Advertisement
ಈ ಮಧ್ಯೆ ಸುರೇಶ್ ರೈನಾ ಮತ್ತು ಇರ್ಫಾನ್ ಪಠಾಣ್ ಲೈವ್ ನಲ್ಲಿ ಭಾರತೀಯ ಆಟಗಾರರು ವಿದೇಶಿ ಕೂಟಗಳಲ್ಲಿ ಆಡುವ ಕುರಿತು ಚರ್ಚೆ ನಡೆಸಿದ್ದರು. ಭಾರತೀಯರಿಗೆ ವಿದೇಶದಲ್ಲಿ ಹೋಗಿ ಟಿ20 ಕೂಟ ಆಡಲು ಅವಕಾಶ ನೀಡಬೇಕೆಂದು ರೈನಾ ಹೇಳಿದ್ದರು. ಇದು ಈಗ ಚರ್ಚೆಗೆ ಗ್ರಾಸವಾಗಿದೆ.
Related Articles
Advertisement
ಟೀಂ ಇಂಡಿಯಾ ಹೊರತು ಪಡಿಸಿ ಬೇರೆ ಎಲ್ಲೂ ಇಂತಹ ಸಂಪ್ರದಾಯವಿಲ್ಲ. ಇತರ ಎಲ್ಲಾ ದೇಶಗಳ ಆಟಗಾರರು ನಮ್ಮ ಐಪಿಎಲ್ ನಲ್ಲಿ ಆಡುತ್ತಾರೆ. ಇಲ್ಲಿನ ಸ್ಪರ್ಧಾತ್ಮಕತೆ ಹೆಚ್ಚಾಗಿರುವ ಕಾರಣ ಉತ್ತಮ ಕ್ರಿಕೆಟ್ ಆಡುತ್ತಾರೆ. ಉಪಖಂಡದ ಪಿಚ್ ಗಳ ಬಗ್ಗೆ, ಹವಾಗುಣದ ಬಗ್ಗೆ ತಿಳಿದುಕೊಳ್ಳುತ್ತಾರೆ. ಅದು ಅವರಿಗೆ ರಾಷ್ಟ್ರೀಯ ತಂಡದಲ್ಲೂ ಉಪಯೋಗವಾಗುತ್ತದೆ.
ಇಂಗ್ಲೆಂಡ್ ತಂಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದ ಜೋಸ್ ಬಟ್ಲರ್ ಐಪಿಎಲ್ ನಲ್ಲಿ ಆರಂಭಿಕನಾಗಿ ಭರ್ಜರಿ ಯಶಸ್ಸು ಕಂಡರು. ನಂತರ ಇಂಗ್ಲೆಂಡ್ ತಂಡದಲ್ಲೂ ಆರಂಭಿಕ ಆಟಗಾರನಾದರು. ಕೇವಲ ಬೌಲರ್ ಆಗಿದ್ದ ಸುನೀಲ್ ನರೈನ್ ಐಪಿಎಲ್ ಕಾರಣದಿಂದ ಆಲ್ ರೌಂಡರ್ ಆದರು. ಐಪಿಎಲ್ ನಂತಹ ಕ್ರಿಕೆಟ್ ಕೂಟಗಳಿಂದ ಯುವ ಆಟಗಾರರು ಹಿರಿಯ ಆಟಗಾರರೊಂದಿಗೆ ಬಹಳಷ್ಟು ವಿಚಾರಗಳನ್ನು ಕಲಿಯುತ್ತಾರೆ. ಫಾರ್ಮ್ ಕಳೆದುಕೊಂಡಿರುವ ಆಟಗಾರ ಇಂತಹ ಕೂಟಗಳಲ್ಲಿ ಲಯಕ್ಕೆ ಮರಳುತ್ತಾರೆ. ಒಂದು ವೇಳೆ ಭಾರತೀಯ ಆಟಗಾರರು ವಿದೇಶಿ ಕೂಟಗಳಲ್ಲಿ ಆಡಿ ಉತ್ತಮ ಪ್ರದರ್ಶನ ತೋರಿದರೆ ಟೀಂ ಇಂಡಿಯಾಗೂ ಆಯ್ಕೆಯಾಗಬಹುದು.
ಒಂದು ವೇಳೆ ಬಿಸಿಸಿಐ ತನ್ನ ಆಟಗಾರರಿಗೆ ವಿದೇಶಿ ಕೂಟಗಳಲ್ಲಿ ಆಡಲು ಅವಕಾಶ ನೀಡಿದರೆ ಆಸ್ಟ್ರೇಲಿಯಾದ ಬಿಬಿಎಲ್, ಬಾಂಗ್ಲಾದೇಶದ ಬಿಪಿಎಲ್, ವೆಸ್ಟ್ ಇಂಡೀಸ್ ನ ಸಿಪಿಎಲ್ ಮುಂತಾದ ಪ್ರಮುಖ ಲೀಗ್ ಗಳು ಖಂಡಿತ ಅವಕಾಶ ನೀಡಬಹುದು.
ಆದರೆ ಇಲ್ಲಿ ಒಂದು ಸಮಸ್ಯೆಯೂ ಇದೆ. ಈ ಆಟಗಾರರು ವಿದೇಶಿ ಟಿ20 ಕೂಟದಲ್ಲಿ ಸಿಗುವ ಹಣ ಮೋಜಿನ ಕಾರಣದಿಂದ ಮತ್ತೆ ದೇಶಿಯ ತಂಡದಲ್ಲಿ ಸರಿಯಾದ ಪ್ರದರ್ಶನ ನೀಡುವುದಿಲ್ಲ. ವೆಸ್ಟ್ ಇಂಡೀಸ್ ಆಟಗಾರರನ್ನೇ ಇಲ್ಲಿ ಉದಾಹರಣೆಯಾಗಿ ಪರಿಗಣಿಸಬಹುದು.
ಕೀರ್ತನ್ ಶೆಟ್ಟಿ ಬೋಳ