Advertisement

ದಲಿತ ನಾಯಕರೆಂದರೆ ಏಕೆ ಇಷ್ಟು ಅಸಹನೆ?: ಖರ್ಗೆ ಪರ ಬಿಜೆಪಿ ಸರಣಿ ಟ್ವೀಟ್!!

01:22 PM Jun 04, 2022 | Team Udayavani |

ಬೆಂಗಳೂರು: ದಲಿತ ನಾಯಕ ಖರ್ಗೆ ಅವರ ಮೇಲುಗೈ ಆಗುತ್ತದೆ ಎಂಬ ಭಯದಿಂದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರು ಹೊಂದಾಣಿಕೆಯ ನಾಟಕ ಮಾಡುತ್ತಿದ್ದಾರೆ. ದಲಿತ ನಾಯಕನೋರ್ವ ಸಿಎಂ ಆಗುತ್ತಾರೆ ಎನ್ನುವ ಭಯ ನಿಮ್ಮಲ್ಲಿ ಒಗ್ಗಟ್ಟಿನ ಮಂತ್ರ ಜಪಿಸುವಂತೆ ಮಾಡಿತೆ? ಎಂದು ಬಿಜೆಪಿ ಕಾಂಗ್ರೆಸ್ ಪಕ್ಷವನ್ನು ಟ್ವೀಟ್ ಗಳ ಮೂಲಕ ಟೀಕಿಸಿದೆ.

Advertisement

ಅಖಂಡ ಶ್ರೀನಿವಾಸ್ ಮೂರ್ತಿ ಮನೆಯ ಮೇಲೆ ಮತಾಂಧರು ದಾಳಿ ನಡೆಸಿದಾಗ ಕೈ ನಾಯಕರು ಕೈಕಟ್ಟಿ ಕುಳಿತಿದ್ದರು.ಮತಾಂಧರನ್ನು ಓಲೈಸಲು ದಲಿತರ ಮೇಲಿನ ದಾಳಿಯನ್ನೂ ಕಾಂಗ್ರೆಸ್‌ ಸಮರ್ಥಿಸಿಕೊಳ್ಳುತ್ತದೆ! ಎಂದು ಜರಿದಿದೆ.

ನಮ್ಮದು ದಲಿತಪರ ಪಕ್ಷ ಎನ್ನುವ ಕಾಂಗ್ರೆಸ್‌, ವಾಸ್ತವದಲ್ಲಿ ದಲಿತ ಸಮುದಾಯವನ್ನು ಮೇಲೇರಲು ಬಿಡುವುದೇ ಇಲ್ಲ.ಸಿಎಂ ಆಗಲಿದ್ದ ಪರಮೇಶ್ವರ್‌ ಅವರನ್ನು ಸೋಲಿಸಿದರು, ನಂತರ ಡಿಸಿಎಂ ಸ್ಥಾನದಿಂದಲೂ ಕಿತ್ತೆಸೆದರು, ಈಗ ಇವರ ದೃಷ್ಟಿ ಖರ್ಗೆ ಮೇಲೆ! ದಲಿತರನ್ನು ಸಿಎಂ ಮಾಡುವುದಿಲ್ಲ ಎಂದು ದಲಿತ ವಿರೋಧಿ ಕಾಂಗ್ರೆಸ್ ಪಣ ತೊಟ್ಟಿದೆಯೇ? ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ಪಠ್ಯಪುಸ್ತಕ ಸಮಿತಿ ರದ್ದು ಮಾಡಿಲ್ಲ, ಹೊಸ ಸಮಿತಿ ರಚನೆಯ ಅವಶ್ಯಕತೆಯಿಲ್ಲ: ಸಿಎಂ ಬೊಮ್ಮಾಯಿ

“ಮುಂದೆ ನೀವು ಸಿಎಂ ಆಗಲು ನಾವು ಸಹಕರಿಸುತ್ತೇವೆ” ಎಂದು ಖರ್ಗೆ ಅವರಿಗೆ ಜೆಡಿಎಸ್‌ ಹೇಳಿದ್ದು ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರಿಗೆ ಬರಸಿಡಿಲು ಬಡಿದಂತಾಗಿದೆ. 2013 ರಲ್ಲಿ ದಲಿತ ನಾಯಕ ಸಿಎಂ ಆಗುವುದನ್ನು ತಪ್ಪಿಸಿದ ಕಾಂಗ್ರೆಸ್‌ 2023 ಕ್ಕೂ ಅದೇ ತಂತ್ರ ಅನುಸರಿಸುತ್ತಿದೆ.
ದಲಿತ ನಾಯಕರೆಂದರೆ ಏಕೆ ಇಷ್ಟು ಅಸಹನೆ? ಎಂದು ಟ್ವೀಟ್ ನಲ್ಲಿ ಕಾಂಗ್ರೆಸ್ ಭಿನ್ನಮತದ ಕುರಿತು ಪ್ರಶ್ನಿಸಿದೆ.

Advertisement

ಸಿದ್ದರಾಮಯ್ಯ : 2013 – ಪರಮೇಶ್ವರ್ ಸೋಲಿಗೆ ಪಣ. ಸಿದ್ದರಾಮಯ್ಯ & ಡಿಕೆಶಿ : 2023 – ಖರ್ಗೆ ಕಟ್ಟಿಹಾಕಲು ಪಣ. ಒಬ್ಬ ದಲಿತ ನಾಯಕನನ್ನು ಹಿಮ್ಮೆಟ್ಟಿಸಲು ಎಷ್ಟೊಂದು ಉತ್ಸಾಹ!!! ಎಂದು ಸರಣಿ ಟ್ವೀಟ್ ಗಳ ಮೂಲಕ ಬಿಜೆಪಿ ಕಾಂಗ್ರೆಸ್ ಗೆ ಕುಟುಕಿದೆ.

ರಾಜ್ಯಸಭಾ ಚುನಾವಣೆ ವಿಚಾರದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಒತ್ತಾಸೆಯಂತೆ ಮಲ್ಲಿಕಾರ್ಜುನ ಖರ್ಗೆ ಅವರು ಹೈಕಮಾಂಡ್‌ ಮೂಲಕ ಮನ್ಸೂರ್‌ ಅಲಿ ಖಾನ್‌ ಅವರ ನಾಮಪತ್ರ ವಾಪಸ್‌ಗೆ ಪ್ರಯತ್ನಿಸಿದ್ದರು ಆದರೆ ಸಾಧ್ಯವಾಗಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next