ನವದೆಹಲಿ: ಟರ್ಕಿಯಲ್ಲಿ ಸದ್ಯದಲ್ಲೇ ಶುರುವಾಗಲಿರುವ ಬಾಕ್ಸಿಂಗ್ ವಿಶ್ವಚಾಂಪಿಯನ್‌ಶಿಪ್‌ಗೆ ಒಲಿಂಪಿಕ್ಸ್ ಕಂಚು ವಿಜೇತೆ ಲವ್ಲಿನಾ ಬೋರ್ಗೊಹೇನ್ ರನ್ನು ನೇರವಾಗಿ ಆಯ್ಕೆ ಮಾಡಿದ್ದೇಕೆ? ಹೀಗೆಂದು ಬಿಎಫ್ಐ ಗೆ ದೆಹಲಿ ಉಚ್ಚ ನ್ಯಾಯಾಲಯ ಪ್ರಶ್ನಿಸಿದೆ. ಇಂತಹ ಕ್ರಮಗಳಿಂದ ಇತರೆ ಆಟಗಾರರು ನೊಂದುಕೊಂಡರೇ ಅವರು ದೇಶಕ್ಕಾಗಿ ಏನು ಮಾಡಬಲ್ಲರು ಎಂದೂ ಕೇಳಿದೆ.
ಲವ್ಲಿನಾ ಬೋರ್ಗೊಹೇನ್ ಈ ಬಾರಿ ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದು ಅಮೋಘ ಸಾಧನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಯಾವುದೇ ಅರ್ಹತಾ ಸುತ್ತಿನ ಪಂದ್ಯಗಳನ್ನು ನಡೆಸದೇ ಅವರನ್ನೇ ಟರ್ಕಿ ವಿಶ್ವ ಚಾಂಪಿಯನ್ ಶಿಪ್‌ಗೆ ಆಯ್ಕೆ ಮಾಡಲಾಗಿದೆ.
ಇದನ್ನು ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್, 19 ವರ್ಷದ ಅರುಂಧತಿ ಚೌಧರಿ ಪ್ರಶ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿ ಉಚ್ಚ ನ್ಯಾಯಾಲಯ ಕೇಂದ್ರ ಕ್ರೀಡಾ ಸಚಿವಾಲಯಕ್ಕೂ ವಿವರಣೆ ಕೇಳಿ ನೋಟಿಸ್ ನೀಡಿದೆ.
ಇದನ್ನೂ ಓದಿ:ಸೆಮಿ ಪಂದ್ಯಕ್ಕೂ ಮುನ್ನ ಪಾಕ್ ಗೆ ಶಾಕ್: ಜ್ವರದಿಂದ ಬಳಲುತ್ತಿದ್ದಾರೆ ಇಬ್ಬರು ಆಟಗಾರರು
ಪ್ರಸ್ತುತ ಯುವ ಬಾಕ್ಸಿಂಗ್ ವಿಶ್ವ ಚಾಂಪಿ ಯನ್ ಕೂಡ ಆಗಿರುವ ಅರುಂ ಧತಿ ಚೌಧರಿಗೆ ಲವ್ಲಿನಾ ಬೋರ್ಗೊಹೇನ್‌ರನ್ನು ಪ್ರತಿವಾದಿಯಾಗಿ ಹೆಸರಿಸಲೂ ನ್ಯಾಯಪೀಠ ಅನುಮತಿ ನೀಡಿದೆ. ಈ ಕುರಿತ ಮುಂದಿನ ವಿಚಾರಣೆ ನ.22ರಂದು ನಡೆಯದೆ.