Advertisement

Explained: ಹಾಲಿವುಡ್‌ ಗೆ ತಟ್ಟಿದ ಬೃಹತ್‌ ಮುಷ್ಕರದ ಬಿಸಿ…ಚಿತ್ರೀಕರಣ ಬಂದ್‌, ಏನಿದು?

05:15 PM Jul 14, 2023 | Team Udayavani |

ಜಗತ್ತಿನ ಶ್ರೀಮಂತ ಚಿತ್ರರಂಗವಾದ ಹಾಲಿವುಡ್‌ ಗೆ ಮುಷ್ಕರದ ಬಿಸಿ ಮುಟ್ಟಿದೆ.  ಹಾಲಿವುಡ್‌ ನ ಎರಡು ಯೂನಿಯನ್‌ ಜಂಟಿಯಾಗಿ ಮುಷ್ಕರ ಆರಂಭಿಸಿದ ಪರಿಣಾಮ ಸಿನಿಮಾ ನಿರ್ಮಾಣ ಹಾಗೂ ಫ್ಯೂಚರ್‌ ಪ್ರಾಜೆಕ್ಟ್‌ ಗಳು ನಿಂತು ಹೋಗಿದ್ದು, ಹಾಲಿವುಡ್‌ ಲೇಖಕರ ಮುಷ್ಕರಕ್ಕೆ ಇದೀಗ ನಟ, ನಟಿಯರು ಸಾಥ್‌ ನೀಡಿದ್ದಾರೆ.

Advertisement

ಇದನ್ನೂ ಓದಿ:INDvsWI: ಚೊಚ್ಚಲ ಶತಕದೊಂದಿಗೆ ಹಲವು ದಾಖಲೆ ಬರೆದ ಯಶಸ್ವಿ ಜೈಸ್ವಾಲ್

ಹಾಲಿವುಡ್‌ ನ ಸ್ಕ್ರೀನ್‌ Actors ಗಿಲ್ಡ್‌ (SAG) ವಾರ ಮಧ್ಯರಾತ್ರಿಯಿಂದ ಮುಷ್ಕರ ಆರಂಭಿಸುವುದಾಗಿ ಘೋಷಿಸಿದೆ. ಹಾಲಿವುಡ್‌ ಚಿತ್ರರಂಗದ ಇತಿಹಾಸದಲ್ಲಿ ನಡೆಯುತ್ತಿರುವ ಎರಡನೇ ಬೃಹತ್‌ ಮುಷ್ಕರ ಇದಾಗಿದ್ದು, ಈ ಮೊದಲು 1960ರಲ್ಲಿ ಹಾಲಿವುಡ್‌ ಯೂನಿಯನ್ಸ್‌ ಜಂಟಿಯಾಗಿ ಮುಷ್ಕರ ನಡೆಸಿತ್ತು. ಇತರ ಸಂದರ್ಭದಲ್ಲಿ ನಟರು ಮತ್ತು ಬರಹಗಾರರು ಪ್ರತ್ಯೇಕವಾಗಿ ಮುಷ್ಕರ ನಡೆಸಿತ್ತು.

ಹಾಲಿವುಡ್‌ ನಲ್ಲಿ ಮುಷ್ಕರಕ್ಕೆ ಕಾರಣವೇನು?

ತಮಗೆ ಉತ್ತಮ ವೇತನ, ಲಾಭಾಂಶದಲ್ಲಿ ನ್ಯಾಯೋಚಿತ ಪಾಲು, ಕಾರ್ಯಕ್ಷಮತೆಯ ಸುಧಾರಣೆ ಹಾಗೂ ತಮ್ಮ ಕೆಲಸವನ್ನು ಕಸಿಯುತ್ತಿರುವ ಎಐ(ಕೃತಕಬುದ್ದಿಮತ್ತೆ)ಯಿಂದ ರಕ್ಷಣೆ ನೀಡಬೇಕೆಂದು ಕೋರಿ ಸ್ಕ್ರೀನ್‌ ಆಕ್ಟರ್ಸ್‌ ಗಿಲ್ಡ್‌ ಮತ್ತು ಲೇಖಕರ ಒಕ್ಕೂಟ ಜಂಟಿಯಾಗಿ ಮುಷ್ಕರಕ್ಕೆ ಕರೆ ನೀಡಿದೆ. ಸ್ವ ನಿರ್ಮಿತ ಆಡಿಷನ್‌ ಕಳುಹಿಸುವ ನಟರಿಗೆ ಪರಿಹಾರ ನೀಡುವಂತೆ ಎಸ್‌ ಎಜಿ ಮನವಿ ಮಾಡಿಕೊಂಡಿದೆ.

Advertisement

ಮುಷ್ಕರಕ್ಕಾಗಿ ವೆಬ್‌ ಸೈಟ್‌ ನಿರ್ಮಿಸಿರುವ SAG, ಆಧುನಿಕ ಸಮಸ್ಯೆಗಳನ್ನು ಬಗೆಹರಿಸುವ ಆಧುನಿಕ ಕರಾರನ್ನು ಬಯಸುವುದಾಗಿ ತಿಳಿಸಿದೆ.

ಹಾಲಿವುಡ್‌ ನ ಎ ಲಿಸ್ಟ್‌ ಸ್ಟಾರ್‌ ಗಳು ಸೇರಿದಂತೆ ಬರೋಬ್ಬರಿ 1,60,000 ಕಲಾವಿದರನ್ನು ಹೊಂದಿರುವ ಎಸ್‌ ಎಜಿ ಮತ್ತು AFTRA ಪ್ರೊಡಕ್ಷನ್‌ ಕಂಪನಿಗಳ ಜೊತೆ ಮಾತುಕತೆ ನಡೆಸಿತ್ತು. ಅಲ್ಲದೇ ಲೇಖಕರಿಗೆ ಮತ್ತು ನಟರಿಗೆ ನೀಡುವ ರಾಯಲ್ಟಿ ಹಣದ ಪಾವತಿಯಲ್ಲಿಯೂ ಇಳಿಕೆಯಾಗಿದೆ ಎಂದು ಎಸ್‌ ಎಜಿ ದೂರಿದೆ.

ಸ್ಕ್ರೀನ್‌ Actors ಗಿಲ್ಡ್‌ (SAG) ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ AMPTP (alliance of Motion pictures and Television producers) ವಿರುದ್ಧ ಮುಷ್ಕರ ನಡೆಸುತ್ತಿದೆ. ನಾವು ಹಾಲಿವುಡ್‌ ಸ್ಟುಡಿಯೋಸ್‌ ಬಗ್ಗೆ ಒಳ್ಳೆಯ ನಂಬಿಕೆಯನ್ನು ಇಟ್ಟಿದ್ದೇವು. ಅವರು ನಮ್ಮ ಅಳಲನ್ನು ಕೇಳಿ, ಪರಿಹಾರ ನೀಡುತ್ತಾರೆಂಬ ವಿಶ್ವಾಸ ಹೊಂದಿದ್ದೇವು. ಆದರೆ ಅವರು ನಮ್ಮ ಸಭೆಯನ್ನು ರದ್ದುಗೊಳಿಸಿದ್ದು, ಇದರಿಂದಾಗಿ ಮುಷ್ಕರಕ್ಕೆ ಮುಂದಾಗಿರುವುದಾಗಿ ಎಸ್‌ ಎಜಿ ತಿಳಿಸಿದೆ.

ಮುಷ್ಕರದಿಂದ ನಟರಿಗೂ ಸಂಕಷ್ಟ!

ಹಾಲಿವುಡ್‌ ನ ಟಾಪ್‌ ಸ್ಟಾರ್‌ ನಟರು ಸೇರಿದಂತೆ ಎಸ್‌ ಎಜಿಯಲ್ಲಿ ಸುಮಾರು 1,60,000 ಕಲಾವಿದರಿದ್ದಾರೆ. ಮುಷ್ಕರದ ಹಿನ್ನೆಲೆಯಲ್ಲಿ SAG ಸದಸ್ಯರು ಕ್ಯಾಮರಾ ಕೆಲಸವಾಗಲಿ, ನಟನೆ, ನೃತ್ಯ, ಸಂಗೀತ, ಧ್ವನಿ ಕಲಾವಿದರು ಸೇರಿದಂತೆ ಯಾರೂ ಕೂಡಾ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿಲ್ಲ. ಹಾಲಿವುಡ್‌ ನಟ, ನಟಿಯರು ಕೂಡಾ ತಮ್ಮ ಸಿನಿಮಾಗಳ ಪ್ರಚಾರ ಕಾರ್ಯಕ್ಕೆ ಹಾಜರಾಗುತ್ತಿಲ್ಲ. ಸಂದರ್ಶನ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿಯೂ ಭಾಗಿಯಾಗುತ್ತಿಲ್ಲ. ಇದರ ಪರಿಣಾಮ ಯಾವುದೇ ಸಿನಿಮಾ ಚಿತ್ರೀಕರಣವಾಗಲಿ, ಚಿತ್ರ ನಿರ್ಮಾಣ ಕಾರ್ಯ ಸ್ಥಗಿತಗೊಂಡಂತಾಗಿದೆ.

AMPTP ಪ್ರತಿಕ್ರಿಯೆ ಏನು?

ಮುಷ್ಕರ ನಮ್ಮ ನಿರೀಕ್ಷೆಯದ್ದಾಗಿಲ್ಲ, ಆದರೂ ನಮ್ಮ ಟಿವಿ ಕಾರ್ಯಕ್ರಮ ಮತ್ತು ಸಿನಿಮಾಗಳಿಗೆ ಜೀವತುಂಬುವ ನಟರು, ಲೇಖಕರು, ತಂತ್ರಜ್ಞರು ಇಲ್ಲದೇ ಸ್ಟುಡಿಯೋಗಳು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಒಕ್ಕೂಟವು ಉದ್ಯಮವನ್ನು ಅವಲಂಬಿಸಿಕೊಂಡಿರುವ ಸಾವಿರಾರು ಜನರಿಗೆ ಆರ್ಥಿಕ ಸಂಕಷ್ಟವನ್ನು ತಂದೊಡ್ಡುವ ಮುಷ್ಕರದ ಆಯ್ಕೆಯ ಹಾದಿ ಹಿಡಿದಿರುವುದು ವಿಷಾದದ ಸಂಗತಿ ಎಂದು ನಿರ್ಮಾಪಕರ ಒಕ್ಕೂಟ ಪ್ರಕಟನೆಯಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next