Advertisement
ಸದ್ಯ ಆಡುತ್ತಿರುವ ಭಾರತೀಯ ಫುಟ್ಬಾಲ್ ಆಟಗಾರರ ಹೆಸರು ಹೇಳಿ ಎಂದರೆ ಹೆಚ್ಚಿನವರ ಪಟ್ಟಿ ಸುನೀಲ್ ಛೇಟ್ರಿ ಬಳಿಕ ನಿಲ್ಲುತ್ತಿದೆ. ಛೇಟ್ರಿ ಬಿಟ್ಟರೆ ಉಳಿದ ರಾಷ್ಟ್ರೀಯ ಆಟಗಾರರ ಹೆಸರೇ ಬಹುತೇಕರಿಗೆ ತಿಳಿದಿಲ್ಲ. ಕ್ರೀಡೆಯನ್ನು ಇಷ್ಟ ಪಡುವ ಈ ದೇಶದಲ್ಲಿ ಇದೊಂದು ದುರಂತವೇ ಸರಿ.
Related Articles
Advertisement
ಆದರೆ ಆ ಸಮಯ ಭಾರತೀಯ ಫುಟ್ಬಾಲ್ ನ ಸುವರ್ಣ ಯುಗ ಎಂದರೆ ತಪ್ಪಿಲ್ಲ. 1951ರ ಏಶ್ಯನ್ ಗೇಮ್ಸ್ ನಲ್ಲಿ ಭಾರತ ತಂಡ ಮೊದಲ ಚಿನ್ನ ಗಳಿಸಿತು. ಅದೂ ಶೂ ಧರಿಸಿ ಆಡಿದ್ದ ಇರಾನ್ ತಂಡವನ್ನು ಸೋಲಿಸಿ. 1956ರ ಮೆಲ್ಬರ್ನ್ ಒಲಿಂಪಿಕ್ಸ್ ನಲ್ಲಿ ಭಾರತ ಮೊದಲ ಸಲ ಸೆಮಿ ಫೈನಲ್ ಪ್ರವೇಶಿಸಿತು. (ಬೂಟ್ ಧರಿಸಿ ಆಡಿ). ಈ ಸಾಧನೆ ಮಾಡಿದ್ದ ಏಶ್ಯಾದ ಮೊದಲ ತಂಡವಾಗಿತ್ತು. ಆದರೆ 1960ರ ಕಾಲದ ಬಳಿಕ ಭಾರತ ಫುಟ್ಬಾಲ್ ನ ಬೆಳವಣಿಕೆ ಕುಂಠಿತವಾಯಿತು. ವಿಶ್ವದ ಇತರ ದೇಶಗಳು ಫುಟ್ಬಾಲ್ ನಲ್ಲಿ ವೇಗವಾಗಿ ಪ್ರಗತಿ ಸಾಧಿಸಿದರೂ ಭಾರತ ತುಂಬಾ ಹಿಂದೆಯೇ ಉಳಿಯಿತು
ಇತ್ತೀಚಿನ ದಿನಗಳಲ್ಲಿ ಭಾರತೀಯ ಫುಟ್ಬಾಲ್ ನಲ್ಲಿ ಭಾರೀ ಬದಲಾವಣೆಯಾಗಿದೆ. ಕಳೆದೊಂದು ದಶಕದಲ್ಲಿ ದೇಶದಲ್ಲೇ ಲೀಗ್ ಗಳು ಆರಂಭವಾಗಿ ಹೆಚ್ಚಿನ ಬೆಂಬಲವೂ ಸಿಗಲಾರಂಭಿಸಿದೆ. ಆದರೂ ಭಾರತದ ಫುಟ್ಬಾಲ್ ಗುಣಮಟ್ಟದಲ್ಲಿ ಹೆಚ್ಚಿನ ಸುಧಾರಣೆ ಕಂಡುಬಂದಿಲ್ಲ. ವಿಶ್ವಕಪ್ ಪ್ರವೇಶ ಎನ್ನುವುದು ಇನ್ನೂ ಮರೀಚಿಕೆಯೇ ಆಗಿದೆ.
2006 ರಲ್ಲಿ, ಆಗಿನ ಫಿಫಾ ಅಧ್ಯಕ್ಷ ಸೆಪ್ ಬ್ಲಾಟರ್ ಭಾರತವನ್ನು ಫುಟ್ಬಾಲ್ ಜಗತ್ತಿನ ‘ಮಲಗಿರುವ ದೈತ್ಯ’ ಎಂದು ಬಣ್ಣಿಸಿದ್ದರು. ಆದರೆ ಫಿಫಾ ವಿಶ್ವಕಪ್ ನಲ್ಲಿ ಆಡುವ ಅರ್ಹತೆ ಪಡೆಯಲು ಭಾರತೀಯ ಫುಟ್ಬಾಲ್ ಸಾಕಷ್ಟು ದೂರ ಸಾಗಬೇಕಿದೆ ಎಂಬುದು ಸತ್ಯ.
ಮೂಲಭೂತ ಸೌಕರ್ಯಗಳ ಕೊರತೆ ಮತ್ತು ದೂರದೃಷ್ಟಿ ಇಲ್ಲದಿರುವುದು ಭಾರತದಲ್ಲಿ ಫುಟ್ಬಾಲ್ ಬೆಳವಣಿಗೆಗೆ ಅಡ್ಡಿಯಾಗುವ ಎರಡು ದೊಡ್ಡ ಅಂಶಗಳು ಎಂದು ನಾವು ಪರಿಗಣಿಸಬಹುದು. ಭಾರತದ ಕೆಲವು ದೊಡ್ಡ ಕ್ಲಬ್ ಗಳು ಆಟಗಾರರಿಗೆ ಸರಿಯಾದ ತರಬೇತಿ ಮತ್ತು ವೈದ್ಯಕೀಯ ಸೌಲಭ್ಯ ವ್ಯವಸ್ಥೆ ಹೊಂದಿಲ್ಲ ಎಂದರೆ ನಂಬಲೇ ಬೇಕು. ಇದು ಖಂಡಿತವಾಗಿಯೂ ಭಾರತೀಯ ಫುಟ್ಬಾಲ್ ಸಂಸ್ಥೆಯ ವೈಫಲ್ಯ. ಇಷ್ಟೆಲ್ಲಾ ಆದರೂ ಅಂತಾರಾಷ್ಟ್ರೀಯ ಮಾನದಂಡಗಳನ್ನು ಪೂರೈಸುವ ಕನಿಷ್ಠ ಹತ್ತು ಕ್ರೀಡಾಂಗಣಗಳೂ ಭಾರತದಲ್ಲಿಲ್ಲ.
ಭಾರತದಲ್ಲಿ ಫುಟ್ಬಾಲ್ ಯಾಕೆ ಉನ್ನತಿ ಕಂಡಿಲ್ಲ ಎಂದರೆ ಪ್ರಮುಖ ಕಾರಣ ಕ್ರಿಕೆಟ್. ಭಾರತದಲ್ಲಿ ಕ್ರಿಕೆಟ್ ಆಟದ ಎದುರು ಉಳಿದ ಕ್ರೀಡೆಗಳು ಮಂಕಾಗಿ ಕಾಣಿಸುತ್ತದೆ ಎನ್ನುವುದು ಸತ್ಯವೇ. ಆದರೆ ಇದರ ನಡುವೆ ಜವಾಬ್ದಾರಿಯುತ ಸಂಸ್ಥೆಗಳು ಕಾಲ್ಚೆಂಡು ಆಟದ ಸರಿಯಾದ ಪ್ರಚಾರ ಮಾಡಿಲ್ಲ ಎನ್ನುವುದು ಕೂಡಾ ನಿಜವೇ. ಈಗಲೂ ಭಾರತೀಯ ಲೀಗ್ ಕೂಟದ ಕೋಲ್ಕತ್ತಾದಲ್ಲಿ ನಡೆಯುವ ಆಟದಲ್ಲಿ ಮಾತ್ರ ಸ್ಟೇಡಿಯಂ ತುಂಬಿರುತ್ತದೆ. ಉಳಿದದೆಲ್ಲಾ ನೀರಸವೇ.
ಭಾರತದಲ್ಲಿ ಕ್ರಿಕೆಟ್ ಹೊರತಾಗಿ ಆಟವನ್ನು ಕೆರಯರ್ ನಂತೆ ನೋಡುವುದು ತೀರಾ ಕಡಿಮೆ. ಕಷ್ಟವು ಹೌದು. ಕೆಲವೇ ಅಂತಾರಾಷ್ಟ್ರೀಯ ಪಂದ್ಯವಾಡಿದರೆ, ಅಥವಾ ಒಂದು ಐಪಿಎಲ್ ಆಡಿದರೆ ಆತನ ಲೈಫ್ ಸೆಟ್ ಆಗುತ್ತದೆ ಎಂಬ ನಂಬಿಕೆಯಿದೆ. ಆದರೆ ಜೀವವನ್ನೇ ಫುಟ್ಬಾಲ್ ಗೆ ಪಣಕ್ಕಿಟ್ಟರೂ ತಾನು ಹಣ ಗಳಿಸಬಹುದು ಎಂಬ ಖಾತ್ರಿ ಭಾರತದಲ್ಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಬಂಡವಾಳ ಆಕರ್ಷಣೆ ಇದ್ದರೂ ಭಾರತದಲ್ಲಿ ಇನ್ನೂ ಕಮರ್ಷಿಲ್ ಯಶಸ್ಸು ತಂದಿಲ್ಲ. ಇದೆಲ್ಲಾ ಆದರೆ ಯಾವುದೇ ಹಳ್ಳಿಯ ಬಾಲಕನೋರ್ವ ತಾನೂ ಫುಟ್ಬಾಲ್ ಆಟವನ್ನು ವೃತ್ತಿಯಾಗಿ ಪರಿಗಣಿಸಬಹುದು. ಭಾರತೀಯ ಫುಟ್ಬಾಲ್ ಬೆಳೆಯಬಹುದು. ಮುಂದೊಂದು ದಿನ ಫಿಫಾ ಫುಟ್ಬಾಲ್ ವಿಶ್ವಕಪ್ ನಲ್ಲಿ ಭಾರತೀಯ ಧ್ವಜವೂ ರಾರಾಜಿಸ ಬಹುದು.
ಕೀರ್ತನ್ ಶೆಟ್ಟಿ ಬೋಳ