ನವದೆಹಲಿ: “ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಒತ್ತಡದ ಹಿನ್ನೆಲೆಯಲ್ಲಿ ಟ್ವಿಟರ್‌ನಲ್ಲಿ ನನ್ನ ಫಾಲೋವರ್ಸ್‌ಗಳ ಸಂಖ್ಯೆ ಹೆಚ್ಚಾಗದಂತೆ ತಡೆಯಲಾಗುತ್ತಿದೆ’. – ಹೀಗೆಂದು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮೈಕ್ರೋಬ್ಲಾಗಿಂಗ್ ಜಾಲ ತಾಣದ ವಿರುದ್ಧ ಆರೋಪ ಮಾಡಿದ್ದಾರೆ.
ಇದನ್ನೂ ಓದಿ:ಪೊಲೀಸರ ಮೇಲೆ ಶಾಕಸರಿಂದ ಹಲ್ಲೆ? ಅವಾಚ್ಯ ನಿಂದನೆ ಆರೋಪ
ಜತೆಗೆ ಸಂಸ್ಥೆಯ ಸಿಇಒ ಪರಾಗ್ ಅಗರ್ವಾಲ್ ಅವರಿಗೆ ಕಟು ಶಬ್ದಗಳಲ್ಲಿ ಪತ್ರವನ್ನೂ ಗುರುವಾರ ಬರೆದಿದ್ದಾರೆ. ರಾಹುಲ್ ಅವರ ಪತ್ರದಲ್ಲಿನ ಅಂಶದ ಪ್ರಕಾರ, 2021ರ ಆಗಸ್ಟ್‌ನಲ್ಲಿ ಟ್ವಿಟರ್ ಫಾಲೋವರ್‌ಗಳ ಸಂಖ್ಯೆ 19.5 ದಶಲಕ್ಷ ಇದ್ದದ್ದು ಕುಸಿಯತೊಡಗಿದೆ. ಅದಕ್ಕಿಂತ ಮೊದಲು ಪ್ರತಿ ತಿಂಗಳಿಗೆ 2 ಲಕ್ಷ ಫಾಲೋವರ್‌ಗಳು ಸೇರ್ಪಡೆಯಾಗುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.
ಸದ್ಯ ಪ್ರತಿ ತಿಂಗಳಿಗೆ ಕೇವಲ 2,500 ಮಂದಿ ಹೊಸಬರು ತಮ್ಮನ್ನು ಫಾಲೋ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ನಿರ್ದೇಶನದ ಅನ್ವಯ, ನಿಯಂತ್ರಣ ಹೇರಲಾಗುತ್ತಿದೆ ಎಂದು ದೂರಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಟ್ವಿಟರ್‌ನ ವಕ್ತಾರರು “ಅನಪೇಕ್ಷಿತ ಖಾತೆಗಳು ಮತ್ತು ದ್ವೇಷಯುಕ್ತ ಅಂಶಗಳನ್ನು ಟ್ವಿಟರ್‌ನಲ್ಲಿ ತಡೆಯಲು ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ. ಈ ಸಂದರ್ಭದಲ್ಲಿ ಫಾಲೋವರ್‌ಗಳ ಸಂಖ್ಯೆಯಲ್ಲಿ ಏರಿಳಿಕೆ ಉಂಟಾಗುವುದು ಸಹಜ’ ಎಂದಿದ್ದಾರೆ.
ಒಪ್ಪಂದಕ್ಕೆ ಸಹಿ ಹಾಕಿಸಿದ ಬಿಜೆಪಿ
ಮಣಿಪುರ:ಪಕ್ಷಾಂತರ ಮಾಡಲ್ಲವೆಂದು ಗೋವಾದಲ್ಲಿ ಅಭ್ಯರ್ಥಿಗಳಿಂದ ಕಾಂಗ್ರೆಸ್ ದೇವರ ಮೇಲೆ ಪ್ರಮಾಣ ಮಾಡಿಸಿದ್ದು ಸುದ್ದಿಯಾದ ಬೆನ್ನಲ್ಲೇ ಈಗ ಮಣಿಪುರದಲ್ಲೂ ಇಂಥದ್ದೇ ಘಟನೆ ನಡೆದಿದೆ. ಪಕ್ಷಾಂತರ ತಪ್ಪಿಸಲು ಬಿಜೆಪಿ ತನ್ನ ನಾಯಕರಿಗೆ “ಸಹಕಾರದ ಒಪ್ಪಂದ’ಕ್ಕೆ ಸಹಿ ಹಾಕಿಸಿದೆ. ಪಕ್ಷಾಂತರ ಮಾಡದೇ ಪಕ್ಷದ ನಿರ್ಧಾರಕ್ಕೆ ಸಂಪೂರ್ಣ ಸಹ ಮತ ನೀಡುಮಣಿಪುರ ತ್ತೇವೆ ಎಂದು ಒಪ್ಪಂದ ದಲ್ಲಿ ಬರೆಯಲಾಗಿದೆ.