ಹೊಸದಿಲ್ಲಿ: ಗುಜರಾತ್ ಚುನಾವಣೆ ಪ್ರಚಾರದ ವೇಳೆ ಮಾಜಿ ಪ್ರಧಾನಿ ಮನ ಮೋಹನ್ ಸಿಂಗ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಆರೋಪದ ವಿವಾದವು ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಸಂಸತ್ ಅಧಿವೇಶನ ಆರಂಭವಾದಾಗಿ ನಿಂದಲೂ ಇದೇ ವಿಚಾರವನ್ನೆತ್ತಿಕೊಂಡು ಪ್ರತಿಪಕ್ಷಗಳು ಗದ್ದಲ ಎಬ್ಬಿಸುತ್ತಿವೆ.
ಮಂಗಳವಾರ ಸದನದಲ್ಲಿ ಇದೇ ವಿಚಾರ ಪ್ರಸ್ತಾಪಿ ಸಿದ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು. “ಮಾಜಿ ಪ್ರಧಾನಿ ಸಿಂಗ್ ಅವರು ಪಾಕಿಸ್ತಾನದೊಂದಿಗೆ ಕೈಜೋಡಿಸಿದ್ದಾರೆ ಎಂದು ಪ್ರಧಾನಿ ಮೋದಿ ಸುಳ್ಳು ಆರೋಪ ಮಾಡಿದ್ದಾರೆ. ಚುನಾವಣಾ ಪ್ರಚಾರಕ್ಕಾಗಿ ಈ ರೀತಿ ಸುಳ್ಳು ಹೇಳಲಾಗಿದೆ. ಆರೋಪ ನಿಜವೆಂದಾದರೆ, ಸಿಂಗ್ ವಿರುದ್ಧ ಇನ್ನೂ ಏಕೆ ಎಫ್ಐಆರ್ ದಾಖಲಿಸಿಲ್ಲ,’ ಎಂದು ಖರ್ಗೆ ಪ್ರಶ್ನಿಸಿದರು.
ರಾಜ್ಯಸಭೆಯಲ್ಲೂ ಪ್ರತಿಪಕ್ಷಗಳು ಇದನ್ನು ಪ್ರಸ್ತಾಪಿಸಿ, ಪ್ರಧಾನಿ ಮೋದಿ ಅವರು ಸದನಕ್ಕೆ ಆಗಮಿಸಿ, ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಬೇಕು ಹಾಗೂ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದವು. ಕೊನೆಗೆ ಈ ವಿವಾದವನ್ನು ಪರಿಹರಿಸುವ ನಿಟ್ಟಿನಲ್ಲಿ ಸಭಾಧ್ಯಕ್ಷರ ಸಲಹೆಯಂತೆ ಮಾತುಕತೆ ನಡೆಸಲು ಪ್ರತಿಪಕ್ಷಗಳು ಮತ್ತು ಆಡಳಿತಾ ರೂಢ ಪಕ್ಷ ಒಪ್ಪಿಗೆ ಸೂಚಿಸಿದವು.
ಕಂಪನಿ ತಿದ್ದುಪಡಿ ವಿಧೇಯಕ ಅಂಗೀಕಾರ: ಕಾರ್ಪೊರೇಟ್ ಆಡಳಿತ ಗುಣಮಟ್ಟವನ್ನು ಬಲ ಪಡಿ ಸುವ, ಸುಸ್ತಿದಾರ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ, ದೇಶದಲ್ಲಿ ಉದ್ದಿಮೆ ಸುಲಭವಾಗಿಸುವ ಅಂಶಗಳುಳ್ಳ ಕಂಪನಿ ಕಾಯ್ದೆಗೆ 40 ತಿದ್ದುಪಡಿಗಳನ್ನು ತರುವ ವಿಧೇಯಕ ರಾಜ್ಯಸಭೆಯಲ್ಲಿ ಮಂಗಳವಾರ ಅಂಗೀಕಾರಗೊಂಡಿದೆ.
4 ವರ್ಷಗಳಲ್ಲೇ ಹೆಚ್ಚು: ಪ್ರಸಕ್ತ ವರ್ಷ ಜಮ್ಮು-ಕಾಶ್ಮೀರದಲ್ಲಿ 203 ಉಗ್ರರನ್ನು ಸದೆಬ ಡಿಯಲಾಗಿದೆ. 37 ಮಂದಿ ನಾಗರಿಕರು ಉಗ್ರ ಸಂಬಂಧಿ ಕೃತ್ಯಗಳಿಗೆ ಬಲಿಯಾಗಿದ್ದಾರೆ. ಇವು ಕಳೆದ ನಾಲ್ಕು ವರ್ಷಗಳಲ್ಲೇ ಅತ್ಯಧಿಕ ಎಂದು ಸಚಿವ ಅಹಿರ್ ಮಾಹಿತಿ ನೀಡಿದ್ದಾರೆ.