Advertisement
ಭಾರತ ಮತ್ತು ಪಪುವಾ ನ್ಯೂಗಿನಿ ಭಾರತವು 27 ಎಪ್ರಿಲ್ 1996ರಲ್ಲಿ ಪಪುವಾ ನ್ಯೂಗಿನಿಯಲ್ಲಿ ಆಯೋಗವನ್ನು ಆರಂಭಿಸಿತು. ಇದಾದ ಹತ್ತು ವರ್ಷಗಳ ಬಳಿಕ 2006ರಲ್ಲಿ ಭಾರತದಲ್ಲಿ ನ್ಯೂಗಿನಿಯ ರಾಯಭಾರ ಕಚೇರಿ ತೆರೆಯಲಾಯಿತು. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪಪುವಾ ನ್ಯೂಗಿನಿಗೆ ಭೇಟಿ ನೀಡಿದ ಭಾರತದ ಮೊದಲ ರಾಷ್ಟ್ರಪತಿಯಾಗಿದ್ದರು. 2006ರಲ್ಲಿ ಪ್ರಣಬ್ ಮುಖರ್ಜಿ ಭೇಟಿ ನೀಡಿದ್ದರು.
ಪ್ರಧಾನಿ ಮೋದಿ ಸಹಿತ ಪೆಸಿಫಿಕ್‌ನ 14 ದ್ವೀಪ ರಾಷ್ಟ್ರಗಳ ನಾಯಕರು ಫಿಪಿಕ್ ಶೃಂಗದಲ್ಲಿ ಭಾಗವಹಿಸಿದ್ದಾರೆ. ಭಾರತದೊಂದಿಗೆ ಕ್ವಾಡ್ ರಾಷ್ಟ್ರಗಳಾದ ಆಸ್ಟ್ರೇಲಿಯ, ಜಪಾನ್ ಹಾಗೂ ಅಮೆರಿಕಕ್ಕೂ ಈ ಭೇಟಿ ಬಹಳ ಪ್ರಮುಖವಾಗಿದೆ. ಇದಕ್ಕೆ ಕಾರಣ ಚೀನ. ಆರ್ಥಿಕವಾಗಿ 1980ರಿಂದ ದ್ವೀಪದೊಂದಿಗೆ ಹೊಂದಿಕೊಂಡಿರುವ ಚೀನ ತನ್ನ ಆಕ್ರಮಣಕಾರಿ ವರ್ತನೆಯಿಂದ ಈ ದ್ವೀಪ ರಾಷ್ಟ್ರಗಳ ಮೇಲೆ ತನ್ನ ಪ್ರಭಾವವನ್ನು ಬೀರಲು ಪ್ರಯತ್ನಿಸುತ್ತಿದೆ. ಚೀನ ತನ್ನ “ಬೆಲ್ಟ್ ಆ್ಯಂಡ್ ರೋಡ್ ಇನಿಶಿಯೇಟಿವ್” ಅಡಿಯಲ್ಲಿ ಇಲ್ಲಿ ಹೂಡಿಕೆ ಮಾಡಿದೆ. ಚೀನದ ಬೆಳೆಯುತ್ತಿರುವ ಈ ಪ್ರಭಾವ ಭದ್ರ ತೆಯ ದೃಷ್ಟಿಯಿಂದ ದ್ವೀಪ ರಾಷ್ಟ್ರಗಳಿಗೆ ಅಪಾಯಕಾರಿಯಾಗಬಹುದು ಎಂದು ಊಹಿಸಲಾಗಿದೆ. ಅದಲ್ಲದೇ ಇಲ್ಲಿ ಯಥೇಚ್ಚವಾಗಿರುವ ಚಿನ್ನ ಹಾಗೂ ತಾಮ್ರದ ಸಂಪನ್ಮೂಲಗಳ ಮೇಲೂ ಚೀನ ಕಣ್ಣಿರಿಸಿದೆ.
Related Articles
Advertisement
ದ್ವೀಪ ರಾಷ್ಟ್ರ ಗಳಿಗೆ ಮೋದಿ ಘೋಷಿಸಿರುವ ಪ್ರಮುಖ ಯೋಜನೆಗಳು
ರಿಜಿನಲ್ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಹಾಗೂ ವಿವಿಧ ಆರೋಗ್ಯ ಸೇವೆ ಸೈಬರ್ ಟ್ರೈನಿಂಗ್ ಹಬ್
1 ಸಾವಿರ ಸಾಗರ ಅಮೃತ ಸ್ಕಾಲರ್‌ಶಿಪ್
ಸರಕಾರಿ ಕಚೇರಿಗಳಿಗೆ ಸೋಲಾರ್ ಪ್ರೊಜೆಕ್ಟ್ರ್
ಶುದ್ಧ ಕುಡಿಯುವ ನೀರಿನ ವ್ಯವಸ್ಥೆ
ಸಮುದ್ರ ಆ್ಯಂಬುಲೆನ್ಸ್
ಜನ ಔಷಧ ಕೇಂದ್ರ
ಯೋಗ ಕೇಂದ್ರ