Advertisement

ಕಳ್ಳರಂತೆ ಬಂದು ಹಿಂದು ದೇಗುಲ ಕೆಡುವುತ್ತಿರುವುದೇಕೆ?ಸಂಸದ ಪ್ರತಾಪ್‌ ಸಿಂಹ

12:40 PM Sep 13, 2021 | Team Udayavani |

ಮೈಸೂರು: ಅನಧಿಕೃತವಾಗಿ ನಿರ್ಮಾಣವಾದ ಧಾರ್ಮಿಕ ಕಟ್ಟಡಗಳು ಎಂದು ಹೇಳಿ ಶೇ.90 ರಷ್ಟು ಹಿಂದೂ ದೇಗುಲಗಳ ನೆಲಸಮ ಮಾಡುವ ಜಿಲ್ಲಾಡಳಿತ ಮತ್ತು ಪಾಲಿಕೆ ಕ್ರಮಕ್ಕೆ ಸಾರ್ವಜನಿಕರೂ ಸೇರಿದಂತೆ ಜನಪ್ರತಿನಿಧಿಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ.

Advertisement

ತೆರವು ಮಾಡಲು ಉದ್ದೇಶಿಸಿರುವ ದೇಗುಲಗಳ ಪಟ್ಟಿಯಲ್ಲಿರುವ ಅಗ್ರಹಾರದ 101 ನಗರದ ಗಣಪತಿ ದೇವಾಲಯದಲ್ಲಿ ಸಂಸದ ಪ್ರತಾಪ್‌ಸಿಂಹ, ಮೇಯರ್‌ ಸುನಂದಾ ಪಾಲನೇತ್ರ ಹಾಗೂ ಬಿಜೆಪಿ ನಗರಾಧ್ಯಕ್ಷ ಟಿ.ಎಸ್‌.ಶ್ರೀವತ್ಸ ಗಣೇಶನಿಗೆ ಪೂಜೆ ಸಲ್ಲಿಸಿ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದರು.

ಈ ವೇಳೆ ಮಾತನಾಡಿದ ಸಂಸದ ಪ್ರತಾಪ್‌ ಸಿಂಹ, ಅಧಿಕಾರಿಗಳು ಹಿಂದು ದೇಗುಲಗಳನ್ನೇ ಟಾರ್ಗೆಟ್‌ ಮಾಡುತ್ತಿರುವುದೇಕೆ ? ದರ್ಗಾ, ಚರ್ಚ್‌ಗಳನ್ನೇಕೆ ತೆರವು ಮಾಡ್ಲಿಲ್ಲ? ಎಂದು ಎಂದು ಆಕ್ರೋಶ ವ್ಯಕ್ತ ಪಡಿಸಿ ತೆರವು ಕಾರ್ಯಾಚರಣೆ ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ ದೇವಸ್ಥಾನ ಉಳಿಸಿ ಜನಾಂದೋಲನವನ್ನು ರಾಜ್ಯಾದ್ಯಂತ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.

ಮಧ್ಯರಾತ್ರಿ ವೇಳೆ ಕಳ್ಳರಂತೆ ಬಂದು ಹಿಂದು ದೇವಾಲಯಗಳನ್ನು ಕೆಡವುತ್ತಿದ್ದೀರಿ. ಜನರಿಲ್ಲದೆ ವೇಳೆ ಕಳ್ಳರು ದರೋಡೆ ಮಾಡುತ್ತಾರೆ. ಅದೇ ರೀತಿ ಇವರು ನಮ್ಮ ದೇವಸ್ಥಾನಗಳನ್ನು ಕೆಡವುತ್ತಿದ್ದಾರೆ. ಜನರ ಧಾರ್ಮಿಕ ಭಾವನೆಗಳೊಂದಿಗೆ ಆಟವಾಡಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಮ್ಮ ಹತ್ತಿರವೂ ಸುಪ್ರೀಂ ಕೋರ್ಟ್‌ ಆದೇಶ ಇದೆ. 2009ರಲ್ಲಿ ದೇವಸ್ಥಾನ, ಮಸೀದಿ ಮತ್ತು ಚರ್ಚ್‌ ತಲೆ ಎತ್ತಲು ಬಿಡಬೇಡಿ ಎಂದು ಕೋರ್ಟ್‌ ಆದೇಶಿಸಿದೆ.

ಆದರೂ, ನಗರದ ಕ್ಯಾತಮಾರನ ಹಳ್ಳಿಯಲ್ಲಿ ಮಸೀದಿ ತಲೆ ಎತ್ತಲು ಹೇಗೆ ಬಿಟ್ಟಿದ್ದೀರಾ? ಇದರಿಂದ ರಾಜು ಹತ್ಯೆ ನಡೆಯಿತು ಎಂದು ದೂರಿದರು. 101 ಗಣಪತಿ ದೇವಸ್ಥಾನವನ್ನು ಸೆ.21ರಂದು ನೆಲಸಮ ಮಾಡುತ್ತೇವೆ ಎಂದು ನೋಟಿಸ್‌ ನೀಡಿದ್ದಾರೆ. 1955ರಲ್ಲಿ ಈ ದೇವಸ್ಥಾನ ನಿರ್ಮಾಣವಾಗಿದೆ. ಇದನ್ನು ಯಾವುದೇ ಕಾರಣಕ್ಕೂ ತೆರವು ಮಾಡಲು ಬಿಡಲ್ಲ ಎಂದರು.

Advertisement

ಬಳೆಯನ್ನು ಅಬಲೆ ಸಂಕೇತ ಎಂದು ಬಳಸಬೇಡಿ..
ದರ್ಗಾ ತೆರವುಗೊಳಿಸಿದರೆ ಬಳೆ ತೊಟ್ಟು ಕೂರುವುದಿಲ್ಲ ಎಂಬ ಶಾಸಕ ತನ್ವೀರ್‌ ಸೇಠ್ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಾಪ್‌ ಸಿಂಹ, ಬಳೆ ತೊಡುವ ಹೆಣ್ಣಿನ ಬಗ್ಗೆ ತಾತ್ಸರ ಏಕೆ. ಹೆಣ್ಣು ಹಾಕಿಕೊಳ್ಳುವ ಬಳೆಯನ್ನು ಅಬಲೆಯ ಸಂಕೇತ ಎಂದು ಹೇಳಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನೀವು ಪ್ರೀತಿಸುವ ಹೈದರಾಲಿಯ ಸೈನಿಕರನ್ನು ಹೊಡೆ ದಿದ್ದು ಒನಕೆ ಓಬವ್ವ. ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಸಿದ್ದುಕಿತ್ತೂರು ಚೆನ್ನಮ್ಮ, ವೀರ ವನಿತೆ ಅಬ್ಬಕ್ಕನ ಸಾಹಸ ನಮಗೆ ಆದರ್ಶ. ಮಹಿಳೆಯನ್ನು ಆರಾಧಿಸುತ್ತೇವೆ. ತಾಯಿ ಚಾಮುಂಡಿ, ಭುವನೇಶ್ವರಿ ಕೂಡ ಹೆಣ್ಣೆ ಎಂದು ತಿರುಗೇಟು ನೀಡಿದರು. ಪೌರುಷ ತೋರಿಸಲು ಹೆಣ್ಣನ್ನು ಬುರ್ಖಾದೊಳಗೆ ಕೂಡಿಟ್ಟು, ಭೋಗಕ್ಕೆ ಬಳಸುವುದು ನಿಮ್ಮ ಧರ್ಮದ ಸಂಸ್ಕೃತಿ ಆಗಿರಬಹುದು. ಆದರೆ ನಮ್ಮ ಧರ್ಮದಲ್ಲಿ ಹೆಣ್ಣಿಗೆ ಪೂಜ್ಯನೀಯ ಗೌರವದ ಸ್ಥಾನವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next