀನಪಡಿಸಿಕೊಂಡಿತು. ತಂಡವು ಐಎಸ್ಎಲ್ 2023 ಪ್ರಶಸ್ತಿಯನ್ನು ಗೆದ್ದ ನಂತರ, ಅದನ್ನು ಮೋಹನ್ ಬಗಾನ್ ಸೂಪರ್ ಜೈಂಟ್ ಎಂದು ಮರುನಾಮಕರಣ ಮಾಡಲಾಯಿತು.